ಮಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಕಾಂಗ್ರೆಸ್ ಸದಸ್ಯರ ಆಕ್ಷೇಪ| ಬಿಜೆಪಿ ಸದಸ್ಯರ ಟಾಂಗ್!

ಮಂಗಳೂರು: ನಗರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಗೆ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದ್ದಾರೆ.

ಎಂಸಿಸಿ, ಛತ್ರಪತಿ ಶಿವಾಜಿ ಮರಾಠ ಅಸೋಸಿಯೇಷನ್‌ನ ಬೇಡಿಕೆಯನ್ನು ಪರಿಗಣಿಸಿ ನಗರದ ಮಹಾವೀರ್ ವೃತ್ತದಲ್ಲಿ (ಪಂಪ್‌ವೆಲ್ ವೃತ್ತ) ಶಿವಾಜಿ ಪ್ರತಿಮೆ ಸ್ಥಾಪಿಸುವ ಬಗ್ಗೆ ಅಕ್ಟೋಬರ್ 29 ರಂದು ತನ್ನ ಸಭೆಯಲ್ಲಿ ಅನುಮೋದಿಸಿತ್ತು. ಪ್ರತಿ ಪಕ್ಷದ ನಾಯಕ ನವೀನ್ ಡಿಸೋಜಾ ಅವರು ಬುಧವಾರ ಕೌನ್ಸಿಲ್ ಸಭೆಯಲ್ಲಿ ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಲುವನ್ನು ಎತ್ತಿ ಹಿಡಿದ ಕ್ರಮವನ್ನು ವಿರೋಧ ಮಾಡಿದರು.

ಯಾಕಂದ್ರೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶಾಂತಿ ಕದಡಲು ಎಂಇಎಸ್ ಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ಶಿವಾಜಿ ಪ್ರತಿಮೆಯನ್ನು ಸ್ಥಾಪನೆ ಮಾಡುವುದು ಸರಿಯಲ್ಲ. ಆದರೆ ಇದಕ್ಕೆ ಬದಲಾಗಿ ಬೇರೊಂದು ಸಲಹೆ ನೀಡಿದರು. ಶಿವಾಜಿ ಪ್ರತಿಮೆಯ ಬದಲು ತುಳುನಾಡಿನ ಅವಳಿ ಯೋಧರಾದ ಕೋಟಿ-ಚೆನ್ನಯರ ಪ್ರತಿಮೆಯನ್ನು ಸ್ಥಾಪನೆ ಮಾಡಬಹುದು ಎಂದು ಹೇಳಿದರು.

ಹಾಗೂ ಛತ್ರಪತಿ ಶಿವಾಜಿ ಹೆಸರನ್ನು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತಗೊಳಿಸಬಾರದು ಎಂದು ಪಕ್ಷದ ಕಾರ್ಪೊರೇಟರ್‌ಗಳು ಹೇಳಿದರು. ಈ ವೇಳೆ ಕಾರ್ಪೊರೇಟರ್‌ಗಳ ನಡುವೆ ವಾಗ್ದಾಳಿ ನಡೆದಿದೆ. ಇದು ಮುಂದುವರಿದಾಗ ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರು ಪ್ರಸ್ತಾವನೆಗೆ ಕಳೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಾಗೂ ಪ್ರತಿಪಕ್ಷಗಳ ಆಕ್ಷೇಪಣೆಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಅಲ್ಲದೆ, ಕಾಂಗ್ರೆಸ್ ಸದಸ್ಯ ಶಶಿಧರ ಹೆಗಡೆ ಅವರು, ಕರಾವಳಿ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಧಕರೊಬ್ಬರ ಪ್ರತಿಮೆಯನ್ನು ಪರಿಗಣಿಸಬೇಕು ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ಸದಸ್ಯರ ಈ ಮಾತಿಗೆ ಬಿಜೆಪಿ ಸದಸ್ಯರು ಪ್ರತಿಮಾತು ನೀಡಿದ್ದಾರೆ. ಹಿಂದೂ ನಾಯಕರನ್ನು ವಿರೋಧಿಸುವುದು ಕಾಂಗ್ರೆಸ್ ಗೆ ಅಭ್ಯಾಸವಾಗಿದೆ ಎಂದು ಹೇಳಿದರು.

Leave A Reply

Your email address will not be published.