Children heart Attack : 13 ವರ್ಷದ ಬಾಲಕ ಶಾಲೆಯಲ್ಲೇ ಕುಸಿದುಬಿದ್ದು ಸಾವು | ಹಠಾತ್ ಹೃದಯಾಘಾತ

Share the Article

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ. ಹೃದಯ ಸಂಬಂಧಿ ಸಮಸ್ಯೆಗಳು ಹಿರಿಯರು ಮಾತ್ರವಲ್ಲದೇ ಈಗ ಪುಟ್ಟ ಪುಟ್ಟ ಮಕ್ಕಳು ಕೂಡಾ ಹೃದಯಾಘಾತಕ್ಕೆ ಬಲಿಯಾಗುವ ಸರಣಿ ರಾಜ್ಯದಲ್ಲಿ ಮುಂದುವರಿದೆ. ೧೩ ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಕಲಘಟಗಿಯಲ್ಲಿ ಸಂಭವಿಸಿದೆ.

ರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೆಯ ತರಗತಿ ಓದುತ್ತಿದ್ದ ಬಾಲಕ ಮಕ್ತುಮ್ ಮಹ್ಮದ್‌ರಫಿ ಮನಿಯಾರ್ (13), ಗುರುವಾರ ಶಾಲೆಯಲ್ಲಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದ. ಕೂಡಲೇ ಶಿಕ್ಷಕರು ಆತನನ್ನು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ, ಅಷ್ಟು ಹೊತ್ತಿಗೆ ಮತ್ತುಮ್ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾನೆ. ಮಕ್ತುಮ್ ಕೆಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ.

Leave A Reply