ಒದ್ದೆ ಕಾಲು ಚೀಲ ಹಾಕಿಕೊಂಡು ಮಲಗಿದರೆ ಇಷ್ಟೆಲ್ಲಾ ಪ್ರಯೋಜನಗಳು ಉಂಟು!
ಚಳಿಗಾಲದಲ್ಲಿ ಬೆಚ್ಚಗಿರಲು ಸ್ವೆಟರ್, ಸಾಕ್ಸ್’ಗಳನ್ನು ಹಾಕಿಕೊಳ್ಳುತ್ತೇವೆ. ಎಲ್ಲಾದರೂ ಹೊರಗಡೆ ಹೋದಾಗ ಶೂ ಗಳೊಂದಿಗೆ ಸಾಕ್ಸ್(ಕಾಲುಚೀಲ) ಧರಿಸಿರುವುದು ನೋಡಿದ್ದೇವೆ. ಆದರೆ ಈ ಸಾಕ್ಸ್’ಗಳನ್ನು ಧರಿಸುವುದರಿಂದ ನಮ್ಮ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ ಎಂದರೆ ನಂಬುತ್ತೀರಾ? ಅಚ್ಚರಿ ಎನಿಸಿದರೂ ನಿಜ. ಬೇರೆ ಬೇರೆ ನೈಸರ್ಗಿಕ ದ್ರವಗಳಲ್ಲಿ ಕಾಲು ಚೀಲಗಳನ್ನು ನೆನೆಸಿ ಹಾಕಿಕೊಳ್ಳುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಬಗೆಹರಿಯುತ್ತವೆ. ಕಾಲು ಚೀಲದಿಂದಾಗುವ ಆರೋಗ್ಯ ಪ್ರಯೋಜನಗಳ ಕುತೂಹಲ ಮಾಹಿತಿ ಇಲ್ಲಿದೆ.
ಮಲಬದ್ಧತೆ:- ಅರ್ಧ ಸೇಬು ಹಣ್ಣು ತೆಗೆದುಕೊಂಡು ಜೊತೆಗೆ ಅರ್ಧ ಪೀಸ್ ಚೀಸ್, ಒಂದು ಟೇಬಲ್ ಚಮಚ ಜೇನುತುಪ್ಪ ಮತ್ತು ಒಂದು ಟೀ ಚಮಚ ಫ್ಲ್ಯಾಕ್ಸ್ ಸೀಡ್ಸ್ ಎಲ್ಲವನ್ನು ಒಂದು ಬೌಲ್ ನಲ್ಲಿ ಹಾಕಿ ಅದಕ್ಕೆ ಒಂದು ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಸಲ್ಯೂಷನ್ ನಲ್ಲಿ ನಿಮ್ಮ ಉಲ್ಲನ್ ಸಾಕ್ಸ್ ನೆನೆ ಹಾಕಿ ಹೆಚ್ಚುವರಿ ನೀರನ್ನು ಹಿಂಡಿ. ಇದನ್ನು ನಿಮ್ಮ ಕಾಲುಗಳಿಗೆ ಹಾಕಿಕೊಳ್ಳುವುದರಿಂದ ಮತ್ತು ಈ ಪ್ರಕ್ರಿಯೆಯನ್ನು ಪ್ರತಿ ದಿನ ಮುಂದುವರಿಸುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಜ್ವರ:- ಜ್ವರ ಬಂದಾಗ ಹಣೆ ಮೇಲೆ ತಣ್ಣೀರು ಬಟ್ಟೆ ಹಾಕುವುದು ಸಾಮಾನ್ಯ. ಆದರೆ ಕಾಲು ಚೀಲದಿಂದಲೂ ನಮ್ಮ ಜ್ವರವನ್ನು ದೂರ ಮಾಡಬಹುದು. ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಎರಡು ಗ್ಲಾಸ್ ನೀರು ಮತ್ತು ಒಂದು ಟೇಬಲ್ ಚಮಚ ವಿನೆಗರ್ ಹಾಕಿ. ನಿಮ್ಮ ಉಲ್ಲನ್ ಸಾಕ್ಸ್ ಗಳನ್ನು ಇದರಲ್ಲಿ ನೆನೆ ಹಾಕಿಬಿಡಿ. ಸ್ವಲ್ಪ ಹೊತ್ತು ಬಿಟ್ಟು ಹೊರತೆಗೆದು ಹೆಚ್ಚುವರಿ ನೀರನ್ನು ಹಿಂಡಿ ಅವುಗಳನ್ನು ನಿಮ್ಮ ಕಾಲುಗಳಿಗೆ ಹಾಕಿಕೊಳ್ಳಿ. ಜ್ವರದ ಮಾತ್ರೆ ನುಂಗಿದ ಮೇಲೆ ಈ ಟ್ರಿಕ್ ನೀವು ಅನುಸರಿಸುವುದರಿಂದ ನಿಮ್ಮ ದೇಹದ ತಾಪಮಾನ 40 ನಿಮಿಷಗಳಲ್ಲಿ ಕಡಿಮೆಯಾಗುತ್ತದೆ.
ಇಲ್ಲಿ ವಿನೆಗರ್ ನಿಮ್ಮ ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತದೆ.
ಕೆಮ್ಮು:- ಕೆಮ್ಮಿನ ಸಮಸ್ಯೆಯಿದ್ದರೆ, ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಎರಡು ಕಪ್ ಹಾಲು ಹಾಕಿ ಒಂದು ಟೀ ಚಮಚ ಜೇನುತುಪ್ಪ ಮತ್ತು ಎರಡು ದೊಡ್ಡ ಗಾತ್ರದ ಈರುಳ್ಳಿ ಗಳನ್ನು ಹೆಚ್ಚಿ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಡಬೇಕು. ಇದರಲ್ಲಿ ನಿಮ್ಮ ಕಾಲು ಚೀಲಗಳನ್ನು ನೆನೆ ಹಾಕಿ ಹೆಚ್ಚುವರಿ ನೀರನ್ನು ಹಿಂಡಿ ಕಾಲುಗಳಿಗೆ ಹಾಕಿಕೊಳ್ಳಬೇಕು. ಈರುಳ್ಳಿ ಮಿಶ್ರಣ ಮಾಡಿದ ಹಾಲಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳಿವೆ. ಇದರಿಂದ ಎದೆಯಲ್ಲಿನ ಕಫವನ್ನು ಇದು ಕರಗಿಸುತ್ತದೆ ಮತ್ತು ಕೆಮ್ಮನ್ನು ನಿವಾರಣೆ ಮಾಡುತ್ತದೆ. ನಿಮ್ಮ ಎರಡು ಕಾಲಿನ ಕಾಲು ಚೀಲಗಳನ್ನು ನೆನೆಸಿ ಪ್ರತಿದಿನ ಹಾಕಿಕೊಂಡು ಮಲಗುವುದರಿಂದ ನಿಮ್ಮ ವಿಪರೀತ ಕೆಮ್ಮಿನ ಸಮಸ್ಯೆ ಪರಿಹಾರವಾಗುತ್ತದೆ.
ಜೀರ್ಣಕ್ರೀಯೆ:- ಸೋಂಪು ಕಾಳುಗಳನ್ನು ಸ್ವಲ್ಪ ಹೊತ್ತು ಕುದಿಸಿ ಅದಕ್ಕೆ ಓಂಕಾಳುಗಳನ್ನು ಸೇರಿಸಿ 15 ನಿಮಿಷ ಹಾಗೆ ಬಿಡಬೇಕು. ನಂತರ ಕಾಲು ಚೀಲಗಳನ್ನು ಇದರಲ್ಲಿ ಹಾಕಿ 15 ನಿಮಿಷ ನೆನೆಸಿ, ಹೆಚ್ಚುವರಿ ನೀರನ್ನು ಹಿಂಡಿ ಕಾಲುಗಳಿಗೆ ಧರಿಸುವುದರಿಂದ ನಿಮ್ಮ ಜೀರ್ಣಶಕ್ತಿ ವೃದ್ಧಿಸುತ್ತದೆ ಮತ್ತು ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ. ನಿಮ್ಮ ಹೊಟ್ಟೆಯ ಭಾಗದ ಸೋಂಕು ಕೂಡ ಕಡಿಮೆಯಾಗಿ ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ವೃದ್ಧಿಸುತ್ತದೆ.
ಇದಲ್ಲದೇ ನೆನೆಸಿದ ಕಾಲು ಚೀಲ ಹಾಕಿಕೊಂಡು ರಾತ್ರಿ ಹೊತ್ತು ಮಲಗಿಕೊಳ್ಳುವುದರಿಂದ ನಿಮ್ಮ ದೇಹದ ತಾಪಮಾನ ಮಾತ್ರವಲ್ಲದೇ ನಿಮ್ಮ ರಕ್ತದ ಒತ್ತಡ ಕೂಡ ಸಮತೋಲನ ಸ್ಥಿತಿಗೆ ಬರುತ್ತದೆ. ಹಾಗಾದರೆ ನೀವು ಒಮ್ಮೆ ಈ ರೀತಿಯ ಟ್ರಿಕ್ಸ್ ಟ್ರೈ ಮಾಡಿ ಉತ್ತಮ ಫಲಿತಾಂಶ ಪಡೆಯಿರಿ.