ಊಟದ ಜೊತೆಗೆ ಸೌತೆಕಾಯಿ ತಿನ್ನುತ್ತಿದ್ದರೆ ಈಗಲೇ ಬಿಟ್ಟು ಬಿಡಿ| ಇದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಏನು ಗೊತ್ತಾ?

ಸೌತೆಕಾಯಿ ನಮ್ಮ ದೇಹಕ್ಕೆ ತುಂಬಾ ತುಂಬಾ ಉತ್ತಮವಾದ ತರಕಾರಿ ಅಂತ ಹೇಳಿದರೆ ತಪ್ಪಾಗಲಾರದು.ಹಾಗಂತ ಇದನ್ನು ಹೆಚ್ಚಾಗಿ ಕೂಡ ಸೇವಿಸಿದರೆ ಅನಾರೋಗ್ಯವನ್ನು ಕೂಡ ಉಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ. ಕೆಲವು ಜನರು ಡಯೆಟ್ ಅಂತ ದಿನಕ್ಕೆ ಎಂಟರಿಂದ ಹತ್ತು ಸೌತೆಕಯಿಯನ್ನು ತಿನ್ನುತ್ತಾರೆ. ಹಾಗೆ ಇದನ್ನು ಸೇವಿಸುವುದರಿಂದ ಹಲವಾರು ಲಾಭಗಳು ದೊರೆಯುತ್ತವೆ. ಅತಿಯಾದರೆ ಅಮೃತವು ವಿಷ ಎಂಬ ಮಾತಿನಂತೆ ಇದನ್ನು ಹೆಚ್ಚಿನ ಮಟ್ಟದಲ್ಲಿ ಸೇವನೆ ಮಾಡಿದರೆ ಅನಾರೋಗ್ಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಸೌತೆಕಾಯಿಯನ್ನು ಸಲಾಡ್‌’ಗಳ ರಾಜ ಎಂದೇ ಕರೆಯುತ್ತಾರೆ. ಹಸಿಯಾಗಿ ತಿನ್ನೋದು ಅಥವಾ ಜೊತೆ ತಿನ್ನಲು ಬಹಳಷ್ಟು ಜನರು ಇಷ್ಟಪಡುತ್ತಾರೆ. ಸೌತೆಕಾಯಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ತರಕಾರಿಯಾಗಿದ್ದೂ ಹೆಚ್ಚಾಗಿ ತೂಕವನ್ನು ಕಳೆದುಕೊಳ್ಳುವ ಜನರು ಸೌತೆಕಾಯಿಯನ್ನು ತಿನ್ನಲು ಸಲಹೆ ನೀಡುತ್ತಾರೆ, ಏಕೆಂದರೆ ಸೌತೆಕಾಯಿಯು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ ಅದು ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಅನೇಕರು ಸೌತೆಕಾಯಿಯನ್ನು ಮಧ್ಯಾಹ್ನ ಅಥವಾ ರಾತ್ರಿ ಊಟದ ಸಮಯದಲ್ಲಿ ತಿನ್ನುತ್ತಾರೆ. ಆದರೆ ಹಾಗೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ಈ ಬಗ್ಗೆ ಆಯುರ್ವೇದ ತಜ್ಞ ಡಾ.ಅಲ್ಕಾ ವಿಜಯನ್ ಅವರು ಇತ್ತೀಚೆಗೆ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ತಾನು ಎಂದಿಗೂ ಸೌತೆಕಾಯಿಯನ್ನು ಆಹಾರದೊಂದಿಗೆ ತಿನ್ನುವುದಿಲ್ಲ ಮತ್ತು ತನ್ನ ರೋಗಿಗಳಿಗೆ ಸಲಹೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಊಟದ ಜೊತೆ ತಿನ್ನದಂತೆ ತಮ್ಮ ರೋಗಿಗಳಿಗೆ ಯಾಕಾಗಿ ಸಲಹೆ ನೀಡುತ್ತಾರೆ ಇದರ ಹಿಂದಿನ ಕಾರಣವೇನು? ಎಂಬುದನ್ನು ತಿಳಿದುಕೊಳ್ಳೋಣ.

ದುರ್ಬಲ ಜೀರ್ಣಕಾರಿ ಹೊಂದಿರುವ ಕೆಲವರು ಸೌತೆಕಾಯಿಯನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಏಕೆಂದರೆ ಅದರಲ್ಲಿ ಕಂಡುಬರುವ ಕುಕುರ್ಬಿಟಾಸಿನ್ ಅಜೀರ್ಣಕ್ಕೆ ಕಾರಣವಾಗಬಹುದು. ಇದು ಗ್ಯಾಸ್ ಮತ್ತು ವಾಯು ಮುಂತಾದ ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸೌತೆಕಾಯಿಗಳ ತುದಿಯಲ್ಲಿ ಕಂಡುಬರುವ ಕುಕುರ್ಬಿಟಾಸಿನ್‌ಗಳನ್ನು ತೆಗೆದುಹಾಕುವ ಮೂಲಕ, ನೀವು ಸೌತೆಕಾಯಿಯ ಉಳಿದ ಭಾಗಕ್ಕೆ ಕುಕುರ್ಬಿಟಾಸಿನ್‌ಗಳ ಹರಡುವಿಕೆಯನ್ನು ಕಮ್ಮಿ ಮಾಡಬಹುದು.

ಬೇಯಿಸಿದ ಮತ್ತು ಕಚ್ಚಾ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹವು ತೆಗೆದುಕೊಳ್ಳುವ ಸಮಯವು ವಿಭಿನ್ನವಾಗಿರುತ್ತದೆ. ಹೀಗಾಗಿ, ಹಸಿ ಮತ್ತು ಬೇಯಿಸಿದ ಆಹಾರವನ್ನು ಒಟ್ಟಿಗೆ ಬೆರೆಸಿದಾಗ ಅದು ಜೀರ್ಣಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಬೇಯಿಸಿದ ಆಹಾರವು ಮೊದಲೇ ಶಾಖದಿಂದಾಗಿ ಬದಲಾವಣೆಯಾಗಿರುತ್ತದೆ. ಇದರಿಂದಾಗಿ ಅಮಾ ಸಾಲ್ಟ್ ಪ್ರೊ ಉರಿಯೂತದ ಉತ್ಪನ್ನಗಳು ಬಿಡುಗಡೆಗೊಳ್ಳುತ್ತದೆ. ಅಮಾವು ನಮ್ಮ ದೇಹದಲ್ಲಿ ನೋವುಗಳನ್ನು ಉಂಟುಮಾಡುವುದರಿಂದ ದೀರ್ಘಾವಧಿಯಲ್ಲಿ, ಇದು ಉರಿಯೂತದ ಸ್ಥಿತಿಗೂ ಕಾರಣವಾಗಬಹುದು.

Leave A Reply

Your email address will not be published.