ಕಂಕುಳಿನ ದುರ್ವಾಸನೆ ನಿಮಗೆ ಕಿರಿ ಕಿರಿ ಅನಿಸುತ್ತಿದೆಯೇ? ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ನಮ್ಮ ದೇಹದಲ್ಲಿ ಬೆವರು ಉತ್ಪತ್ತಿ ಆಗುವುದು ಸಹಜ. ಅದಲ್ಲದೆ ಈ ಬೆವರಿನಿಂದ ಕೆಟ್ಟ ವಾಸನೆ ಬರುವುದು ನಿಮಗೆ ಗೊತ್ತಿರಬಹುದು. ಆದರೆ ನಮಗೆ ಬೆವರಲಿ ಅಥವಾ ಬೆವರದೇ ಇರಲಿ ಸದ್ಯ ಕಂಕುಳಿನ ಕೆಳಗೆ ವಾಸನೆ ಬರುವುದು ಬಂದೇ ಬರುತ್ತದೆ. ಕಂಕುಳಿನ ವಾಸನೆ ಯು ಕೆಲವರಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಇದಕ್ಕೆ ಕೆಲವರು ಡಿಯೋಡ್ರೆಂಟ್ ಅಥವಾ ಆಂಟಿಪೆರ್ಸ್ಪಿರಂಟ್ ರೋಲ್-ಆನ್ ಅನ್ನು ಉಪಯೋಗಿಸುವ ಮೂಲಕ ಕಂಕುಳಿನ ವಾಸನೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮನೆಯಲ್ಲಿರುವ ಕೆಲ ವಸ್ತುಗಳು ಈ ವಾಸನೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಹೌದು ಆ ಬಗೆಗಿನ ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ.

 

ಕಂಕುಳ ವಾಸನೆ ತೆಗೆದು ಹಾಕಲು ಸಲಹೆಗಳು :

  • ಬಾದಾಮಿ ಎಣ್ಣೆಯನ್ನು ಬಳಸಿ ನೀವು ಕಂಕುಳ ವಾಸನೆ ಮಾತ್ರ ಅಲ್ಲ ಅದರ ಕಪ್ಪು ಕಲೆಯನ್ನು ಸಹ ಹೋಗಲಾಡಿಸಬಹುದು. ಬಾದಾಮಿ ಎಣ್ಣೆಯನ್ನು ಅಡುಗೆ ಸೋಡಾದ ಜೊತೆ ಮಿಕ್ಸ್ ಮಾಡಿ, ಅದನ್ನು ಕಂಕುಳಿಗೆ ಹಚ್ಚಿ. ಸುಮಾರು 30 ನಿಮಿಷಗಳ ನಂತರ ತೊಳೆಯಿರಿ.
  • ಆಲಿವ್ ಎಣ್ಣೆಯ ಜೊತೆ ಬಾದಾಮಿ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ, ಕಾಯಿಸಿ. ಈ ಎಣ್ಣೆಗಳನ್ನು ಬೇಕಿಂಗ್ ಸೋಡಾಗೆ ಮಿಕ್ಸ್ ಮಾಡಿ ಕಂಕುಳಿಗೆ ಹಚ್ಚಿಕೊಳ್ಳಿ.
  • ಉಗುರುಬೆಚ್ಚಗಿನ ನೀರನ್ನು ಒಂದು ಬಕೆಟ್‌ ನಲ್ಲಿ ತೆಗೆದುಕೊಳ್ಳಿ, ಅದಕ್ಕೆ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ. ಅದು ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ ನಂತರ, ಅದರಲ್ಲಿ ಸ್ನಾನ ಮಾಡಿ. ಇದು ಕಂಕುಳಿನ ವಾಸನೆಯನ್ನು ಹೋಗಲಾಡಿಸುತ್ತದೆ.
  • 1 ಕಪ್ ಆಪಲ್ ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಅದನ್ನು 1/2 ಕಪ್ ನೀರಿನೊಂದಿಗೆ ಮಿಶ್ರಣ ಮಾಡಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ, ಮಲಗುವ ಮೊದಲು ನಿಮ್ಮ ಕಂಕುಳ ಮೇಲೆ ಪ್ರತಿ ರಾತ್ರಿ ಬಳಸಿ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ಆಲೂಗಡ್ಡೆಯ ತೆಳುವಾದ ಹೋಳುಗಳಾಗಿ ಕತ್ತರಿಸಿ, ಇದನ್ನು 30 ನಿಮಿಷಗಳ ಕಾಲ ನಿಮ್ಮ ಕಂಕುಳ ಮೇಲೆ ಉಜ್ಜಿಕೊಳ್ಳಿ. ಇದನ್ನು ವಾರಕ್ಕೆ 3 ಬಾರಿಯಾದರೂ ಮಾಡಿದರೆ, ಕಂಕುಳ ವಾಸನೆಯಿಂದ ಮುಕ್ತಿ ಸಿಗುತ್ತದೆ.
  • ಎರಡು ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಒಂದು ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಮಿಶ್ರಣವನ್ನು 10 ನಿಮಿಷಗಳ ಕಾಲ ನಿಮ್ಮ ಕಂಕುಳಿಗೆ ಹಚ್ಚಿ ಮೇಲೆ ಮಸಾಜ್ ಮಾಡಿ.
  • ನಿಂಬೆ ರಸದ ಜೊತೆ ಟೊಮ್ಯಾಟೋ ರಸವನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ನಿಮ್ಮ ಕಂಕುಳಿನ ಸುತ್ತಲೂ 10 ನಿಮಿಷಗಳ ಕಾಲ ಹಚ್ಚಿ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.
  • ತೆಂಗಿನ ಎಣ್ಣೆ ಕೂಡ ನಿಮ್ಮ ಕಂಕುಳ ವಾಸನೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ರಾತ್ರಿ ಮಲಗುವಾಗ ಕಂಕುಳಿಗೆ ಹಚ್ಚಿ, ಬೆಳಗ್ಗೆ ತೊಳೆಯಿರಿ.

ಹೌದು ಈ ಮೇಲಿನ ಸಲಹೆಯನ್ನು ಅನುಸರಿಸುವುದರ ಮೂಲಕ ನಿಮ್ಮ ಕಂಕುಳದಿಂದ ಬರುವ ವಾಸನೆಯನ್ನು ನಿಯಂತ್ರಿಸಬಹುದಾಗಿದೆ.

Leave A Reply

Your email address will not be published.