Raveena Tandon : ಬಾಲಿವುಡ್‌ ನಟಿ ರವೀನಾ ಟಂಡನ್‌ ಹುಲಿಗೆ ತೊಂದರೆ ನೀಡಿದ್ರಾ ? ತನಿಖೆಗೆ ಆದೇಶ

ಪ್ರಕೃತಿಯ ಮಡಿಲಲ್ಲಿ ನಲಿದಾಡುತ್ತಿದ್ದ ಅದೆಷ್ಟೋ ಪ್ರಾಣಿ ಸಂಕುಲಗಳು ಇದೀಗ ನಶಿಸಿ ಹೋಗುತ್ತಿದ್ದು, ಇರುವ ಕೆಲವೇ ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಈ ಹಿಂದೆ ಇದ್ದ ಅದೆಷ್ಟೋ ಜೀವಿಗಳು ಈಗ ಕೇವಲ ಚಿತ್ರಗಳಲ್ಲಿ ನೋಡುವಂತಾಗಿದ್ದು, ವನ್ಯ ಜೀವಿಗಳ ರಕ್ಷಣಾ ಕಾರ್ಯಕ್ಕೆ ಮುಂದಾಗದಿದ್ದರೆ ಮುಂದೊಂದು ದಿನ ಕೇವಲ ಪಳೆಯುಳಿಕೆಗಳನ್ನು ಮಾತ್ರ ನೋಡಬೇಕಾದ ಆಘಾತಕಾರಿ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ನಟಿ ರವೀನಾ ಟಂಡನ್​ (Raveena Tandon) ಅವರು ಪ್ರಾಣಿ ಹಿಂಸಾ ವಿಚಾರದ ಕುರಿತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಟಿ ರವೀನಾ ಟಂಡನ್ ಪ್ರಾಣಿಗಳ ನೋಡುವ ಕುತೂಹಲದಿಂದ ಇತ್ತೀಚೆಗೆ ಹುಲಿ ನೋಡಲು ಸಫಾರಿಗೆ (Tiger Safari) ತೆರಳಿದ್ದಾರೆ. ಈ ವೇಳೆ ನಟಿ ನಡೆದುಕೊಂಡ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ವನ್ಯ ಜೀವಿಯಾದ ಹುಲಿಯ ತೀರಾ ಸಮೀಪಕ್ಕೆ ಹೋಗಿ ಫೋಟೋ ಕ್ಲಿಕಿಸಲು ರವೀನಾ ಟಂಡನ್​ ಹರ ಸಾಹಸ ಪಟ್ಟಿದ್ದು, ಈ ಸಂದರ್ಭದ ವಿಡಿಯೋ ವೈರಲ್​ ಆಗಿ ಸಂಚಲನ ಮೂಡಿಸಿದೆ. ಈ ವಿಚಾರ ಅರಣ್ಯಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ, (Forest Department Officials) ನಟಿಯ ವಿರುದ್ದ ತನಿಖೆಗೆ ಆದೇಶಿಸಿದ್ದಾರೆ.

ಚಿತ್ರರಂಗದಲ್ಲಿ ರವೀನಾ ಟಂಡನ್​ ಬ್ಯುಸಿ ಆಗಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ರಮಿಕಾ ಸೇನ್​ ಎಂಬ ಪಾತ್ರ ಮಾಡಿದ ಬಳಿಕ ಫೇಮಸ್ ಆಗಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಹುಲಿ ನೋಡಲು ತೆರಳಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಜಬಾವ್ದಾರಿಯಿಂದ ನಡೆದುಕೊಳ್ಳಬೇಕಾಗಿದ್ದು, ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕಾಗಿರುವ ಅವಶ್ಯಕತೆ ಇದೆ. ಆದರೆ ಫೋಟೋ ತೆಗೆಯುವ ಭರದಲ್ಲಿ ರವೀನಾ ಟಂಡನ್​ ಅವರು ತಮ್ಮ ವಾಹನವನ್ನು ಹುಲಿಯ ಸಮೀಪಕ್ಕೆ ತೆಗೆದುಕೊಂಡು ಹೋಗಿದ್ದಾರೆ.ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಈ ರೀತಿ ನಡೆದುಕೊಂಡ ಸಲುವಾಗಿ ರವೀನಾ ಟಂಡನ್​ ಅವರಿಗೆ ಸಮಸ್ಯೆ ಎದುರಾಗಿದೆ.

ಇವರ ಜೊತೆಗೆ ಸಫಾರಿಗೆ ಹೋಗಿದ್ದ ಸಿಬ್ಬಂದಿಯು ಕೂಡ ವಿಚಾರಣೆಗೆ ಒಳಪಡಬೇಕಾದ ಸ್ಟಿತಿ ನಿರ್ಮಾಣವಾಗಿದೆ .ಅಪರೂಪವಾಗಿ ಕಾಣ ಸಿಗುವ ಹುಲಿಯ ಫೋಟೊ ಸೆರೆಹಿಡಿಯಲು ಸಿಕ್ಕ ಸುವರ್ಣ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರವೀನಾ ಟಂಡನ್​ ಅವರು ಕ್ಯಾಮೆರಾ ಹಿಡಿದುಕೊಂಡು ಫೋಟೋ ಮತ್ತು ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಈ ವೇಳೆ ಹುಲಿಯ ಅತೀ ಸಮೀಪಕ್ಕೆ ಅವರ ಜೀಪ್​ ಹೋಗಿರುವುದು ಗೊತ್ತಾಗಿದೆ. ನಟಿಯ ವರ್ತನೆಯಿಂದ ಹುಲಿಗೂ ಕಿರಿಕಿರಿ ಉಂಟಾಗಿದ್ದು, ಹುಲಿ ಘರ್ಜಿಸಿ ಮುಂದೆ ಸಾಗಿದೆ.

ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ರವೀನಾ ಟಂಡನ್​ ಅವರು ಹಂಚಿಕೊಂಡ ಬಳಿಕ ವಿವಾದಕ್ಕೆ ಕಾರಣವಾಗಿದೆ. ಈ ವೀಡಿಯೋ ವೈರಲ್​ ಆಗುತ್ತಿದ್ದಂತೆ ಮೇಲಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ . ನವೆಂಬರ್​ 22ರಂದು ರವೀನಾ ಟಂಡನ್​ ಅವರು ಸಫಾರಿಗೆ ತೆರಳಿದ್ದು, ಅವರ ಜೊತೆ ಇದ್ದ ವಾಹನ ಚಾಲಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧವೂ ತನಿಖೆ ನಡೆಯಲಿದೆ ಎನ್ನಲಾಗಿದೆ.

ಈ ನಡುವೆ ರವೀನಾ ಟಂಡನ್​ ನಟಿಯ ಆಪ್ತ ಮೂಲಗಳ ಪ್ರಕಾರ ಸಫಾರಿ ವೇಳೆ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಸಫಾರಿಗೆ ನಿಗದಿ ಪಡಿಸಿದ ಜಾಗದಲ್ಲೇ ವಾಹನ ನಿಲ್ಲಿಸಿದ್ದು, ಆದರೆ ಹುಲಿಯೇ ಸಮೀಪ ಬಂದಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಈ ವಿಚಾರದ ಸತ್ಯ ಸತ್ಯತೆಯು ವಿಚಾರಣೆಯ ಬಳಿಕವಷ್ಟೆ ಬೆಳಕಿಗೆ ಬರಬೇಕಾಗಿದೆ.

Leave A Reply

Your email address will not be published.