Viral Video: ಅಬ್ಬಾ…! ಬರೋಬ್ಬರಿ 80 ವರ್ಷಗಳ ಹಿಂದಿನ ಸ್ನೇಹ| ಭೇಟಿಯಾದ ದೃಶ್ಯ ನೋಡಿದರೆ ನೀವೂ ಕೂಡ ಭಾವುಕರಾಗುತ್ತೀರಾ!

ಸ್ನೇಹ ಅನ್ನೋದು ಅದ್ಭುತವಾದ ಬಂಧ. ಕೆಲವು ಸ್ನೇಹಗಳು ಬಹುಬೇಗನೆ ಮುರಿದು ಬಿದ್ದರೆ ಇನ್ನೂ ಕೆಲವು ಆಲದ ಮರದ ಹಾಗೆ ದೃಢವಾಗಿ ಬಹುಕಾಲ ಇರುತ್ತದೆ. ಅಂತಹದ್ದೆ ಪರಿಶುದ್ದ, ದೃಢವಾದ ಸ್ನೇಹದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ಈ ಸ್ನೇಹವಂತು ಬರೋಬ್ಬರಿ 80 ವರ್ಷಗಳ ಹಿಂದಿನದು. ಈಗಿನ ಕಾಲದಲ್ಲಿ ಎಷ್ಟೋ ಸ್ನೇಹ, ಸಂಬಂಧಗಳು ಜೊತೆಗಿರುವಾಗ ಮಾತ್ರ ದೂರಾದ ಮೇಲೆ ತಮ್ಮ ಸ್ನೇಹಿತರ ನೆನಪೇ ಇರುವುದಿಲ್ಲ. ಆದರೆ ಈ ಗೆಳತಿಯರ ಇಷ್ಟು ವರ್ಷದ ಸ್ನೇಹ ಇನ್ನೂ ಗಟ್ಟಿಯಾಗಿದೆ ಎಂದರೆ ಆಶ್ಚರ್ಯದ ಜೊತೆಗೆ ಖುಷಿಯೂ ಆಗುತ್ತದೆ. ಈ ಗೆಳತಿಯರು ತುಂಬಾ ವರ್ಷಗಳ ನಂತರ ಈಗ ಜೊತೆಯಾಗಿದ್ದಾರೆ. ಇನ್ನೂ ಈ ಗೆಳತಿಯರು ಹಲವು ವರ್ಷಗಳ ಬಳಿಕ ಭೇಟಿಯಾಗುತ್ತಿದ್ದಾರೆ ಅಂದ್ಮೇಲೆ ಅವರ ಖುಷಿ, ಸಂಭ್ರಮ ಹೇಗಿರಬಹುದು? ಇದನ್ನ ತಿಳ್ಕೊಳ್ಳೇಬೇಕು ಅಲ್ವಾ!!

ಮುಕಿಲ್ ಮೆನನ್ ಎಂಬವರು ತನ್ನ ಅಜ್ಜಿಯ ಈ ಸುಂದರ ಕ್ಷಣದ ದೃಶ್ಯವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಂತು 80 ವರ್ಷಗಳಿಂದ ಸ್ನೇಹಿತರಾಗಿದ್ದ ಇಬ್ಬರು ವೃದ್ಧೆಯರ ಪುನರ್ಮಿಲನದ ಅದ್ಭತ ದೃಶ್ಯವಾಗಿದೆ. ಈ ವೀಡಿಯೋದಲ್ಲಿ ಅಜ್ಜಿಯೊಬ್ಬರು ಕಾರಿನಿಂದ ಇಳಿದು ಮನೆಯೊಳಗೆ ಹೋಗುವ ದೃಶ್ಯದ ಮೂಲಕ ಈ ಸುಂದರ ಕ್ಷಣ ಆರಂಭವಾಗುತ್ತದೆ. ಅಜ್ಜಿ ತನ್ನ ಗೆಳತಿಯನ್ನು ನೋಡಲು ಉತ್ಸುಕಳಾಗಿ ಖುಷಿಯಿಂದ ಮನೆಯ ಒಳಗೆ ಹೋಗುತ್ತಿದ್ದಾರೆ. ಈಕೆ ಮನೆಯೊಳಗೆ ಹೋಗುತ್ತಿದ್ದಂತೆಯೇ ಅಲ್ಲಿದ್ದ ಇನ್ನೊಬ್ಬರು ವೃದ್ಧೆ ಗೆಳತಿಯನ್ನು ನೋಡಿದ ಸಂಭ್ರಮದಲ್ಲಿ ಸಂತೋಷಗೊಂಡು ಸ್ವಾಗತಿಸಿದರು.

ಗೆಳತಿಯನ್ನು ಕಂಡ ಕೂಡಲೇ ಇಬ್ಬರು ವೃದ್ಧೆಯರೂ ಆ ಕ್ಷಣ ಸಂತೋಷಗೊಂಡಿದ್ದಾರೆ. ನಂತರ ಈ ಇಬ್ಬರ ಮಾತುಕತೆ ಶುರುವಾಗಿ ನಗು,ಮಾತುಗಳಲ್ಲಿ ಮೈಮರೆತರು. ಹಲವು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ ಅಂದ ಮೇಲೆ ಹೇಳಿಕೊಳ್ಳಲಾರದಷ್ಟು ಖುಷಿ ಆಗಿರುತ್ತದೆ‌. ಹಾಗೂ ಈ ಪೋಸ್ಟ್ ನಲ್ಲಿ ಕೆಲವು ಸಾಲುಗಳು ಬರೆದಿತ್ತು. ’80 ವರ್ಷಗಳ ಹಿಂದಿನ ಸ್ನೇಹ. ನನ್ನ ಅಜ್ಜಿ ಯಾವಾಗಲೂ ತನ್ನ ಆತ್ಮೀಯ ಸ್ನೇಹಿತೆಯನ್ನು ನೋಡಲು ಬಯಸುತ್ತಿರುವುದಾಗಿ ಹೇಳುತ್ತಿದ್ದರು. ಹಾಗಾಗಿ ಸ್ನೇಹಿತೆಯರನ್ನು ಪರಸ್ಪರ ಭೇಟಿಯಾಗುವಂತೆ ಮಾಡಿದೆ’ ಎಂದು ಬರೆಯಲಾಗಿತ್ತು.

ವಿಡೀಯೋದಲ್ಲಿ ಕೊನೆಗೆ ತನ್ನ ಗೆಳತಿಯ ಕಾಲು ಮುಟ್ಟಿ ಆಶೀರ್ವಾದ ಪಡೆದು ಈ ಅಜ್ಜಿ ಗೆಳತಿಯ ಮನೆಯಿಂದ ಖುಷಿ, ಗೆಳತಿಯನ್ನು ನೋಡಿದ ನಿರಾಳ ಭಾವ ಮತ್ತು ಗೆಳತಿಯನ್ನು ಮತ್ತೆ ತೊರೆಯುವ ಭಾರವಾದ ಮನಸ್ಸಿನಿಂದ ತೆರಳಲು ರೆಡಿ ಆಗುತ್ತಾರೆ. ಈ ಅದ್ಭುತ ಕ್ಷಣದ ನೆನಪಿಗಾಗಿ ಎಲ್ಲಾ ಸೆಲ್ಫಿ ಗೆ ಫೋಸ್ ಕೊಟ್ಟಿದ್ದಾರೆ. ಈ ದೃಶ್ಯ ನೋಡಿದರೆ ನೀವೂ ಕೂಡ ವ್ಹಾ! ಎಂತಾ ಗೆಳೆತನ ಎಂದು ಖುಷಿ ಪಡುತ್ತೀರಾ. ಹಾಗೂ ನಿಮಗೂ ಈ ವಿಡೀಯೋ ನಿಮ್ಮ ಗೆಳೆಯ ,ಗೆಳತಿಯ ನೆನಪು ತರಿಸೋದು ಖಂಡಿತ. ಈ ವಿಡೀಯೋ ಸಾಕಷ್ಟು ವೀಕ್ಷಣೆ ಗಳಿಸಿದ್ದೂ, ಎಲ್ಲರೂ ಈ ಅದ್ಭುತ ಸಮಾಗಮ ನೋಡಿ ಖುಷಿ ಪಟ್ಟಿದ್ದಾರೆ.

https://www.instagram.com/reel/CkaXE21j_Eo/?igshid=YmMyMTA2M2Y=

Leave A Reply

Your email address will not be published.