Post Office Jobs: ಭಾರತೀಯ ಅಂಚೆ ಇಲಾಖೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗವಕಾಶ

ಭಾರತೀಯ ಅಂಚೆ ಇಲಾಖೆಯಲ್ಲಿ(Indian Post Department) ಕೆಲಸ ಮಾಡುವ ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು ಕೂಡಲೇ ತಮ್ಮ ರೆಸ್ಯೂಮ್​ ಇ-ಮೇಲ್ ಮಾಡಿ. ಡಿಸೆಂಬರ್ 12, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ.

ಹುದ್ದೆಯ ವಿವರ :
ಅಸಿಸ್ಟೆಂಟ್ ಡೈರೆಕ್ಟರ್/ ಡೆಸ್ಕ್ ಆಫೀಸರ್-1
ಅಸಿಸ್ಟೆಂಟ್ ಡೈರೆಕ್ಟರ್-1
ಸೀನಿಯರ್ ಟ್ರಾನ್ಸ್​ಲೇಶನ್ ಆಫೀಸರ್-2
ಉದ್ಯೋಗ ಸ್ಥಳ : ದೆಹಲಿ

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 18/11/2022
ಇ-ಮೇಲ್ ಮಾಡಲು ಕೊನೆಯ ದಿನ: 12/12/2022

ವಿದ್ಯಾರ್ಹತೆ : ಅಸಿಸ್ಟೆಂಟ್ ಡೈರೆಕ್ಟರ್/ ಡೆಸ್ಕ್ ಆಫೀಸರ್-ಪದವಿ ವಿದ್ಯಾರ್ಹತೆ ಹೊಂದಿರಬೇಕು
ಅಸಿಸ್ಟೆಂಟ್ ಡೈರೆಕ್ಟರ್ ಹಾಗೂ ಸೀನಿಯರ್‌ ಟ್ರಾನ್ಸ್‌ಲೇಶನ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಪಾಸಾಗಿರಬೇಕು.

ವಯೋಮಿತಿ: ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ರೆಸ್ಯೂಮ್ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ pe2section.dte@indiapost.gov.in ಗೆ ಡಿಸೆಂಬರ್ 12ಕ್ಕೂ ಮುನ್ನ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.