ನೀವು ಹೊಸ ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಇನ್ಮುಂದೆ ಈ ಎರಡು ಕಾರುಗಳು ಕಾಣಿಸಲ್ಲ |

ಆಧುನಿಕ ಜಗತ್ತಿನಲ್ಲಿ ಓಡಾಡಲು ಹೆಚ್ಚಾಗಿ ಕಾರುಗಳನ್ನು ಉಪಯೋಗಿಸುವುದು ರೂಢಿ. ಅಲ್ಲದೆ ಕಾರಿನಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು ಎಂಬ ನಂಬಿಕೆ. ಆದರೆ ಇಲ್ಲೊಮ್ಮೆ ಗಮನಿಸಲೇ ಬೇಕಾದ ವಿಚಾರ ನಿಮಗಾಗಿ ತಿಳಿಸಲಾಗಿದೆ.

ಪ್ರಸ್ತುತ ಎರಡು ಜನಪ್ರಿಯ ಕಾರುಗಳು ಇನ್ನು ಮುಂದೆ ರಸ್ತೆಗಳಿಂದ ಕಣ್ಮರೆ ಆಗುವ ಮಾಹಿತಿ ಬೆಳಕಿಗೆ ಬಂದಿದೆ. ಹೌದು ಹೋಂಡಾ ಕಂಪನಿಯ ಕಾರುಗಳ ಉತ್ಪಾದನೆ ನಿಲ್ಲಲಿದೆ.

ಸದ್ಯ ಹೋಂಡಾ ಕಂಪನಿಯು ಏಪ್ರಿಲ್ 2023 ರಿಂದ ಎರಡು ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿದೆ. ಆದರೆ ಇನ್ನೂ 4 ತಿಂಗಳ ಕಾಲಾವಕಾಶವಿದೆ.

ಇನ್ನು ಮುಂದೆ ಕಂಪನಿಯು ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ ಕಾರುಗಳ ಡೀಸೆಲ್ ರೂಪಾಂತರಗಳ ಉತ್ಪಾದನೆಯನ್ನು ನಿಲ್ಲಿಸಲಿದೆ.

ನೈಜ ಡ್ರೈವಿಂಗ್ ಎಮಿಷನ್ ಮಾನದಂಡಗಳ ಕಾರಣದಿಂದಾಗಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕಂಪನಿಯು ಪೆಟ್ರೋಲ್ ಹೈಬ್ರಿಡ್ ಕಾರುಗಳ ಮೇಲೆ ಮಾತ್ರ ಹೆಚ್ಚು ಗಮನ ಹರಿಸಲಿದೆ. ಅಂದರೆ ಏಪ್ರಿಲ್ 2023 ರಿಂದ ಕಂಪನಿಯು ಹೈಬ್ರಿಡ್ ಕಾರುಗಳನ್ನು ಮಾತ್ರ ಮಾರಾಟ ಮಾಡುವ ಅವಕಾಶವನ್ನು ಹೊಂದಿರುತ್ತದೆ.

ಹೋಂಡಾ ಕಾರ್ಸ್ ಇಂಡಿಯಾ ಸಿಇಒ ಮತ್ತು ಅಧ್ಯಕ್ಷ ಟಕುಯಾ ಸುಮುರಾ ಅವರ ಪ್ರಕಾರ ನೈಜ ಡ್ರೈವಿಂಗ್ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಡೀಸೆಲ್ ಕಾರುಗಳನ್ನು ತಯಾರಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಯುರೋಪ್ನಲ್ಲಿ ಇದೇ ರೀತಿಯ ನಿಯಮಗಳು ಅಸ್ತಿತ್ವದಲ್ಲಿವೆ. ಹಾಗಾಗಿಯೇ ಬಹುತೇಕ ಬ್ರಾಂಡ್‌ಗಳು ಡೀಸೆಲ್ ಕಾರುಗಳಿಗೆ ಹಾಡಿ ಹೊಗಳುತ್ತಿವೆ.

 ಸುಮಾರು 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳ ಉತ್ಪಾದನೆಯನ್ನು ಹೋಂಡಾ ನಿಲ್ಲಿಸಲಿದೆ. ಈ ಎಂಜಿನ್ ಅನ್ನು WRV ಕ್ರಾಸ್‌ವರ್ಸ್, ಅಮೇಜ್, 5 ನೇ ತಲೆಮಾರಿನ ಹೋಂಡಾ ಸಿಟಿಯಂತಹ ಮಾದರಿಗಳಲ್ಲಿ ಬಳಸಲಾಗಿದೆ. ವರದಿಗಳ ಪ್ರಕಾರ, ಕಂಪನಿಯು ಈಗಾಗಲೇ WRV, ಜಾಝ್ ಮತ್ತು ಅಮೇಜ್‌ನಂತಹ ಕಾರುಗಳಲ್ಲಿ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದೆ.

ಅಲ್ಲದೆ, 1.5 ಲೀಟರ್ ಡೀಸೆಲ್ ಎಂಜಿನ್ ಉತ್ಪಾದನೆ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ರಫ್ತು ಮುಂದಿನ ವರ್ಷ ಮಾರ್ಚ್ ನಿಂದ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. 1.6 ಲೀಟರ್ ಡೀಸೆಲ್ ಎಂಜಿನ್ ಅನ್ನು ಪ್ರಸ್ತುತ ಥೈಲ್ಯಾಂಡ್‌ಗೆ ರಫ್ತು ಮಾಡಲಾಗುತ್ತದೆ. ಈ ಎಂಜಿನ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಆರ್‌ವಿ ಕಾರಿನಲ್ಲಿ ಬಳಸಲಾಗುತ್ತದೆ.

ಕಂಪನಿಯು 1.5 ಲೀಟರ್ ಎಂಜಿನ್ ಅನ್ನು 2013 ರಲ್ಲಿ ಬಿಡುಗಡೆ ಮಾಡಿತು. ಇದನ್ನು ಮೊದಲು ಅಮೇಜ್ ಕಾರಿನಲ್ಲಿ ಬಳಸಲಾಯಿತು. ಅಂದಿನಿಂದ ಹೋಂಡಾ ಈ ಎಂಜಿನ್ ಅನ್ನು ಸೆಡಾನ್, ಕಾಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಬಳಸುತ್ತಿದೆ. ಈ ಎಂಜಿನ್‌ನ ಶಕ್ತಿ 98.6 bhp ಮತ್ತು ಟಾರ್ಕ್ 200 NM ಆಗಿದೆ.

1.5 ಲೀಟರ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸುವ ಬಗ್ಗೆ ಹೋಂಡಾ ಈಗಾಗಲೇ ತನ್ನ ಪೂರೈಕೆದಾರರಿಗೆ ಮಾಹಿತಿ ನೀಡಿದೆ. ಮುಂದಿನ ವರ್ಷದಿಂದ ಕಂಪನಿಯ ಸ್ಥಾವರಗಳಲ್ಲಿ ಇವುಗಳ ತಯಾರಿಕೆಯನ್ನು ನಿಲ್ಲಿಸಲಾಗುವುದು. ಹೋಂಡಾ ಕಂಪನಿಯು ಸಿಆರ್‌ವಿ 2023 ಮಾದರಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ಸಿದ್ಧವಾಗುತ್ತಿದೆ. ಇದರಲ್ಲಿ ಹೈಬ್ರಿಡ್ ಎಂಜಿನ್ ಇರಲಿದೆ. ಈ ಕಾರು ಅತ್ಯಾಕರ್ಷಕ ನೋಟದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೌದು ಹೊಸ ಬದಲಾವಣೆಗಳೊಂದಿದೆ ಇನ್ನು ಮುಂದೆ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Leave A Reply

Your email address will not be published.