ನಿವೇದಿತಾ ಗೌಡ ಬಿಕಿನಿ ಡ್ರೆಸ್ ನಲ್ಲಿ | ಶೆಟ್ರೆ ಹುಷಾರು ಅಂದ್ರು ಜನ!!!

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬಾರ್ಬಿ ಡಾಲ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದರೆ ತಪ್ಪಾಗದು!!!.. ಇತ್ತೀಚೆಗೆ ಸೋಲೋ ಟ್ರಿಪ್ ಹೆಸರಲ್ಲಿ ನೆಟ್ಟಿಗರ ಟ್ರೊಲ್ ಗೆ ಒಳಗಾಗಿದ್ದ ನಿವೇದಿತಾ ಮುಟ್ಟಿ ನೋಡಿಕೊಳ್ಳುವ ರೀತಿ ನೆಗೆಟಿವ್ ಕಾಮೆಂಟ್ ಮಾಡುವವರ ಬಾಯಿ ಮುಚ್ಚಿಸಿದ್ದರು.

 


ಇದೀಗ, ರಾಂಪ್ ಹಾಡುಗಳ ಸರದಾರ ಚಂದನ್ ಶೆಟ್ಟರ ಮುದ್ದಿನ ಮಡದಿ ಮಾಡಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಅಭಿಮಾನಿಗಳು ನಿವಿಯ ಹೊಸ ವರಸೆ ಕಂಡು ದಂಗಾಗಿದ್ದಾರೆ.
ಹೌದು!! ನಿವೇದಿತಾ ಗೌಡ ಬಿಕಿನಿ ಲುಕ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಭರಪೂರ ಕಮೆಂಟ್ಸ್ ಬರುತ್ತಿದ್ದು, ಸದಾ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊ, ರೀಲ್ಸ್ ಮಾಡಿ ಫೇಮಸ್ ಆಗಿರುವ ಜೊತೆಗೆ ಅಭಿಮಾನಿಗಳನ್ನು ರಂಜಿಸುತ್ತ ಇರುತ್ತಾರೆ.
ಇದರ ನಡುವೆ ನಿವೇದಿತಾ ಗೌಡ ಬಿಕಿನಿ ತೊಟ್ಟ ಫೋಟೋ ಶೇರ್ ಮಾಡಿದ್ದು, ಅದಕ್ಕೆ ಕೆಲ ನೆಟ್ಟಿಗರು ಕಮೆಂಟ್ ಮೂಲಕ ಕಾಲೆಳೆದಿದ್ದಾರೆ.

ಬಿಕಿನಿ ತೊಟ್ಟ ಬಾರ್ಬಿ ಡಾಲ್ ಗೆ ಕೆಲವರು ಇದೆಲ್ಲ ಗಂಡನ ಮುಂದೆ ಮಾಡುವಂತೆ ಸಲಹೆ ನೀಡಿದ್ದರೆ ಮತ್ತೆ ಕೆಲವರು, ಶೆಟ್ರೇ ಹುಷಾರು ಅಂತ ಚಂದನ್‌ ಅವರನ್ನು ಕೂಡ ಕಾಲೆಳೆದು ಕಮೆಂಟ್ ಮಾಡಿದ್ದಾರೆ.

ನಿವೇದಿತಾ ಗೌಡ (niveditha gowda) ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್ ಆಗಿ ಬಿಟ್ಟಿದ್ದು, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಹವಾ ಮತ್ತೆ ಹೆಚ್ಚಿ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಚಂದನ್ ಶೆಟ್ಟಿ ಅವರ ಜೊತೆಗೆ ಹಸೆಮಣೆ ಏರಿ ಸುಖಿ ಜೀವನ ನಡೆಸುತ್ತಿರುವ ಈ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು, ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ. ನಿವೇದಿತಾ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಗ್ಲಾಮರಸ್ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಅಷ್ಟೆ ಅಲ್ಲದೆ, ಕನ್ನಡದ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನು ಉಣಿಸುತ್ತಾರೆ. ಇದೀಗ, ತಾನು ಬಿಕಿನಿಯಲ್ಲಿ ಮಿಂಚುತ್ತಿರುವ ಫೋಟೋ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಟ್ರೋಲಿಗರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ಅಷ್ಟೆ ಅಲ್ಲದೆ, ರಾಧಿಕಾ ಪಂಡಿತ್ ಅವರೊಂದಿಗೆ ಹೋಲಿಕೆ ಮಾಡಿ ಕಮೆಂಟ್ ಮಾಡಿದ್ದಾರೆ. ‘ಮದುವೆ ಆದ್ಮೇಲೆ ಎಲ್ಲದಕ್ಕೂ ಒಂದು ಬಾರ್ಡರ್ ಅನ್ನೋದು ಇರುತ್ತೆ!!. ರಾಧಿಕಾ ಪಂಡಿತ್ (Radhika pandith) ಟಾಪ್ ಹೀರೋಯಿನ್ ಆಗಿದ್ದರು ಕೂಡ ಮದುವೆ ಆದಮೇಲೆ ಆಕೆ ಹೇಗಿದ್ದಾರೆ ನೋಡಿ ಕಲಿಯಿರಿ!!!.ನಿಮ್ಮ ದೇಹಸಿರಿಯನ್ನು ಗಂಡನೆದುರು ಪ್ರದರ್ಶಿಸಿ, ಸಾರ್ವಜನಿಕವಾಗಿ ಅಲ್ಲ!’ ಹೀಗೊಬ್ಬರು ನೆಟ್ಟಿಗರು ನಿವೇದಿತಾ ಗೌಡ ಬಿಕಿನಿ ಲುಕ್‌ಗೆ ಖಡಕ್ ಆಗಿ ಕಮೆಂಟ್ ಮಾಡಿದ್ದಾರೆ.


ಆದರೆ ಈ ಕಮೆಂಟ್‌ ಅನ್ನು ನೋಡಿ ಕೆಲವರು ನಿವೇದಿತಾ ಎಂಥಾ ಬಟ್ಟೆ ಹಾಕ್ಬೇಕು ಅಂತ ಸಲಹೆ ಕೊಡೋದಕ್ಕೆ ನೀವ್ಯಾರು ಎಂದು ಪ್ರಶ್ನಿಸಿ ನಿವಿ ಪರ ತಾವಿದ್ದೇವೆ ಎಂದು ಅಭಿಮಾನಿಗಳು ಸಾಥ್ ನೀಡಿದ್ದು, ಅವಳ ಉಡುಗೆ, ಅವಳ ಬದುಕು ಅವಳ ಇಷ್ಟವಾಗಿದ್ದು, ನಿಂಗಿಷ್ಟ ಆದ್ರೆ ನೋಡು, ಇಲ್ಲಾಂದ್ರೆ ಸುಮ್ನಿರು ಅಂತ ಕೆಲವು ನೆತ್ತಿಗರು ಕಾಮೆಂಟ್ ಮಾಡಿದ್ದಾರೆ.


ನೆಗೆಟಿವ್ ಕಾಮೆಂಟ್ ಗಳಿಗೆ ನಿವಿ ಅಭಿಮಾನಿಗಳೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯರು ಫೋಟೋ ಹಾಕಿದ ಕೂಡಲೇ ಗಾಸಿಪ್ ವಿಷಯವಾಗಿ ಮಾಡಿ ಕೆಟ್ಟದಾಗಿ, ಸಂಕುಚಿತ ಮನಸ್ಸಿಂದ ಕಮೆಂಟ್ ಮಾಡೋದು ಕಾಮನ್ ಆಗಿ ಬಿಟ್ಟಿದೆ.


ಜನ ಏನೇ ಮಾತಾಡ್ಲಿ, ನೀನು ಬೆಳೆಯುತ್ತ ಹೋಗು’ ಅಂತ ಕೆಲವರು ನಿವಿಗೆ ವಿಶ್ ಮಾಡಿದ್ದರೆ, ಮತ್ತೆ ಕೆಲವರು ‘ಶೆಟ್ರೇ ಹುಷಾರು, ಮತ್ತೆ ಹೇಳ್ಲಿಲ್ಲ ಅನ್ಬೇಡಿ’ ಅಂತ ನಿವೇದಿತಾ ಗಂಡ ಚಂದನ್ ಶೆಟ್ಟಿ ಕಾಲೆಳೆದಿದ್ದಾರೆ. ಯಾರೇ ಎಷ್ಟೇ ನೆಗೆಟಿವ್ ಕಾಮೆಂಟ್ ಮಾಡಿದರು ಚಂದನ್ ಕ್ಯಾರೇ ಎನ್ನದೆ, ನಿವಿಯ ಖುಷಿಗೆ ಮಾತ್ರ ಆದ್ಯತೆ ನೀಡುತ್ತಿರೋದು ವಿಶೇಷ!!

‘ಇತ್ತೀಚೆಗಷ್ಟೇ ತನ್ನ ಮೇಲೆ ನೆಗೆಟಿವ್ ಕಾಮೆಂಟ್ ಮಾಡಿದ್ದವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿ ಉತ್ತರ ನೀಡಿದ್ದ ಬಾರ್ಬಿ ಡಾಲ್ ಇದೀಗ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.