Cobra Video : ಗಟ ಗಟ ಅಂತ ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದ ನಾಗಪ್ಪ | ಯಾಕೆ ಗೊತ್ತಾ? ವೀಡಿಯೋ ವೈರಲ್

ಸಾಮಾನ್ಯವಾಗಿ ನಾಗರಹಾವು ಕಾಣಿಸಿಕೊಳ್ಳೋದು ತುಂಬಾ ಕಡಿಮೆ. ಎಲ್ಲಾದರು ಕಾಣಿಸಿಕೊಂಡರೂ ಜನರು ಭಯಭೀತರಾಗುತ್ತಾರೆ. ಯಾಕಂದ್ರೆ ಹಾವುಗಳು ವಿಷಪೂರಿತವಾಗಿರುತ್ತದೆ. ಅವುಗಳು ಕಚ್ಚಿದರೆ ಮನುಷ್ಯ ಬದುಕುವ ಸಾಧ್ಯತೆ ಕಡಿಮೆಯೇ. ಆದರೆ ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ನಾಗರಹಾವು ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದಿದೆ. ಹಾಗದ್ರೆ ಇಷ್ಟೊಂದು ನೀರು ಕುಡಿಯಲು ಕಾರಣವೇನು? ನೀರು ಕುಡಿಸಿ ಮಾನವೀಯತೆ ತೋರಿದವರು ಯಾರು? ಎಂದು ನೋಡೋಣ.

 

ನಿರ್ಜನ ಪ್ರದೇಶದಲ್ಲಿ ಹಾವೊಂದು ಬಲೆಗೆ ಸಿಲುಕಿ ಒದ್ದಾಡುತ್ತಿತ್ತು. ಸ್ಥಳೀಯರು ಆ ಪ್ರದೇಶಕ್ಕೆ ಹೋಗುವಾಗ ಇದನ್ನು ಕಂಡಿದ್ದಾರೆ. ಕೂಡಲೇ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ನಂತರ ಅಲ್ಲಿಗೆ ಬಂದ ಉರಗತಜ್ಞರು ಹಾವನ್ನು ಬಲೆಯಿಂದ ಬಿಡಿಸಿ, ರಕ್ಷಿಸಿದ್ದಾರೆ.

ಈ ನಾಗರಹಾವು ಏಳು ದಿನಗಳವರೆಗೆ ಮೀನುಗಾರಿಕೆಯ ಬಲೆಯಲ್ಲಿ ಸಿಲುಕಿಕೊಂಡಿದೆ. ಹಾಗಾಗಿ ಯಾವುದೇ ಆಹಾರ ಸೇವನೆ ಇಲ್ಲದೆ ಬಳಲಿದೆ ಎಂದು ಗಮನಿಸಿದ ಉರಗ ತಜ್ಞರು, ಹಾವಿಗೆ ಬಾಟಲಿಯಲ್ಲಿ ನೀರು ಕುಡಿಸಿದ್ದಾರೆ. ಮೊದಲೇ ಬಾಯಾರಿದ್ದ ಹಾವು ನೀರು ಕೊಟ್ಟ ಕೂಡಲೇ ಒಂದೇ ಸಮನೆ ಕುಡಿಯಲಾರಂಭಿಸಿದೆ.

ಪೂರ್ತಿ ನೀರು ಕುಡಿದ ನಂತರ ಹಾವನ್ನು ಉರಗ ತಜ್ಞರು ಚೀಲದ ಒಳಗೆ ತುಂಬಿಸೋದು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋವನ್ನು ಉರಗ ತಜ್ಞರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಸಾಕಷ್ಟು ಜನ ವೀಕ್ಷಿಸಿದ್ದು, ಅನೇಕರು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.