KPSC : ಅಬಕಾರಿ ರಕ್ಷಕರು ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ  ಲೋಕಸೇವಾ ಆಯೋಗವು 2017ನೇ ಸಾಲಿನ ಅಬಕಾರಿ ರಕ್ಷಕರು ಹುದ್ದೆಗಳ ನೇಮಕಾತಿ ಮಾಡುವ ಸಲುವಾಗಿ, ಇದೀಗ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ;


ಈ ಹಿಂದೆ, ದಿನಾಂಕ 28-02-2017 ರಂದು ಅಧಿಸೂಚಿನೆ ಹೊರಡಿಸಿದ್ದ ಬಳಿಕ, ಅಬಕಾರಿ ರಕ್ಷಕರು (51 ಮಹಿಳೆ) ಹುದ್ದೆಗಳ ನೇಮಕಾತಿ ಸಂಬಂಧ ಕೆಪಿಎಸ್‌ಸಿ’ಯು 14-01-2019 ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಣೆ ಹೊರಡಿಸಿದೆ.
ಪ್ರಸ್ತುತ ಸದರಿ ಅಂತಿಮ ಆಯ್ಕೆಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಅದಕ್ಕೆ ಸಂಬಂಧಪಟ್ಟ  ಪೂರಕ  ಹೆಚ್ಚುವರಿ ಆಯ್ಕೆಪಟ್ಟಿಯನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ.

ಪ್ರಸ್ತುತ ಹೆಚ್ಚುವರಿ ಆಯ್ಕೆಪಟ್ಟಿ ಚೆಕ್‌ ಮಾಡಲು ಡೈರೆಕ್ಟ್‌ ಲಿಂಕ್‌ ಅನ್ನು ಕೆಳಗಿನಂತೆ ನೀಡಲಾಗಿದೆ.  ‘Excise Guards (Women)- 2016 – Additional List ಅಬಕಾರಿ ರಕ್ಷಕರು ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ  ಅಭ್ಯರ್ಥಿಗಳ ಹೆಸರು ಮತ್ತು ಸಂಪೂರ್ಣ ವಿಳಾಸದ ಜೊತೆಗೆ  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ಇತರೆ ಮಾಹಿತಿಗಳನ್ನು ನೀಡಲಾಗಿದೆ.

ಈ ಸದರಿ ಸಾಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು  ಹೆಚ್ಚುವರಿ ಆಯ್ಕೆಪಟ್ಟಿ ಹೇಗೆ ಚೆಕ್‌ ಮಾಡಬೇಕು ಎಂದು ಚಿಂತಿಸುತ್ತಿದ್ದಿರಾ??
ಅಬಕಾರಿ ರಕ್ಷಕರು ಹೆಚ್ಚುವರಿ ಆಯ್ಕೆಪಟ್ಟಿ ಚೆಕ್‌ ಮಾಡಲು ಕೆಳಗೆ ತಿಳಿಸಿದ ಸರಳ ವಿಧಾನ ಅನುಸರಿಸಿ:
ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ https://www.kpsc.kar.nic.in/ ಗೆ ಭೇಟಿ ನೀಡಬೇಕು. ಈ ಬಳಿಕ ಓಪನ್‌ ಆದ ವೆಬ್‌ ಪುಟದಲ್ಲಿ ಪಟ್ಟಿಗಳಲ್ಲಿ  ಆಯ್ಕೆಪಟ್ಟಿ ಆಯ್ಕೆಗೆ ಹೋಗಿ ಹೆಚ್ಚುವರಿ ಆಯ್ಕೆಪಟ್ಟಿ ಸೆಲೆಕ್ಟ್‌ ಮಾಡಬೇಕು.

ಈ ಪ್ರಕ್ರಿಯೆಯ ಬಳಿಕ ಓಪನ್ ಆಗುವ ಪುಟದಲ್ಲಿ ‘Excise Guards (Women)- 2016’ ಎಂದಿರುವಲ್ಲಿ ಕ್ಲಿಕ್ ಮಾಡಬೇಕು.ಆಗ ಅಬಕಾರಿ ರಕ್ಷಕರು ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಕಾಣುತ್ತದೆ. ಈ ಬಳಿಕ  ಚೆಕ್‌ ಮಾಡಿಕೊಳ್ಳಬಹುದಾಗಿದೆ.


ಕೆಪಿಎಸ್‌ಸಿ’ಯು ಅಬಕಾರಿ ರಕ್ಷಕರು (ಮಹಿಳೆ) 51 ಹುದ್ದೆಗಳಿಗೆ ಪರಿಷ್ಕೃತ ಆಯ್ಕೆಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದು, ಚೆಕ್‌ ಮಾಡಲು ಡೈರೆಕ್ಟ್‌ ಲಿಂಕ್‌  ಅಬಕಾರಿ ರಕ್ಷಕರು (ಮಹಿಳೆ) 51 ಹುದ್ದೆಗೆ ಪರಿಷ್ಕೃತ ಆಯ್ಕೆಪಟ್ಟಿ ಮೂಲಕ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.