ಮಂಗಳೂರು : ಹೊಸ ಪಡಿತರಕ್ಕೆ ಅಸ್ತು!

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿಅನೇಕ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶನೆ ಮಾಡಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ.

 


ಮಂಗಳೂರಿನಲ್ಲಿ ಹೊಸ ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಈಗಾಗಲೇ ಸಲ್ಲಿಸಿ , ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸರಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಒಟ್ಟು 1.55 ಲಕ್ಷ ಅರ್ಜಿಗಳು ಅರ್ಹವೆಂದು ಪರಿಗಣಿಸಲಾಗಿದ್ದು, ಇದರ ಅನ್ವಯ, ದಕ್ಷಿಣ ಕನ್ನಡ ಜಿಲ್ಲೆಯ 3,356 ಅರ್ಜಿ ಹಾಗೂ ಉಡುಪಿ ಜಿಲ್ಲೆಯ 4,367 ಅರ್ಜಿಗಳನ್ನು ಅರ್ಹವೆಂದು ಸರ್ಕಾರ ಪರಿಗಣಿಸಿದೆ. ಹಾಗಾಗಿ, ಅತಿ ಶೀಘ್ರವಾಗಿ ಅರ್ಹರಿಗೆ ಪಡಿತರ ಕಾರ್ಡ್‌ ಲಭ್ಯವಾಗಲಿದೆ.

ಹೊಸ ಆದ್ಯತಾ ಪಡಿತರ ಚೀಟಿಗಾಗಿ, 2017ರಿಂದ 2022ರ ವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿದ್ದು, ಈ ಪೈಕಿ ವಾರ್ಷಿಕ ಹಿರಿತನದ ಆಧಾರದ ಮೇಲೆ ಅರ್ಜಿ ವಿಲೇವಾರಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ 2017-18ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮೊದಲು ವಿಲೇವಾರಿ ಮಾಡಿದ ಬಳಿಕ, ಅದೇ ಕ್ರಮದ ಅನುಸಾರ ಇನ್ನುಳಿದ ವರ್ಷದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಹಿರಿತನದ ಆಧಾರದಲ್ಲಿ ವಿಲೇವಾರಿ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಲ್ಲಿಕೆಯಾದ 3,851 ಅರ್ಜಿಗಳ ಪೈಕಿ 3,597 ಸದ್ಯ ಇಲ್ಲಿಯವರೆಗೆ ಅರ್ಜಿಗಳ ಸ್ಥಳ ಪರಿಶೀಲನೆ ಆಗಿದ್ದು, ಈ ಪೈಕಿ 3,356 ಅರ್ಜಿಗಳು ಅರ್ಹ ಎಂದು ಸರಕಾರ ಗುರುತಿಸಿದೆ.

ಉಡುಪಿ ಜಿಲ್ಲೆಯಲ್ಲಿ 5,657 ಅರ್ಜಿಗಳ ಪೈಕಿ 4,501 ಅರ್ಜಿಗಳ ಸ್ಥಳ ಪರಿಶೀಲನೆ ಕಾರ್ಯ ನಡೆದಿದ್ದು, ಈ ಪೈಕಿ 4,367 ಅರ್ಜಿಗಳು ಅರ್ಹವೆಂದು ನಿರ್ಧಾರ ಕೈಗೊಳ್ಳಲಾಗಿದೆ.

Leave A Reply

Your email address will not be published.