Phantom 200 ಇಯರ್‌ಬಡ್ಸ್ ಬಿಡುಗಡೆ| ಕೇವಲ 999 ರೂ.ಗೆ ಲಭ್ಯ! ಇದರ ಫೀಚರ್ಸ್ ಹೀಗಿದೆ

ಆಡಿಯೋ ಉತ್ಪನ್ನಗಳ ಜನಪ್ರಿಯ ಬ್ರ್ಯಾಂಡ್ ಎಂದೆನಿಸಿರುವ Wings ಕಂಪೆನಿಯು ಇದೀಗ ಹೊಸ ಉತ್ತಮ ಫೀಚರ್ಸ್ ಹೊಂದಿರುವ Phantom 200 ಎಂಬ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಇನ್ನೂ ಇದರ ಬೆಲೆ ಎಷ್ಟೆಂದರೆ ಕೇವಲ 999 ರೂ. ಆಗಿದೆ. ಹಾಗಾದರೆ ಇದರ ಫೀಚರ್ಸ್ ಮತ್ತು ಇದರ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

ಈ ಹೊಸ ಇಯರ್‌ಬಡ್ಸ್ ಆಡಿಯೋ ಮತ್ತು ಗೇಮಿಂಗ್‌ ಅನುಭವಕ್ಕಾಗಿ ಅಕೌಸ್ಟಿಕ್ ಎಕೋ ಕ್ಯಾನ್ಸಲೇಶನ್ ವೈಶಿಷ್ಟ್ಯವನ್ನು ಹೊಂದಿರುವ ಸಾಧನವಾಗಿದ್ದು, 13mm ಗ್ರ್ಯಾಫೀನ್ ಆಡಿಯೋ ಡ್ರೈವರ್‌ಗಳು ಮತ್ತು ಟಚ್ ಕಂಟ್ರೋಲ್‌ ವೈಶಿಷ್ಟ್ಯಗಳ ಜೊತೆಗೆ ಕಣ್ಮನ ಸೆಳೆದಿದೆ.

ಇನ್ನೂ ಈ Phantom 200 ಇಯರ್‌ಬಡ್ಸ್ ನ ಫೀಚರ್ಸ್ ಹೀಗಿದೆ. ಈ ಹೊಸ Phantom 200 ಇಯರ್‌ಬಡ್ಸ್ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಸೌಂಡ್‌ಗಾಗಿ 13 ಎಂಎಂ ಗ್ರ್ಯಾಫೀನ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಉತ್ತಮ ಧ್ವನಿ, ಗುಣಮಟ್ಟಕ್ಕಾಗಿ ಕ್ವಾಡ್ ಡಿಎನ್ಎಸ್ ಮೈಕ್ರೊಫೋನ್ ಹಾಗೂ ಹೊರಗಿನ ಶಬ್ದವನ್ನು ಕಡಿಮೆಗೊಳಿಸಲು ನೋಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯದಿಂದ ಕೂಡಿದೆ.

ಹಾಗೇ ಬ್ಲೂಟೂತ್ 5.3 ಸಂಪರ್ಕವನ್ನು ಹೊಂದಿದ್ದು, ಏಕಕಾಲದಲ್ಲಿ ಎರಡು ಸಾಧನಗಳಿಗೆ ಹಾಗೂ 15m ವ್ಯಾಪ್ತಿಯವರೆಗೆ ಸಂಪರ್ಕಿಸಬಹುದಾಗಿದೆ. ಹಾಗೂ ಈ ಸಾಧನವು ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ಕಮಾಂಡ್‌ಗಳನ್ನು ಬೆಂಬಲಿಸುತ್ತದೆ.

ಈ ಹೊಸ ಇಯರ್‌ಬಡ್ಸ್ 40ms ಅಲ್ಟ್ರಾ-ಲೋ ಲೇಟೆನ್ಸಿಯೊಂದಿಗೆ ಮೀಸಲಾಗಿರುವ ಗೇಮಿಂಗ್ ಮೋಡ್ ಅನ್ನು ಹೊಂದಿದೆ. ಹಾಗೇ ಬಳಕೆದಾರರು 2 ಸೆಕೆಂಡುಗಳ ಕಾಲ ಬಲ ಇಯರ್‌ಬಡ್ ಅನ್ನು ಟ್ಯಾಪ್ ಮಾಡುವ ಮೂಲಕ ಗೇಮಿಂಗ್ ಮೋಡ್ ಆಕ್ಟೀವ್ ಮಾಡಬಹುದು. ಹಾಗೂ ಗೇಮಿಂಗ್ ಸಮಯದಲ್ಲಿ ಸಂಭಾಷಣೆಯನ್ನೂ ಕೂಡ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಗೇಮಿಂಗ್ ಸಮಯದಲ್ಲಿ ಥಿಕ್ ಗ್ರೀನ್‌ ಗೇಮಿಂಗ್ LED ಹೈಲೈಟ್ಸ್ ಇದ್ದು, ಇದು ನೀವು ಗೇಮ್ ಆಡುವ ವೇಳೆ Phantom 200 ಸಾಧನದ ಕೇಸ್ ಎಷ್ಟು ಚಾರ್ಜ್ ಆಗಿದೆ ಎಂಬುದನ್ನು ಸೂಚಿಸುತ್ತದೆ.

ಈ ಸಾಧನವು ಒಂದೇ ಚಾರ್ಜ್‌ನಲ್ಲಿ ಚಾರ್ಜಿಂಗ್ ಕೇಸ್‌ನೊಂದಿಗೆ 38 ಗಂಟೆಗಳ ಬ್ಯಾಕ್‌ಅಪ್‌ ನೀಡಲಿದೆ. ಹಾಗೇ ಕೇಸ್‌ ಇಲ್ಲದೆ 8 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆಯಂತೆ. ಜೊತೆಗೆ ಹೈ-ಸ್ಪೀಡ್ ಬುಲೆಟ್ ಚಾರ್ಜ್ ತಂತ್ರಜ್ಞಾನ ಬಳಸಿಕೊಂಡು 10 ನಿಮಿಷಗಳಲ್ಲಿ 20 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಒದಗಿಸಲಿದೆಯಂತೆ. ಇನ್ನೂ ಈ ಸಾಧನದಲ್ಲಿ ಟಚ್ ಕಂಟ್ರೋಲ್‌ಗಳು, IPX5 ರೇಟಿಂಗ್‌ ವಾಟರ್‌ ರೆಸಿಸ್ಟೆನ್ಸಿ ಮತ್ತು USB-C ಚಾರ್ಜಿಂಗ್ ಪೋರ್ಟ್ ವೈಶಿಷ್ಟ್ಯಗಳು ಕೂಡ ಇದೆ.

ಇನ್ನೂ Wings ಕಂಪೆನಿಯಿಂದ ಬಿಡುಗಡೆಯಾದ ಈ ಹೊಸ Phantom 200 ಇಯರ್‌ಬಡ್ಸ್ ಸಾಧನವು ಕೇವಲ 999ರೂ. ಬೆಲೆಗೆ ಲಭ್ಯವಿದೆ. ಹಾಗೂ ಇಂದಿನಿಂದಲೇ ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟಕ್ಕಿದೆ. ಇದರ ಬಣ್ಣ ಕಪ್ಪು ಮತ್ತು ಬಿಳಿಯ ಆಯ್ಕೆಯಲ್ಲಿದೆ. ಈ ಸಾಧನವನ್ನು Wings ಕಂಪೆನಿಯ ಅಧಿಕೃತ ವೆಬ್‌ಸೈಟ್ ನ ಮೂಲಕ ಕೂಡ ಖರೀದಿ ಮಾಡಬಹುದಾಗಿದೆ.

Leave A Reply

Your email address will not be published.