ಮದುವೆ ಮನೆಯಲ್ಲಿ ಇನ್ನು ಮುಂದೆ ನೃತ್ಯ, ಡಿಜೆ ಹಾಕುವಂತಿಲ್ಲ | ಹೊಸ ರೂಲ್ಸ್‌

ಇಸ್ಲಾಂ ಸಮುದಾಯದ ಮದುವೆ ಸಮಾರಂಭದ ಕುರಿತಾಗಿ ಹೊಸ ನಿಯಮ ಜಾರಿಗೆ ಬರಲಿದೆ. ಹೌದು!!! ಇನ್ನು ಮುಂದೆ ಮುಸ್ಲಿಂ ಸಮುದಾಯದ ಮದುವೆ ಸಮಾರಂಭಗಳಲ್ಲಿ ಅದ್ದೂರಿಯಾಗಿ ಡಿಜೆ, ಪಟಾಕಿ ಸಿಡಿಸುವ ಪ್ಲಾನ್ ಇದ್ದರೆ ಬಿಟ್ಟು ಬಿಡಿ!! ಏಕೆಂದರೆ ಇನ್ನೂ ಮುಂದೆ ಇವೆಲ್ಲವೂ ಬಂದ್ ಆಗಲಿವೆ.

ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಇನ್ನು ಮುಂದೆ ನೃತ್ಯ, ಜೋರಾದ ಸಂಗೀತ, ಡಿಜೆ ಮತ್ತು ಪಟಾಕಿ ಹೊಡೆಯುವ ಆಚರಣೆಗಳಿಗೆ ಬ್ರೇಕ್ ನೀಡುವ ನಿಯಮ ಅನುಷ್ಠಾನಕ್ಕೆ ಬರಲಿದೆ. ಒಂದು ವೇಳೆ ನಿಯಮ ಉಲ್ಲಂಸಿದರೆ ದಂಡ ವಿಧಿಸುವುದಾಗಿ ಜಾರ್ಖಂಡ್‌ನ‌ ಧನ್‌ಬಾದ್‌ ಜಿಲ್ಲೆಯ ಇಮಾಮ್‌ ಒಬ್ಬರು ಸೋಮವಾರ ಫ‌ತ್ವಾ ಹೊರಡಿಸಿದ್ದಾರೆ.ಧನ್‌ಬಾದ್‌ನ ನಿರ್ಸಾ ಬ್ಲಾಕ್‌ನ ಸಬಿಲಿಬಡಿ ಜಾಮಾ ಮಸೀದಿಯ ಮುಖ್ಯ ಇಮಾಮ್‌ ಮೌಲಾನ ಮಸೂದ್‌ ಅಖ್ತರ್‌ ನೇತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತಾದ ನಿರ್ಣಯ ಕೈಗೊಳ್ಳಲಾಗಿದೆ.

ಈ ನಿಯಮದ ಪ್ರಕಾರ, ಡಿ.2ರಿಂದ ನಿಯಮ ಜಾರಿಗೆ ಬರಲಿದ್ದು, ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಇಸ್ಲಾಂಗೆ ವಿರುದ್ಧವಾಗಿ ನೃತ್ಯ, ಡಿಜೆ ಸಂಗೀತ ಮತ್ತು ಪಟಾಕಿ ಸಿಡಿಸಲು ಅನುಮತಿಯಿಲ್ಲ. ಹಾಗೇನಾದರೂ ನಿಯಮ ಉಲ್ಲಂಘಿಸಿದರೆ 5,100 ರೂ. ದಂಡ ವಿಧಿಸಲಾಗುತ್ತದೆ.

ಇದರ ಜೊತೆಗೆ ಅಶುಭ ಸಮಯದ ಕಾರಣದ ನಿಮಿತ್ತ ರಾತ್ರಿ 11ರ ಬಳಿಕ ಶುಭ ಕಾರ್ಯ ನಡೆಸುವಂತಿಲ್ಲ . ಈ ಸಂದರ್ಭದಲ್ಲಿಯು ಮದುವೆ ಮಾಡಿ ಈ ನಿಯಮ ಮುರಿದರೂ ಕೂಡ ದಂಡ ವಿಧಿಸಲಾಗುತ್ತದೆ ಎಂಬುದಾಗಿ ಫ‌ತ್ವಾ ಹೊರಡಿಸಲಾಗಿದೆ.

Leave A Reply

Your email address will not be published.