ಚಂದನವನದ ಮತ್ತೊಂದು ಜೋಡಿ ಮದುವೆ ಅತಿ ಶೀಘ್ರದಲ್ಲಿ| ಕೈ ಕೈ ಹಿಡಿದುಕೊಂಡು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ವಸಿಷ್ಠ ಹರಿಪ್ರಿಯ ಜೋಡಿ

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸದ್ದು ಜೋರಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಬಳಿಕ ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದೆ.. ಹೌದು. ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬೇಡಿಕೆಯಲ್ಲಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಅವರು ಹಸೆಮಣೆ ಏರಲಿದ್ದಾರಾ?? ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.

 

ಇತ್ತೀಚೆಗಷ್ಟೇ, ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಚಂದನವನದ ಚೆಲುವೆಯ ಕೈ ಹಿಡಿಯುವ ಸುಕುಮಾರ ವಸಿಷ್ಠ ಸಿಂಹ ಎನ್ನಲಾಗುತ್ತಿದೆ.

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಬೆಂಗಳೂರು ಏರ್ಪೋರ್ಟ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಪ್ರಣಯ ಜೋಡಿಗಳು ಜೊತೆ ಜೊತೆಯಲಿ ಹೆಜ್ಜೆ ಹಾಕಿರುವ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಚಂದನ ವನದ ಬ್ಯೂಟಿ ಕ್ವೀನ್ ಗಳೆಲ್ಲ ಮದುವೆ ಯಾಗುತ್ತಿದ್ದು, ಇದೀಗ ನಟಿ ಹರಿಪ್ರಿಯಾ ಕೂಡ ಮದುವೆಗೆ ಅಣಿಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಟ ವಸಿಷ್ಠ ಸಿಂಹ ಅವರು ಕನ್ನಡದಲ್ಲಿ ಮಾತ್ರವಲ್ಲದೆ, ಪರಭಾಷೆಯಲ್ಲೂ ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದಾರೆ. ಹಾಗೆಯೇ ನಟಿ ಹರಿಪ್ರಿಯಾ ಕೂಡ ಬೇಡಿಕೆಯ ನಟಿಯೇ!!. ಈ ಮಧ್ಯೆ ಇವರಿಬ್ಬರು ಮದುವೆ ಆಗಲಿದ್ದಾರೆ ಎಂಬ ಮಾಹಿತಿ ದಟ್ಟವಾಗಿ ಹಬ್ಬಿದೆ.

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ದುಬೈ ಪ್ರವಾಸಕ್ಕೆ ತೆರಳಿದ್ದು, ಏಪೋರ್ಟ್​ನಲ್ಲಿ ಜೊತೆಯಾಗಿ ಕೈ ಹಿಡಿದು ಬರುತ್ತಿರುವ ದೃಶ್ಯ ಕಂಡು ಬಂದಿದ್ದು, ಇತ್ತೀಚೆಗಷ್ಟೇ ವಶಿಷ್ಠ ,ಹರಿಪ್ರಿಯಾ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿತ್ತು.ಇದಕ್ಕೆ ಇಂಬು ನೀಡುವಂತೆ ಈಗ ಜೋಡಿ ಜೊತೆಯಾಗಿ ಕಾಣಿಸಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.. ನಟಿ ಅದಿತಿ ಪ್ರಭುದೇವ ಮದುವೆಯ ಬೆನ್ನಲ್ಲೇ, ಮತ್ತೊಂದು ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯಲಿದ್ದಾರಾ?? ಅನ್ನೋ ಕುತೂಹಲ ಸಾಮಾನ್ಯ ಜನತೆಗೆ ಕಾಡುತ್ತಿದೆ.

ವಶಿಷ್ಠ ,ಹರಿಪ್ರಿಯಾ ಕೆಂಪೆಗೌಡ ಏರ್ ಪೋರ್ಟ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಹಿಂದಿನ ಗುಟ್ಟೇನು ಎಂಬ ಪ್ರಶ್ನೆಗೆ ಈ ಜೋಡಿ ರಹಸ್ಯ ಬಿಟ್ಟು ಕೊಟ್ಟಿಲ್ಲ!! ಆದರೂ, ಡಿಸೆಂಬರ್ ನಲ್ಲಿ ಈ ಜೋಡಿ ನಿಶ್ಚಿತಾರ್ಥ ಆಗಲಿದ್ದಾರೆ ಎಂಬ ಊಹಾ ಪೋಹಗಳು ಹರಿದಾಡುತ್ತಿವೆ. ಏನೇ ಆಗಲಿ… ಚಂದನವನದ ಸುಂದರಿಗೆ ಶುಭವಾಗಲಿ ಅಂತ ಹಾರೈಸೋಣ!!.

Leave A Reply

Your email address will not be published.