ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ

ರೈಲಿನಲ್ಲಿ ದೂರದ ಪ್ರಯಾಣವನ್ನು ಮಾಡುವುದರಿಂದ ಸುಲಭವಾಗಿ ಶೀಘ್ರವಾಗಿ ತಲುಪಬಹುದಾಗಿದೆ. ಆದರೆ ನಾವು ರೈಲ್ವೇ ನಿಲ್ದಾಣಕ್ಕೆ ಬಂದು ರೈಲು ಬರುವ ವರೆಗೆ ಕಾಯುವುದು ಒಂದು ಬಹಳ ಕಷ್ಟಕರ ಕೆಲಸ. ಹೌದು ಕೆಲವೊಮ್ಮೆ ರೈಲು 5-10 ನಿಮಿಷ ತಡವಾಗಿ ರೈಲು ನಿಲ್ದಾಣಕ್ಕೆ ಬರಬಹುದು. ಆದರೆ ರೈಲು ಬರೋದು ಗಂಟಾನುಗಟ್ಟಲೆ ಲೇಟಾದ್ರೆ ಪರಿಸ್ಥಿತಿ ಹೇಗಿರುತ್ತದೆ. ನಮಗಂತೂ ಕೋಪ ನೆತ್ತಿಗೆ ಏರಬಹುದು.

ಆದರೆ ಇಲ್ಲೊಂದು ಕಡೆ ಸಸತ 9 ಗಂಟೆಗಳ ಕಾಲ ಜನರು ಕಾಯುತ್ತಿದ್ದ ರೈಲು ಬಂದ ಕಾರಣ ಎಲ್ಲರೂ ನಿಟ್ಟುಸಿರು ಬಿಟ್ಟು, ಕುಣಿದು ಕುಪ್ಪಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ವಿಡಿಯೋವೊಂದರಲ್ಲಿ ಪ್ರಯಾಣಿಕರು ಬಹಳ ಸಂತಸದಿಂದ ರೈಲು ಪ್ಲಾಟ್‌ಫಾರ್ಮ್‌ನಲ್ಲಿ ಕುಣಿದು ಕುಪ್ಪಳಿಸುವ ದೃಶ್ಯ ಕಾಣಬಹುದಾಗಿದೆ.

ಭಾನುವಾರ ಹಾರ್ದಿಕ್ ಬೊಂತು ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಈ ಕಿರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಹಳ ಸಮಯದ ನಂತರ ರೈಲು ನಿಲ್ದಾಣಕ್ಕೆ ಬಂದರೂ ಜನರು ದಣಿದಂತೆ ಕಾಣುವುದಕ್ಕಿಂತ ಹೆಚ್ಚಾಗಿ ನೃತ್ಯ ಮಾಡಿ ಸಂಭ್ರಮಿಸುತ್ತಿರುವುದನ್ನು ನೋಡಬಹುದು.

ಪ್ಲಾಟ್‌ಫಾರ್ಮ್‌ನಲ್ಲಿ ನೂರಾರು ಪ್ರಯಾಣಿಕರು ತಾಳ್ಮೆಯಿಂದ ನಿಂತಿದ್ದು, ಸ್ವಲ್ಪ ದೂರದಿಂದ ಬರುತ್ತಿರುವ ರೈಲಿನಿಂದ ಪ್ರಕಾಶಮಾನವಾದ ಬೆಳಕನ್ನು ಕುತೂಹಲದಿಂದ ನೋಡುತ್ತಿರುವುದನ್ನು ವೀಡಿಯೊ ಪ್ರಾರಂಭವಾಗುತ್ತದೆ. ಕೆಲವು ಸೆಕೆಂಡುಗಳ ನಂತರ, ಪ್ಲಾಟ್‌ಫಾರ್ಮ್‌ನ ಪಕ್ಕದಲ್ಲಿ ರೈಲು ನಿಧಾನವಾಗುತ್ತಿದ್ದಂತೆ, ಜನರು ನೃತ್ಯ, ಚಪ್ಪಾಳೆ ಮತ್ತು ಪ್ಯಾಸೆಂಜರ್ ರೈಲು ಆಗಮನವನ್ನು ಆಚರಿಸಿದರು. ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿಯು ರೈಲಿನ ಮುಂದೆ ನಮಸ್ಕರಿಸುವುದನ್ನು ಸಹ ನೋಡಬಹುದು.

ಒಟ್ಟಿನಲ್ಲಿ ರೈಲು ತಡವಾಗಿ ಬಂದರೂ ಸಹ ಜನರು ಖುಷಿಯಿಂದ ರೈಲನ್ನು ಬರಮಾಡಿಕೊಂಡಿರುವ ದೃಶ್ಯ ನೋಡುವಾಗ ಆಶ್ಚರ್ಯ ಅನಿಸುವುದು ಖಂಡಿತ.

Leave A Reply

Your email address will not be published.