ದೇವರ ನಾಡಲ್ಲಿ ಸಲಿಂಗಿಗಳ ಅದ್ಧೂರಿ ಮದುವೆಗೆ ವೇದಿಕೆ ರೆಡಿ | ಪ್ರೀವೆಡ್ಡಿಂಗ್‌ ಫೋಟೋಶೂಟ್‌ ನಲ್ಲಿ ಮಿಂದೆದ್ದ ನವಜೋಡಿ

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರ ಇಚ್ಚೆಯ ಅನುಸಾರ ಜೀವಿಸಲು ಅವಕಾಶವಿದೆ. ಹಾಗೆಂದ ಮಾತ್ರಕ್ಕೆ ಸಮಾಜದ ಕಟ್ಟುಪಾಡಿಗೆ ವಿರುದ್ಧವಾಗಿ ನಡೆದುಕೊಂಡಾಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ವಿರೋಧದ ನಡುವೆ ಜೀವಿಸಬೇಕಾಗುತ್ತದೆ.

ಈ ಹಿಂದೆ ತಮ್ಮ ಕುಟುಂಬದವರಿಂದ ತಿರಸ್ಕೃತಗೊಂಡು ಬೇರ್ಪಟ್ಟ ಕೇರಳದ ಜೋಡಿಗಳು ಮತ್ತೆ ಕೇರಳ ಹೈಕೋರ್ಟ್ ಮೂಲಕ ಒಂದಾಗಿದ್ದು, ಸದ್ಯ ಅವರ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ. ಇದಕ್ಕೆ ಕಾರಣವೂ ಇದೆ!!!ದೇವರನಾಡಿನ ಸಲಿಂಗಿ ಜೋಡಿಗಳಾದ ಅದಿಲಾ ನಸ್ರೀನ್ ಹಾಗೂ ಫಾತಿಮಾ ನೂರ್ ಎಂಬ ಹಸೆಮಣೆ ಏರಲು ಮುಂದಾಗಿದ್ದು, ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು, ಪ್ರಸ್ತುತ ಇವರಿಬ್ಬರ ವಿಚಾರ ಎಲ್ಲೆಡೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಈ ಜೋಡಿಯ ಫೋಟೊ ಶೂಟ್ ಗಳು, ವೈರಲ್ ಆಗುತ್ತಿದ್ದು, ಕೆಲವರು ಇದನ್ನು ನೋಡಿ ಕಾಲೆಳೆಯುವ ಪ್ರಯತ್ನ ಮಾಡಿದರೆ ಮತ್ತೆ ಕೆಲವರು ಇದನ್ನು ಪ್ರೋತ್ಸಾಹಿಸಿದ್ದಾರೆಪ್ರಸ್ತುತ ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಪ್ರಕಾರ ಸಮ್ಮತಿಯಿಲ್ಲ. ಆದರೂ ಈ ಕುರಿತಂತೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆದರೂ ಈ ಜೋಡಿ ಸದ್ಯದಲ್ಲೇ ಮದುವೆಯಾಗುವ ಯೋಜನೆಯಲ್ಲಿ ಇರದೆ ಇರುವುದರಿಂದ ಏನು ಸಮಸ್ಯೆ ಎದುರಾಗದು.

ಸಲಿಂಗ ಕಾಮಿ ಇಬ್ಬರು ಯುವತಿಯರು ಸೌದಿ ಅರೇಬಿಯಾದಲ್ಲಿ ಶಾಲೆಯೊಂದರಲ್ಲಿ 11 ನೇ ತರಗತಿಯಲ್ಲಿ ಅಧ್ಯಯನ ಮಾಡುವಾಗ ಭೇಟಿಯಾಗಿದ್ದಾರೆ ಎನ್ನಲಾಗಿದೆ . ದ್ವಿತೀಯ ಪಿಯುಸಿ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ, ಅವರಿಬ್ಬರು ಸಲಿಂಗಿಗಳು ಎಂಬ ವಿಚಾರ ತಿಳಿದು ಬಂದಿದ್ದು, ಅಷ್ಟೆ ಅಲ್ಲದೆ, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು . ಈ ವಿಚಾರ ಮನೆಯವರಿಗೆ ಗೊತ್ತಾಗಿ ಸಂಬಂಧವನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ, ಭಾರತಕ್ಕೆ ಹಿಂತಿರುಗಿ ಕಾಲೇಜಿಗೆ ಸೇರಿದ ಬಳಿಕವೂ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.

ಇವರಿಬ್ಬರ ಸಂಬಂಧದ ಬಗ್ಗೆ ಕಳೆದ ಜೂನ್‌ನಲ್ಲಿ ಪೋಷಕರಿಗೆ ತಿಳಿದಿದ್ದು, ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಮನೆಯವರು ಇಬ್ಬರನ್ನು ಬೇರ್ಪಡಿಸಿದ್ದಾರೆ. ಹಾಗಾಗಿ, ಈ ವಿಚಾರದ ಕುರಿತಾಗಿ ಕೋರ್ಟ್ ಮೊರೆ ಹೊಕ್ಕ ಸಲಿಂಗ ಕಾಮಿ ಜೋಡಿಗೆ ಕೇರಳ ಹೈಕೋರ್ಟ್ ಮಧ್ಯ ಪ್ರವೇಶಿಸಿ ಇಬ್ಬರು ಕೂಡ ಜೊತೆಯಾಗಿ ಜೀವಿಸಲು ಅವಕಾಶ ಕಲ್ಪಿಸಿದೆ.

ಸದ್ಯ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮುಂಚಿನ ಸವಿ ಕ್ಷಣಗಳ ಫೋಟೊ ಶೂಟ್ ಮಾಡಿಕೊಂಡಿದ್ದು, ಇವರ ಫೋಟೋ ಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.

“ನಾವು ಕೇವಲ ಫೋಟೋಶೂಟ್ ಅನ್ನು ಪ್ರಯತ್ನಿಸಿದ್ದು, ನಮ್ಮ ಈ ಕಲ್ಪನೆಯು ಆಸಕ್ತಿದಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದು ಈ ಫೋಟೋ ಶೂಟ್ ಬಗ್ಗೆ ಅಧಿಲಾ ಹೇಳಿಕೊಂಡಿದ್ದಾರೆ.

ಆದರೆ, ಈ ಜೋಡಿ ಭವಿಷ್ಯದಲ್ಲಿ ಹಸೆಮಣೆ ಏರುವ ಕನಸು ಹೊತ್ತಿದ್ದು, ಅದಕ್ಕೂ ಮುಂಚೆ ಫೋಟೊ ಶೂಟ್ ಮಾಡಿಕೊಂಡಿದಾರಷ್ಟೆ!! ಸಲಿಂಗಿ ಸಮುದಾಯಕ್ಕೆ (queer community) ಆರ್ಥಿಕವಾಗಿ ಸ್ವತಂತ್ರರಾಗುವಂತೆ ತನ್ನನ್ನು ಬೆಂಬಲಿಸುವ ಜನರಿಗೆ (financially independent) ಈ ಜೋಡಿ ಸಲಹೆ ನೀಡಿದ್ದಾರೆ.

ಈ ಜೋಡಿಗಳು ಮನೆಯವರಿಂದ ದೂರವಾಗಿ ಜೀವಿಸುತ್ತಿದ್ದು, ಆದರೆ ಯಾವುದೇ ಅರ್ಜಿ ಭರ್ತಿ ಮಾಡಬೇಕಾದ ಸಂದರ್ಭ ಅರ್ಜಿಗಳಲ್ಲಿ ಗಂಡ ಹೆಂಡತಿ ತಂದೆಯ ಹೆಸರನ್ನು ಕೇಳುತ್ತಿರುವುದರ ಕುರಿತು ಅಧಿಲಾಆಕ್ರೋಶ ಹೊರಹಾಕಿದ್ದಾರೆ. ಪ್ರಸ್ತುತ ತಾನು ಹಾಗೂ ಫಾತಿಮಾ ಪೋಷಕರೊಂದಿಗೆ ವಾಸ ಮಾಡುತ್ತಿಲ್ಲವಾದರಿಂದ ಇದು ತಮಗೆ ಮತ್ತಷ್ಟು ಇಕಟ್ಟಿಗೆ ಸಿಲುಕಿಸಿದೆ ಎಂದು ಹೇಳಿಕೊಂಡಿದ್ದಾರೆ.

ಫಾತಿಮಾ ಹಾಗೂ ಅಧಿಲಾ ಅವರ ಕುಟುಂಬದವರು ಇವರ ಸಂಬಂಧ ಹೆಚ್ಚು ದಿನ ಉಳಿಯದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಇವರಿಬ್ಬರೂ ಕೂಡ ಸೌದಿ ಅರೇಬಿಯಾದಲ್ಲಿ ಬಾಲ್ಯದ ದಿನಗಳಿಂದಲೂ ಕೂಡ ಜೊತೆಯಾಗಿ ಇದ್ದವರಾಗಿದ್ದು, ಫಾತಿಮಾ (Fathima) ಹಾಗೂ ಅಧಿಲಾಗೆ (Adhila) ಸಾಕಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಈ ಸಲಿಂಗಿ ಜೋಡಿ ಹೇಳಿಕೊಂಡಿದೆ. ಆದರೇ, ಈ ನಡುವೆ ಈ ಜೋಡಿಗೆ ಟೀಕೆ ಮಾಡುವ ಜನರು ಏನು ಕಮ್ಮಿಯಿಲ್ಲ!!!.

Leave A Reply

Your email address will not be published.