Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ!
ಇಂದಿನ ಬಿಡುವಿಲ್ಲದ ಜೀವನ ಶೈಲಿ ಮತ್ತು ಅನಿಯಮಿತ ಆಹಾರಕ್ರಮದಿಂದ ಅನೇಕ ಜನರು ಅಧಿಕ ತೂಕದ ಸಮಸ್ಯೆ ಎದುರಿಸುತ್ತಿದ್ದಾರೆ. ಬೊಜ್ಜು ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ ಸೇರಿದಂತೆ ವಿವಿಧ ಕಾಯಿಲೆಗಳು ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ತೂಕವನ್ನು ನಿಯಂತ್ರಿಸುವುದು ಅವಶ್ಯಕ.
ತೂಕವನ್ನು ಇಳಿಸಲು ಕೆಲವರು ಜಿಮ್’ಗೆ ಹೋಗುತ್ತಾರೆ, ಇನ್ನೂ ಕೆಲವರು ಮನೆಯಲ್ಲೇ ವರ್ಕೌಟ್ ಮಾಡುತ್ತಾರೆ. ಆದರೆ ನಿಮಗೆ ತಿಳಿದಿದೆಯಾ? ನೀವೆನಾದರೂ ಮೊಟ್ಟೆ ಪ್ರಿಯರಾಗಿದ್ದರೆ ನಿಮ್ಮ ತೂಕವನ್ನು ಬಹು ಬೇಗನೆ ಕಡಿಮೆ ಮಾಡಬಹುದು! ಹೌದು, ನಾವು ಹೇಳುವ ಈ ಮೂರು ಪದಾರ್ಥಗಳೊಂದಿಗೆ ನೀವು ಮೊಟ್ಟೆಯನ್ನು ಸೇವಿಸಿದರೆ ನಿಮ್ಮ ತೂಕವು ಕಡಿಮೆಯಾಗುತ್ತದೆ.
ಕ್ಯಾಲ್ಸಿಯಂ ಗಣಿಯಾಗಿರುವ ಮೊಟ್ಟೆಗಳಲ್ಲಿ ಪ್ರೋಟೀನ್‌ಗಳು ಸಮೃದ್ಧವಾಗಿದ್ದೂ ಅನೇಕ ಜನರು ತಮ್ಮ ನಿಯಮಿತ ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸುತ್ತಾರೆ. ಮೊಟ್ಟೆಯನ್ನು ಬೇಯಿಸಿ, ಆಮ್ಲೆಟ್, ಭುರ್ಜಿ, ಎಗ್ ಕರಿ ಹೀಗೆ ಹಲವು ರೀತಿಯಲ್ಲಿ ತಿನ್ನುತ್ತಾರೆ. ಕೆಲ ಆಹಾರಗಳ ಜೊತೆ ಮೊಟ್ಟೆಗಳನ್ನು ತಿನ್ನುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಕ್ಯಾಪ್ಸಿಕಂ:- ಅನೇಕ ರೆಸ್ಟೋರೆಂಟ್ ಹಾಗೂ ಹೊಟೇಲ್ ಗಳಲ್ಲಿ ಮೊಟ್ಟೆಗಳಿಂದ ತಯಾರಾದ ಆಹಾರವನ್ನು ಕ್ಯಾಪ್ಸಿಕಂನಿಂದ ಅಲಂಕರಿಸಲಾಗುತ್ತದೆ. ಇದು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಇದ್ದು ಇದು ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನೀವು ಮನೆಯಲ್ಲಿ ಕ್ಯಾಪ್ಸಿಕಂನೊಂದಿಗೆ ಮೊಟ್ಟೆಗಳ ಆಹಾರ ಪದಾರ್ಥವನ್ನು ತಯಾರಿಸಿ. ಪ್ರತಿದಿನ ಮೊಟ್ಟೆ ಮತ್ತು ಕ್ಯಾಪ್ಸಿಕಂ ಅನ್ನು ಒಟ್ಟಿಗೆ ತಿನ್ನುವುದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ.
ಕರಿಮೆಣಸಿನ ಪುಡಿ:- ನೀವು ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ಗಳ ಮೇಲೆ ಕರಿಮೆಣಸಿನ ಪುಡಿಯನ್ನು ಹಾಕುವಿದರಿಂದ ಮೊಟ್ಟೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ನಮ್ಮ ದೇಹವನ್ನು ಆರೋಗ್ಯಕರವಾಗಿಸುತ್ತದೆ. ಕರಿಮೆಣಸು ಪೈಪರಿನ್ ಎಂಬ ಸಂಯುಕ್ತವನ್ನು ಹೊಂದಿರುವುದರಿಂದ ಇದರ ರುಚಿ ಕಹಿಯಾಗಿರುತ್ತದೆ. ಈ ಮಸಾಲೆ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆ:- ತೆಂಗಿನ ಎಣ್ಣೆಯ ಪ್ರಯೋಜನಗಳು ಒಂದೆರಡಲ್ಲಾ ಹಲವಾರು ಉಪಯೋಗಗಳು ಇದರಲ್ಲಿದೆ. ಇದು ಕಡಿಮೆ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ತೆಂಗಿನ ಎಣ್ಣೆಯಲ್ಲಿ ಆಮ್ಲೆಟ್ ಅನ್ನು ಬೇಯಿಸುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.