ಗಮನಿಸಿ ಸಾರ್ವಜನಿಕರೇ | ಡಿ.12 ರೊಳಗೆ ನಿಮ್ಮ ಈ ಕೆಲಸ ಪೂರ್ಣಗೊಳಿಸಿ | ಇಲ್ಲದಿದ್ದರೆ ಖಾತೆ ಕ್ಲೋಸ್
ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವದ ವಿಷಯವನ್ನು ಬಹಿರಂಗಪಡಿಸಿದೆ. ಈ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರು ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಡಿಸೆಂಬರ್ 12ರೊಳಗೆ ಕೆವೈಸಿ ದಾಖಲೆಗಳನ್ನು ನವೀಕರಿಸಲು ಹೇಳಿದೆ ಆದರೆ ಈ ನಿಯಮ ಎಲ್ಲಾ ಗ್ರಾಹಕರಿಗೂ ಅನ್ವಯ ಆಗುವುದಿಲ್ಲ ಎಂದು ನವೆಂಬರ್ 20 ಮತ್ತು 21 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಸಾಮಾಜಿಕ ಮಾಧ್ಯಮ ಮೂಲಕ ಈ ಮಾಹಿತಿಯನ್ನು ತಿಳಿಸಿದೆ.
ಹೌದು ಇದುವರೆಗೂ ಕೆವೈಸಿ ಅಪ್ಡೇಟ್ ಮಾಡಿಕೊಳ್ಳದೇ ಉಳಿದಿರುವ ಗ್ರಾಹಕರು ಈ ಬಾರಿ ಕಡ್ಡಾಯವಾಗಿ KYC ನವೀಕರಿಸಬೇಕು. ಈಗಾಗಲೇ ಅಂತಹ ಗ್ರಾಹಕರಿಗೆ ಬ್ಯಾಂಕ್ ಎಸ್ಎಂಎಸ್ ಮೂಲಕ ಮಾಹಿತಿ ನೀಡಿದೆ. ಇದರ ಜೊತೆಗೆ ನೋಂದಾಯಿತ ಸ್ಥಳಕ್ಕೆ ಎರಡು ನೋಟಿಸ್ ಸಹ ಕಳುಹಿಸಲಾಗಿದೆ.
ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಿ ವಿಳಾಸ ಪುರಾವೆ, ಇತ್ತೀಚಿನ ಭಾವಚಿತ್ರ, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಆದಾಯ ಪುರಾವೆ ಇತ್ಯಾದಿಗಳನ್ನು ಒದಗಿಸುವ ಮೂಲಕ KYC ಅನ್ನು ನವೀಕರಿಸಬಹುದು. KYC ಅನ್ನು ಆನ್ಲೈನ್ನಲ್ಲಿ ನವೀಕರಿಸಲು ಬಯಸಿದರೆ, ಅವರು ಬ್ಯಾಂಕ್ನ ವೆಬ್ಸೈಟ್ನಲ್ಲಿ ಲಭ್ಯವಿರುವ ಇಮೇಲ್ ವಿಳಾಸಕ್ಕೆ ದಾಖಲೆಗಳನ್ನು ಕಳುಹಿಸಬಹುದು.
ಆರ್ಬಿಐ ನಿಯಮಗಳ ಪ್ರಕಾರ, ಎಲ್ಲಾ ಗ್ರಾಹಕರು ಕಡ್ಡಾಯವಾಗಿ KYC ಅಪ್ಡೇಟ್ ಮಾಡಬೇಕು. ಕೆವೈಸಿ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಕೂಡಲೇ ಸಮೀಪದ ತಮ್ಮ ಬ್ಯಾಂಕ್ ಶಾಖೆಗೆ ತೆರಳಿ ಕೆವೈಸಿ ಅಪ್ಡೇಟ್ ಮಾಡಲು ತಿಳಿಸಲಾಗಿದೆ. ಅವಧಿ ಮುಕ್ತಾಯವಾದ ಬಳಿಕ ಕೆವೈಸಿ ಅಪ್ಡೇಟ್ ಮಾಡದಿದ್ರೆ ನಿಮ್ಮ ಖಾತೆಯನ್ನು ನಿಷ್ಕ್ರಿಯ ಮಾಡಲಾಗುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವೀಟ್ ಪ್ರಕಾರ ಮತ್ತು RBI ಮಾನದಂಡಗಳ ಪ್ರಕಾರ KYC ಅಪ್ಡೇಟ್ ಕಡ್ಡಾಯವಾಗಿದೆ. ಬ್ಯಾಂಕ್ ಯಾವುದೇ ನವೀಕರಣಕ್ಕಾಗಿ ಗ್ರಾಹಕರಿಗೆ ಕರೆ ಮಾಡುವುದಿಲ್ಲ ಮತ್ತು ವೈಯಕ್ತಿಕ ಮಾಹಿತಿಯನ್ನು ಅನುಮೋದಿಸುವುದಿಲ್ಲ ಎಂದು ಹೇಳಿದೆ.
ಸದ್ಯ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯ KYC ಬಾಕಿ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಗ್ರಾಹಕರ ಸಹಾಯವಾಣಿ ಸಂಖ್ಯೆಗಳಾದ 1800 180 2222, 1800 103 2222, 0120 2490000 ಇತ್ಯಾದಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.