PM Mudra Yojana : ರೂ.4,500 ಕೇಂದ್ರಕ್ಕೆ ಕೊಟ್ಟರೆ ದೊರೆಯುತ್ತೆ 10 ಲಕ್ಷ ಸಾಲ!!! ಸತ್ಯಾಂಶ ಏನು?
ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೆಯೇ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಯಡಿಯಲ್ಲಿ ಕಾರ್ಪೊರೇಟ್ ಮತ್ತು ಕೃಷಿಯೇತರ ಸಣ್ಣ/ಸೂಕ್ಷ್ಮ ಕೈಗಾರಿಕೆಗಳಿಗೆ ರೂ.10 ಲಕ್ಷದವರೆಗೆ ಸಾಲ ಸಿಗುವ ವಿಚಾರ ಈಗಾಗಲೇ ನಿಮಗೆ ತಿಳಿದಿರಬಹುದು.
2015 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಅನೇಕ ಜನರು ಪ್ರಯೋಜನ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ.
ಆದರೆ ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಡಿಜಿಟಲೀಕರಣದ ಪ್ರಭಾವದಿಂದ ಬ್ಯಾಂಕಿಂಗ್ ಸೇವೆಗಳೂ ಡಿಜಿಟಲ್ ಆಗಿವೆ. ಈ ದಿನಗಳಲ್ಲಿ ಗ್ರಾಹಕರಿಗೆ ಆನ್‌ಲೈನ್ ಸಾಲಗಳು ಸುಲಭವಾಗಿ ಲಭ್ಯವಿವೆ. ಆದರೆ ಇದರ ಜೊತೆಗೆ ಸೈಬರ್ ವಂಚನೆ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಸದ್ಯ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ರೂ.10 ಲಕ್ಷಕ್ಕೆ ರೂ.4500 ಪಾವತಿಸಬೇಕು ಎಂದು ಪ್ರಕಟಿಸಲಾಗಿದೆ.
ಪ್ರಸ್ತುತ ಮುದ್ರಾ ಯೋಜನೆಯ ಅಡಿಯಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಆರ್‌ಆರ್‌ಬಿಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಎಂಎಫ್‌ಐಗಳು ಮತ್ತು ಎನ್‌ಬಿಎಫ್‌ಸಿಗಳು ಸಾಲ ನೀಡುತ್ತಿವೆ. ಸಾಲ ಬಯಸುವವರು ಇವುಗಳಲ್ಲಿ ಯಾವುದನ್ನಾದರೂ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಇತ್ತೀಚೆಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಸಂಬಂಧಿಸಿದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಿಎಂಎಂವೈ ಶೀರ್ಷಿಕೆಯ ಈ ಪತ್ರದಲ್ಲಿ ಪ್ರಧಾನಿಯವರ ಭಾವಚಿತ್ರವನ್ನೂ ಮುದ್ರಿಸಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ರೂ.10 ಲಕ್ಷ ಸಾಲಕ್ಕೆ ಕೇವಲ ರೂ.4500 ಪರಿಶೀಲನೆ ಮತ್ತು ಪ್ರಕ್ರಿಯೆಗೆ ಪಾವತಿಸಿದರೆ ಸಾಕು. ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ನಗದು ಜಮಾ ಆಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ 4500 ರೂ. ಪಾವತಿಸುವಂತೆ ವೈರಲ್ ಆಗುತ್ತಿರುವ ಪತ್ರ ನಕಲಿ. ಹಣಕಾಸು ಸಚಿವಾಲಯವು ಈ ಪತ್ರವನ್ನು ನೀಡಿಲ್ಲ ಎಂದು ಮಾಹಿತಿ ನೀಡಿದೆ . ಈ ಪತ್ರದ ಜೊತೆಗೆ ಟ್ವೀಟ್ ಮಾಡಿದೆ. ಅಂತಹ ಪತ್ರಕ್ಕೆ ಸಂಬಂಧಿಸಿದಂತೆ ನೀವು ಸಂದೇಶ ಅಥವಾ ಇಮೇಲ್ ಅನ್ನು ಸ್ವೀಕರಿಸಿದರೆ, ಅದನ್ನು ನಂಬಬೇಡಿ ನಿರ್ಲಕ್ಷಿಸಿ ಎಂದು ಎಚ್ಚರ ನೀಡಿದೆ