WhatsApp : ನಿಮ್ಮ ಚಾಟ್ ನ್ನು ಯಾರಾದರೂ ಓದುತ್ತಿದ್ದಾರಾ? ಈ ರೀತಿ ಪತ್ತೆ ಹಚ್ಚಿ
ನಿಮ್ಮ ವಾಟ್ಸಪ್ ಚಾಟ್ನ್ನು ಯಾರಾದರೂ ಓದುತ್ತಿದ್ದಾರೆ ಎಂದು ನಿಮಗೆ ಅನುಮಾನವಿದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಬಹುದು. ಹೇಗೆಂದು ಯೋಚನೆಯೇ? ಹಾಗಾದರೆ ಇಲ್ಲಿ ಕೇಳಿ. ವಾಟ್ಸಪ್ ಚಾಟ್ ನ್ನು ಓದುತ್ತಿದ್ದಾರಾ ಎಂದು ಪತ್ತೆಹಚ್ಚುಲು ಅದ್ಭುತ ಫೀಚರ್ಸ್ ಒಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ ಆಗಿರುವ ವಾಟ್ಸಪ್ ಅನ್ನು ಮಿಲಿಯನ್ಗಟ್ಟಲೆ ಜನರು ಬಳಸುತ್ತಾರೆ. ಎಷ್ಟೋ ಜನರು ವಾಟ್ಸಪ್ ನಲ್ಲಿ ಮೆಸೇಜ್,ಕರೆ,ವಿಡಿಯೋ ಕರೆಗಳ ಮೂಲಕ ಚಿರಪರಿಚಿತರಾಗುತ್ತಾರೆ. ಆದರೆ ಈ ಹಿಂದೆ ವಾಟ್ಸಪ್ ಕೆಲವೊಂದು ಭದ್ರತಾ ಲೋಪಗಳನ್ನು ಹೊಂದಿದೆ ಎಂಬ ದೂರಿನ ಮೇರೆಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರಿಚಯಿಸಿತು. ಹಾಗಿದ್ದಾಗ ನಿಮ್ಮ ವಾಟ್ಸಪ್ ಚಾಟ್ನ್ನು ಯಾರಾದರೂ ಓದುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ ಅಲ್ವಾ!! ಅದಕ್ಕಾಗಿ ಪೀಚರ್ಸ್ ಒಂದಿದೆ ಇದನ್ನು ಬಳಸಿ ನಿಮ್ಮ ವಾಟ್ಸಪ್ ಸಂವಾದಗಳನ್ನು ಯಾರು ಓದುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು.
ವಾಟ್ಸಪ್ ನಲ್ಲಿ ನೀವು ಒಂದು ಮೆಸೇಜ್ ಅನ್ನು ಆಯ್ಕೆಮಾಡಿ ಮೇಲ್ಭಾಗದ ಬಲಮೂಲೆಯಲ್ಲಿರುವ ಮೂರು ಐಕಾನ್‌ಗಳನ್ನು ಸ್ಪರ್ಶಿಸಿ ಮಾಹಿತಿಯನ್ನು ಟ್ಯಾಪ್ ಮಾಡಿ. ಆಗ ಯಾವಾಗ ಮೆಸೇಜ್ ಡೆಲಿವರಿ ಆಗಿದೆ ಹಾಗೂ ಓದಿದ್ದಾರೆ ಎಂದು ತಿಳಿದುಕೊಳ್ಳಬಹುದು.
ಇನ್ನೂ ವಾಟ್ಸಪ್ ಲಿಂಕ್ ಫೀಚರ್ ಹೆಚ್ಚುವರಿ ಡಿವೈಸ್‌ಗಳಿಗೆ ವಾಟ್ಸ್‌ಆ್ಯಪ್ ಬಳಕೆಯನ್ನು ಸಕ್ರಿಯಗೊಳಿಸುತ್ತದೆ. ಹಾಗಾಗಿ ಪ್ರೈಮರಿ ವಾಟ್ಸಪ್ ಚಾಟ್‌ಗಳನ್ನು ಓದಲು ಬಳಕೆದಾರರು ಇದನ್ನು ಬಳಸಬಹುದಾಗಿದೆ. ಹ್ಯಾಕರ್ ಮತ್ತು ಸ್ಕ್ಯಾಮರ್‌ಗಳು ಈ ಫೀಚರ್ಸ್ ಅನ್ನು ಬಳಸಿಕೊಳ್ಳಬಹುದು. ವಾಟ್ಸಪ್ ಲಿಂಕ್ ಫೀಚರ್ಸ್ ಬಳಸಿಕೊಂಡು ಹ್ಯಾಕರ್ ಗಳು, ಸ್ಕ್ಯಾಮರ್‌ಗಳು ಚಾಟ್ ಅನ್ನು ಓದಲೂಬಹುದು. ನೀವು ಕೂಡ ಇದನ್ನು ಪರಿಶೀಲಿಸಬಹುದು. ಹೇಗೆಂದರೆ, ವಾಟ್ಸಪ್ ಚಾಟ್ ನ ಎಡಭಾಗದ ಮೂಲೆಯಲ್ಲಿರುವ ಮೂರು ಡಾಟ್‌ಗಳನ್ನು ಕ್ಲಿಕ್ ಮಾಡಬೇಕು.
ಇನ್ನು ಲಿಂಕ್ ಆಗಿರುವ ಡಿವೈಸ್‌ಗಳನ್ನು ಈ ರೀತಿ ಪರಿಶೀಲಿಸಿ, ಲಿಂಕ್ ಆಗಿರುವ ಡಿವೈಸ್‌ಗಳ ಆಯ್ಕೆಯನ್ನು ನೀವು ಆರಿಸಬೇಕು. ಆಗ ನಿಮಗೆ ನಿಮ್ಮ ವಾಟ್ಸಪ್ ಸಂಪರ್ಕ ಇರುವ ಸಾಧನದ ಮಾಹಿತಿ ದೊರೆಯುತ್ತದೆ. ಗುರುತಿಸದೇ ಇರುವ ಬ್ರೌಸರ್ ಅಥವಾ ಡಿವೈಸ್ ನಿಮಗೆ ಕಂಡುಬಂದಲ್ಲಿ ನೀವು ಅದನ್ನು ತೆಗೆದುಹಾಕಬಹುದಾಗಿದೆ.
ಇದಕ್ಕಾಗಿ ನೀವು ಕಂಪ್ಯೂಟರ್ ಅಥವಾ ಬ್ರೌಸರ್ ಅನ್ನು ಆಯ್ಕೆಮಾಡಬೇಕು. ನಂತರ ಡಿಲೀಟ್ ಆಪ್ಶನ್ ಅನ್ನು ಆಯ್ಕೆ ಮಾಡಿ. ಇಷ್ಟು ಸಾಕಾಗದೆ ನಿಮಗೆ ಹೆಚ್ಚಿನ ಸುರಕ್ಷತೆ ಬೇಕಾದರೆ, ಬಿಲ್ಟ್-ಇನ್ ಆ್ಯಪ್ ಲಾಕ್ ಬಳಸಿ ವಾಟ್ಸಪ್ ಅನ್ನು ಲಾಕ್ ಮಾಡಬಹುದಾಗಿದೆ. ಹಾಗೂ ಅಗತ್ಯವಿದ್ದಲ್ಲಿ ಟು-ಫ್ಯಾಕ್ಟರ್ ಸೆಕ್ಯುರಿಟಿ ಕೋಡ್‌ಗಳನ್ನು ಕೂಡ ಬಳಸಬಹುದಾಗಿದೆ.