ಸಿಹಿ ಸುದ್ದಿ | ವಾಲುವ ರೈಲುಗಳು ಬರುತ್ತದೆ, ಸೈಡ್ ಕೊಡಿ‌| ಈ ರೈಲು ಹೇಗಿದೆ? ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ!

ಸಾಮಾನ್ಯವಾಗಿ ರೈಲು ಎಲ್ಲರಿಗೂ ಗೊತ್ತಿರೋದೆ ಹಲವಾರು ಜನರು ಅದರಲ್ಲಿ ಪ್ರಯಾಣ ಕೂಡ ಮಾಡಿರುತ್ತೀರಾ! ಆದರೆ ಇನ್ನು ಮೂರೇ ವರ್ಷಗಳಲ್ಲಿ ಭಾರತಕ್ಕೆ ವಾಲುವ ರೈಲು (ಟಿಲ್ಟಿಂಗ್‌ ಟ್ರೈನ್‌)ಎಂಟ್ರಿ ಕೊಡಲಿದೆಯಂತೆ.

ಅಂದರೆ 2025-26ರ ವೇಳೆಗೆ ವಾಲುವ ತಂತ್ರಜ್ಞಾನವುಳ್ಳ 100 ವಂದೇ ಭಾರತ್‌ ರೈಲುಗಳು ಭಾರತಕ್ಕೆ ಕಾಲಿಡಲಿದೆ. ಈಗಾಗಲೇ ಇದರ ತಯಾರಿ ಬಗ್ಗೆ ಚಿಂತನೆ ನಡೆಸಲಾಗಿದೆ. 2025ರಲ್ಲಿ ತಯಾರಾಗಲಿರುವ 400 ವಂದೇ ಭಾರತ್‌ ರೈಲುಗಳ ಪೈಕಿ 100ರಲ್ಲಿ ಈ ತಂತ್ರಜ್ಞಾನ ವನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಈ ವಾಲುವ ರೈಲು ಹೇಗಿರಬಹುದು? ಹೇಗೆ ಚಲಿಸಬಹುದು? ಈ ಕುತೂಹಲಗಳಿಗೆ ಉತ್ತರ ಇಲ್ಲಿದೆ. ತಿರುವು ಇರುವಂತಹ ರಸ್ತೆಗಳಲ್ಲಿ ಬೈಕುಗಳು ಹೇಗೆ ವಾಲಿಕೊಂಡು ಮುಂದೆ ಚಲಿಸುತ್ತದೆಯೋ ಅದೇ ಮಾದರಿಯಲ್ಲಿ ಈ ರೈಲುಗಳು ಕೂಡ ಇದೆ. ಅಧಿಕ ವೇಗದಲ್ಲಿ ಸಂಚರಿಸುವಾಗಲೂ ಕೂಡ ಬಾಗುವಂಥ ತಂತ್ರಜ್ಞಾನವಾಗಿದೆ. ಸಾಮಾನ್ಯ ಬ್ರಾಡ್‌ಗೆàಜ್‌ ಹಳಿಗಳಲ್ಲೂ ಈ ತಂತ್ರಜ್ಞಾನ ಕೆಲಸ ಮಾಡಲಿದೆ.

ಈಗಾಗಲೇ ಈ ವಾಲುವ ರೈಲುಗಳು ಇಟಲಿ, ಪೋರ್ಚುಗಲ್‌, ಯುಕೆ, ಚೀನಾ, ಜರ್ಮನಿ ಸೇರಿದಂತೆ 11 ದೇಶಗಳಲ್ಲಿವೆ. ಇನ್ನೂ ಮೂರು ವರ್ಷಗಳಲ್ಲಿ ಭಾರತಕ್ಕೂ ಎಂಟ್ರಿಯಾಗಲಿದೆ. ಹಾಗೇ 2025-26ರ ವೇಳೆಗೆ ಯುರೋಪ್‌, ದಕ್ಷಿಣ ಅಮೆರಿಕ, ಪೂರ್ವ ಏಷ್ಯಾದ ಮಾರುಕಟ್ಟೆಗಳಿಗೆ ವಂದೇ ಭಾರತ್‌ ರೈಲುಗಳನ್ನು ಭಾರತ ರಫ್ತು ಮಾಡಲು ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.