ಸುಳ್ಯ: ಪತ್ನಿಯನ್ನು ಕೊಲೆಮಾಡಿ ಗೋಣಿ ಚೀಲದಲ್ಲಿ ಹಾಕಿ ಎಸ್ಕೇಪ್ ಆದ ಆರೋಪಿ ಪೋಲೀಸರ ಬಲೆಗೆ

Share the Article

ಸುಳ್ಯ: ಇಲ್ಲಿನ ಬೀರಮಂಗಳದ ಮನೆಯೊಂದರಲ್ಲಿ ಪತ್ನಿಯನ್ನು ಕೊಲೆಮಾಡಿ ಗೋಣಿ ಚೀಲದಲ್ಲಿ ತುಂಬಿಸಿಟ್ಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಪತಿಯನ್ನು ಪೋಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳದ ಇಮ್ರಾನ್ ಶೇಖ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಸುಳ್ಯ ಪೊಲೀಸರು ಕರೆತಂದಿದ್ದಾರೆ.

ಆರೋಪಿ ಸುಳ್ಯದ ಬೀರಮಂಗಳದ ಮನೆಯೊಂದರಲ್ಲಿ ಹೆಂಡತಿ ಜೊತೆ ಕಳೆದ ಏಳು ತಿಂಗಳಿಂದ ವಾಸವಾಗಿದ್ದ ಆರೋಪಿ ತನ್ನ ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಟ್ಟು ಪರಾರಿಯಾಗಿದ್ದ, ಎರಡು ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಬಂದು ಬಾಡಿಗೆ ಮನೆಯ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಗೋಣಿಚೀಲದಲ್ಲಿ ಆತನ ಪತ್ನಿಯ ಶವ ಪತ್ತೆಯಾಗಿತ್ತು. ಪತಿಯೇ ಆಕೆಯನ್ನು ಕೊಲೆಗೈದು ಪರಾರಿಯಾಗಿರುವ ಶಂಕೆಯ ಮೇರೆಗೆ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಪಶ್ಚಿಮ ಬಂಗಳಾದಲ್ಲಿ ಸಿಕ್ಕಿ ಬಿದ್ದಿದ್ದಾನೆ.

Leave A Reply