Simplyfy Your Work : ಈ ಟಿಪ್ಸ್ ನೀವು ಫಾಲೋ ಮಾಡಿದರೆ ಆಫೀಸ್ ಕೆಲಸ ಫಟಾಫಟ್ ಅಂತ ಆಗುತ್ತೆ!

ನಮ್ಮ ಜೀವನ ನಿರ್ವಹಣೆಗೆ ಉದ್ಯೋಗ ಅವಶ್ಯಕವಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ಬರುವ ಎಲ್ಲಾ ಬೇಡಿಕೆಗಳನ್ನು ಉದ್ಯೋಗವು ಈಡೇರಿಸುತ್ತದೆ ಅಂತ ಹೇಳಿದರೆ ತಪ್ಪಾಗಲಾರದು. ಆದರೆ ಕೆಲವರಿಗೆ ಕೆಲಸವನ್ನು ಸಮಯಕ್ಕನುಗುಣವಾಗಿ ನಿಭಾಯಿಸಲು ಕಷ್ಟವಾಗುತ್ತದೆ. ನೀವೇನಾದರೂ ಇಂತಹ ಸಮಸ್ಯೆಗೊಳಗಾಗಿದ್ದೀರಾ? ಹಾಗಾದರೆ ಟೆನ್ಷನ್ ಬೇಡಾ ನಾವು ಹೇಳುವ ಈ ಸಿಂಪಲ್ ಟಿಪ್ಸ್ ಅನ್ನು ಫಾಲೋ ಮಾಡಿ ಕಚೇರಿಯಲ್ಲಿ ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ಕುಳಿತು ಕೆಲಸ ಮಾಡುವ ಅವಶ್ಯಕತೆ ಇರುವುದಿಲ್ಲ.

ಸ್ವಚ್ಛತೆ:- ನಿಮ್ಮ ಕೆಲಸದ ಸ್ಥಳ ಅಂದರೆ ಡೆಸ್ಕ್ ಕಾಗದಪತ್ರಗಳ ರಾಶಿಯಿಂದ ತುಂಬಿದ್ದರೆ, ಕೆಲಸಗಳನ್ನು ಜ್ಞಾಪಿಸುವ ಚಿಕ್ಕಪುಟ್ಟ ಟಿಪ್ಪಣಿ, ನಿಮಗೆ ಬೇಕಾದ ವಸ್ತುಗಳು ಡೆಸ್ಕ್ ಮೇಲೆ ಬೇಗನೆ ಸಿಗುತ್ತಿಲ್ಲ ಎಂದರೆ ಇದು ಸ್ವಚ್ಛಗೊಳಿಸುವ ಸಮಯ ಅಂತ ತಿಳಿದುಕೊಳ್ಳಿರಿ. ನೀವು ಪ್ರತಿದಿನ ಸ್ಥಳವನ್ನು ಸ್ವಚ್ಛವಾಗಿರಿಸಿದ ನಂತರವೇ ಕಚೇರಿಯಿಂದ ತೆರಳಿ. ಇದರಿಂದ ಚಿಕ್ಕಪುಟ್ಟ ವಸ್ತುಗಳನ್ನು ಹುಡುಕಲು ತೆಗೆದುಕೊಳ್ಳುವ ಸಮಯವೂ ಉಳಿತಾಯವಾಗುತ್ತದೆ ಹಾಗೂ ಸ್ವಚ್ಛವಾದ ಡೆಸ್ಕ್ ನಲ್ಲಿ ಪ್ರತಿದಿನ ಬೆಳಿಗ್ಗೆ ಬಂದು ಕುಳಿತಾಗ ನಿಮಗೆ ತಾಜಾತನದ ಅನುಭವ ನೀಡುತ್ತದೆ.

ಕೆಲಸದ ಪಟ್ಟಿ ಚೊಕ್ಕವಾಗಿರಲಿ:- ಎಷ್ಟೇ ಕೆಲಸಗಳಿದ್ದರೂ ಅದನ್ನು ಉದ್ದದ ಲೀಸ್ಟ್ ಮಾಡದೆ ಶಾರ್ಟ್ ಅಂಡ್ ಸ್ವೀಟ್ ಆಗಿ, ನಿಮಗೆ ಅರ್ಥವಾಗುವ ತರಹ ಮಾಡಬೇಕಾದ ಕೆಲಸಗಳ ಪಟ್ಟಿಗಳನ್ನು ಚೊಕ್ಕದಾಗಿ ರಚಿಸಿ. ತುಂಬಾ ಕೆಲಸವಿದ್ದಾಗ ಉದ್ದದ ಮಾಡಬೇಕಾದ ಕೆಲಸಗಳ ಪಟ್ಟಿ ತುಂಬಾನೇ ತಲೆ ಕೆಡಿಸುತ್ತದೆ. ಆ ದಿನ ನೀವು ಸಂಪೂರ್ಣವಾಗಿ ಮಾಡಿ ಮುಗಿಸಬೇಕಾದ ಕೆಲಸಗಳನ್ನು ಮಾತ್ರ ಪಟ್ಟಿ ಮಾಡಿಕೊಳ್ಳಿ. ದಿನದ ಕೊನೆಯಲ್ಲಿ ನಾಳೆ ನೀವು ನಿಭಾಯಿಸಬೇಕಾದ ಕೆಲಸಗಳನ್ನು ಬರೆಯಿರಿ, ಇದರಿಂದ ನೀವು ಕಚೇರಿಗೆ ಬಂದ ತಕ್ಷಣವೇ ಕೆಲಸ ಶುರು ಮಾಡಬಹುದು.

ಇ-ಮೇಲ್ ಗಳು ಚಿಕ್ಕದಾಗಿರಲಿ:- ಗ್ರಾಹಕರಿಗೆ, ನಿಮ್ಮ ಮ್ಯಾನೇಜರ್ ಗೆ ಅಥವಾ ನಿಮ್ಮ ತಂಡದ ಸದಸ್ಯರಿಗೆ ಇ-ಮೇಲ್ ಗಳನ್ನು ಬರೆಯುವಾಗ ನೀವು ಹೇಳಲು ಬಯಸುವ ವಿಷಯ ನೇರವಾಗಿರಲಿ ಮತ್ತು ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ. ಅಂದರೆ ನೀವು ದೊಡ್ಡ ಪ್ಯಾರಾಗ್ರಾಫ್ ಗಳ ಬದಲು ಒಂದು ಅಥವಾ ಎರಡು ವಾಕ್ಯಗಳನ್ನು ಬರೆದರೆ, ಇದು ನಿಮ್ಮ ಸಮಯವನ್ನು ಉಳಿಸುವುದು ಮಾತ್ರವಲ್ಲದೆ, ಇದು ಇತರರ ಸಮಯವನ್ನು ಸಹ ಉಳಿಸುತ್ತದೆ.

ನಿಮ್ಮನ್ನು ವಿಚಲಿತಗೊಳಿಸುವ ವಿಷಯಗಳಿಂದ ದೂರವಿರಿ: ಸಾಮಾಜಿಕ ಮಾಧ್ಯಮಗಳು ಅಥವಾ ಗುಂಪಾಗಿ ಕುಳಿತು ಹರಟೆ ಹೊಡೆಯುವುದು, ಸುದ್ದಿ ಲೇಖನಗಳನ್ನು ಪರಿಶೀಲಿಸಲು ದಿನವಿಡೀ ವಿರಾಮ ತೆಗೆದುಕೊಳ್ಳುವುದನ್ನು ನೀವು ಅತಿಯಾಗಿ ಮಾಡುತ್ತಿದ್ದರೆ, ಅದೆಲ್ಲವನ್ನು ಮಿತಿಗೊಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ನಿಮ್ಮ ಮೊಬೈಲ್ ಗೆ ಬರುವ ಅಧಿಸೂಚನೆಗಳನ್ನು ಪರಿಶೀಲಿಸಲು ನಿರ್ದಿಷ್ಟವಾಗಿ ದಿನದಲ್ಲಿ ಒಂದು ಸಮಯವನ್ನು ಮೀಸಲಿಡಿ, ಆದರೆ ನೀವು ಆನೈನ್ ನಲ್ಲಿ ಬ್ರೌಸ್ ಮಾಡುವ ಅಭ್ಯಾಸಕ್ಕೆ ಬಿದ್ದಿದ್ದರೆ, ವೆಬ್‌ಸೈಟ್ ಬ್ಲಾಕ‌್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿರಿ. ಕೆಲಸ ಮಾಡದ ವೆಬ್‌ಸೈಟ್ ಗಳನ್ನು ಪರಿಶೀಲಿಸುವ ನಿಮ್ಮ ಹವ್ಯಾಸವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ ಅಲ್ಲದೆ ಇದು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ನಿರ್ದಿಷ್ಟ ಕೆಲಸದ ಸಮಯ:- ಕೆಲಸವನ್ನು ನಿಮ್ಮೊಂದಿಗೆ ಮನೆಗೆ ಕೊಂಡೊಯ್ಯುವುದು ಸುಲಭ, ಆದರೆ ಅದೊಂದು ಆಯ್ಕೆ ಅನ್ನೋದನ್ನು ಯಾವತ್ತೂ ಮರೆಯಬೇಡಿ. ಕೆಲವೊಮ್ಮೆ ನಿಮ್ಮ ಕ್ಲೈಂಟ್, ಕಚೇರಿ ಅವಧಿಯ ನಂತರ ಯಾವುದೋ ತುರ್ತು ಕೆಲಸಕ್ಕೆ ಕರೆ ಮಾಡಬಹುದು. ಇಂತಹ ಸಮಯಗಳನ್ನು ಹೊರತುಪಡಿಸಿ ಸಾಧ್ಯವಾದಷ್ಟು ಮಟ್ಟಿಗೆ, ನಿಮ್ಮ ಕೆಲಸವನ್ನು ಕಚೇರಿಯಲ್ಲಿಯೇ ಇರಿಸಿಕೊಳ್ಳಿರಿ. ಏಕೆಂದರೆ ಕೆಲಸದ ಸಮಯದಲ್ಲಿ ಕೆಲಸ ಮಾಡಬೇಕು. ಅದೇ ರೀತಿ ಮನೆಗೆ ಹೋದ ನಂತರ ಕುಟುಂಬದವರ ಜೊತೆ ಹೆಚ್ಚು ಸಮಯವನ್ನು ಕಳೆಯಬೇಕು. ಒಂದು ನಿರ್ದಿಷ್ಟವಾದ ಕೆಲಸದ ಸಮಯವನ್ನು ನಿಗದಿಪಡಿಸಿಕೊಳ್ಳಿರಿ.

Leave A Reply

Your email address will not be published.