BIGG NEW : ಮತ್ತೆ ಠಾಣೆ ಮೆಟ್ಟಿಲೇರಿದ ʻ ಪವಿತ್ರಾ ಲೋಕೇಶ್ | “ನನ್ನ, ನರೇಶ್‌ ಬಗ್ಗೆ ಅಶ್ಲೀಲ ಕಮೆಂಟ್ಸ್‌ ಮಾಡಿ ಕಿರುಕುಳ ” – ದೂರು ದಾಖಲು

ಬೆಂಗಳೂರು : ಹಿರಿಯ ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ಕೇಸ್‌ ತಣ್ಣಗಾಗಿದ್ರೂ, ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳು ಮಾತ್ರ ನಿಂತಿಲ್ಲ ಈ ಬಗ್ಗೆ ನಟಿ ಪವಿತ್ರಾ ಲೋಕೇಶ್ ಠಾಣೆ ಮೆಟ್ಟಿಲೇರಿದ್ದು ವೆಬ್‌ಸೈಟ್‌ ಹಾಗೂ ಯೂಟ್ಯೂಬ್ ಚಾನೆಲ್ಗಳ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಕೆಲ ದಿನಗಳಿಂದ ಹಿರಿಯ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಅಫೇರ್ ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆ ವೇಳೆ ಇಬ್ಬರೂ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡ ಸಂಚಲನ ಮೂಡಿಸಿತ್ತು. ನರೇಶ್ ಅವರ ಮಾಜಿ ಪತ್ನಿ ರಮ್ಯಾ ರಘುಪತಿ ಅವರು ಮೈಸೂರಿನ ಹೋಟೆಲ್ನಲ್ಲಿ ಒಟ್ಟಿಗೆ ಇದ್ದಾಗ ಅವರನ್ನ ಹಿಡಿದಿರುವ ವಿಡಿಯೋ ಕೂಡ ವೈರಲ್ ಆಗಿದೆ. ನಂತರ ಅವರು ಮದುವೆಯಾಗಿಲ್ಲ ಎಂದು ಘೋಷಿಸಿದ ನಂತ್ರ ವಿವಾದ ಸ್ವಲ್ಪಮಟ್ಟಿಗೆ ಇತ್ಯರ್ಥವಾಯಿತು. ಆದ್ರೆ, ಇತ್ತೀಚೆಗೆ ಸೂಪರ್ಸ್ಟಾರ್ ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ನರೇಶ್-ಪವಿತ್ರಿ ದಂಪತಿಗಳು ಹೈಲೈಟ್ ಆಗಿದ್ದರು. ಆಗ ನರೇಶ್ ಸ್ವಲ್ಪ ವರ್ತನೆ ಕೊಂಚ ಜಾಸ್ತಿಯೇ ಇತ್ತು ಎಂದು ಹಲವರು ಕಾಮೆಂಟ್ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 

ಇನ್ನು ಕೆಲವು ಯೂಟ್ಯೂಬ್ ಚಾನೆಲ್’ಗಳು ಹಾಗೂ ಹಲವು ವೆಬ್ ಸೈಟ್’ಗಳು ಅಶ್ಲೀಲ ಪೋಸ್ಟ್’ಗಳನ್ನ ಹಾಕಿದ್ದಾರೆ ಎಂದು ಪವಿತ್ರಾ ಲೋಕೇಶ್ ಕೆರಳಿದ್ದು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪವಿತ್ರಾ ಲೋಕೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೈಬರ್ ಕ್ರೈಂ ಎಸಿಪಿ ತಿಳಿಸಿದ್ದಾರೆ. ನಟಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave A Reply

Your email address will not be published.