Girls Matter: ಹುಡುಗಿಯರ ಬಗ್ಗೆ ಗೂಗಲ್ ತೆರೆದಿಟ್ಟಿದೆ ಈ ಶಾಕಿಂಗ್ ವಿಚಾರ | ಹುಡುಗಿಯರು ರಾತ್ರಿಯೆಲ್ಲಾ ಇಂಟರ್‌ನೆಟ್‌ನಲ್ಲಿ ಇದನ್ನೇ ಸರ್ಚ್ ಮಾಡೋದಂತೆ!

ನಮಗೆ ಯಾರಾದರೂ ಒಬ್ಬ ವ್ಯಕ್ತಿ ಪರಿಚಯ ಅಥವಾ ಯಾವುದೇ ವಿಷಯದ ಬಗ್ಗೆ ತಿಳಿಯಬೇಕೆಂದಿದ್ದರೆ, ಅದರ ಬಗ್ಗೆ ವಿವರಣೆ ಬೇಕಿದ್ದರೆ, ನಾವು ಮೊದಲು ಮಾಡೋ ಕೆಲಸ ಕಲಿಯುಗದ ಜ್ಞಾನಿ ‘ಗೂಗಲ್’ ನಲ್ಲಿ ಹುಡುಕೋದು. ಟೆಕ್ ಯುಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿರುವ ಗೂಗಲ್ ಯಾವುದೇ ಪ್ರಶ್ನೆ ಕೇಳಿದರೂ ಫಟಾಫಟ್ ಅಂತ ಕ್ಷಣ ಮಾತ್ರದಲ್ಲೇ ಉತ್ತರಿಸುತ್ತದೆ. ಟೆಕ್ನಾಲಜಿ ಯುಗದಲ್ಲಿ ಗೂಗಲ್ ಅತ್ಯಂತ ಅವಶ್ಯಕ ವೆಬ್ ಅಪ್ಲಿಕೇಶನ್. ಇದೊಂತರ ನಮಗೆ ಎಲ್ಲವನ್ನೂ ತಿಳಿಸುವ ಬೆಸ್ಟ್ ಫ್ರೆಂಡ್ ಎಂದರೆ ತಪ್ಪಾಗಲಾರದು.

ಗೂಗಲ್​ ಪ್ರತೀ ವರ್ಷವೂ ಅತೀ ಹೆಚ್ಚು ಸರ್ಚ್​ ಮಾಡಲಾದ ವಿಷಯವನ್ನು ಕಂಪನಿ ಬಿಡುಗಡೆ ಮಾಡುತ್ತದೆ. ಈ ಬಾರಿಯೂ ಸಂಶೋಧನೆಯನ್ನು ನಡೆಸಿದ್ದೂ, ಇದರ ಪ್ರಕಾರ ದೇಶದ 150 ಮಿಲಿಯನ್ ಇಂಟರ್​ನೆಟ್​ ಬಳಕೆದಾರರಲ್ಲಿ 60 ಮಿಲಿಯನ್ ಮಹಿಳೆಯರೇ ಹೆಚ್ಚು ಆನ್​ಲೈನ್​ನಲ್ಲಿ ಇರುತ್ತಾರೆಂದು ವರದಿ ಹೇಳುತ್ತದೆ. ಇದು ಮಾತ್ರವಲ್ಲದೆ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವೆಂದರೆ ಹುಡುಗಿಯರು ಒಬ್ಬರೇ ಇದ್ದಾಗ ಆನ್​ಲೈನ್​ನಲ್ಲಿ ಹೆಚ್ಚಾಗಿ ಏನನ್ನು ಹುಡುಕುತ್ತಾರೆ ಎಂಬುದನ್ನು ವರದಿ ಮಾಡಿದ್ದಾರೆ. ಹಾಗಿದ್ರೆ ಹುಡುಗಿಯರು ಒಬ್ಬರೆ ಇದ್ದಾಗ ಗೂಗಲ್​ನಲ್ಲಿ ಅದೇನೆಲ್ಲಾ ಸರ್ಚ್ ಮಾಡುತ್ತಾರೆ ಎಂಬುದನ್ನು ನೋಡೋಣ.

ಮುಖ್ಯವಾಗಿ ವರದಿಗಳ ಪ್ರಕಾರ ಹುಡುಗಿಯರು ತಮ್ಮ ಬಾಲ್ಯದಿಂದಲೇ ಹೆಚ್ಚು ಸೌಮ್ಯತೆ,ಜಾಣೆಯಾಗಿರುತ್ತಾರೆ. ಇದರಿಂದ ಅವರು ತಮ್ಮ ಮುಂದಿನ ಜೀವನದ ಸಾಧನೆಗಳ ಬಗ್ಗೆಯೇ ಚಿಂತಿಸುತ್ತಾರೆ. ಮುಂದೆ ತಾವು ನಿರ್ವಹಿಸಬಹುದಾದ ಕೆಲಸಗಳೇನು, ವಿದ್ಯಾರ್ಹತೆ ಬಗ್ಗೆ ಹೆಚ್ಚು ಹುಡುಕುತ್ತಿರುತ್ತಾರೆ. ಇದಲ್ಲದೆ ಅವರು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ, ತನಗೆ ನಿರ್ವಹಿಸಬಹುದಾದ ಕೆಲಸಗಳು ಯಾವ ರೀತಿಯದ್ದಾಗಿರಬೇಕು ಎಂಬುದನ್ನು ಗೂಗಲ್ನಲ್ಲಿ ಹುಡುಕುತ್ತಿರುತ್ತಾರೆ.

ಸಾಮಾನ್ಯವಾಗಿ ತಮ್ಮ ಸೌಂದರ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಹುಡುಗಿಯರು, ಇದಕ್ಕೆ ಸಂಬಂಧಿತ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಹಾಗಾಗಿ ಅವರು ರಾತ್ರಿಹೊತ್ತಿನಲ್ಲಿ ಮೊಬೈಲ್ ಬಳಕೆ ಮಾಡುವಾಗ ಇದಕ್ಕೆ ಸಂಬಂಧಿಸಿದಂತಹ ಶಾಪಿಂಗ್ ಸೈಟ್​ಗಳಲ್ಲಿ ಬಟ್ಟೆಗಳು, ಮೇಕಪ್ ಕಿಟ್​ಗಳನ್ನು ಹುಡುಕುತ್ತಾರೆ. ಇದಲ್ಲದೆ ಟ್ರೆಂಡಿಂಗ್​ನಲ್ಲಿರುವಂತಹ ಫ್ಯಾಶನ್​ಗಳಿಗೆ ಹೆಚ್ಚು ಗಮನಹರಿಸುತ್ತಾರೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ್ದನ್ನೇ ಗೂಗಲ್​ನಲ್ಲಿ ಹುಡುಕುತ್ತಾರೆಂದು ಕಂಪನಿ ತಿಳಿಸಿದೆ.

ಇವುಗಳ ಮಧ್ಯೆಯೂ ಇವರು ಇತ್ತೀಚೆಗೆ ಯಾವುದಾದರು ಗೋರಂಟಿ ಡಿಸೈನ್​ಗಳು ಬಂದಿದೆಯೇ, ಅಥವಾ ಹೆಚ್ಚು ಬಳಕೆಯಲ್ಲಿರುವ ಗೋರಂಟಿ ಬ್ರಾಂಡ್ ಗಳು ಯಾವುದೆಲ್ಲಾ ಎಂಬುದರ ಬಗ್ಗೆ ನೋಡುತ್ತಿರುತ್ತಾರೆ. ಮೊದಲೇ ಹೇಳಿದಂತೆ ತಮ್ಮ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಮಹಿಳೆಯರು, ತಮ್ಮ ಸೌಂದರ್ಯವನ್ನು ಕಾಪಾಡಲು ಬ್ಯೂಟಿ ಟಿಪ್ಸ್ ಅನ್ನು ನೋಡುತ್ತಾರೆ. ಅದ್ರಲ್ಲೂ ಅವರು ಕೊರಿಯನ್ ಬ್ಯೂಟಿ ಟಿಪ್ಸ್​ ಅನ್ನು ಹೆಚ್ಚು ಫಾಲೋ ಮಾಡುತ್ತಾರೆ. ಎಂದು ವರದಿ ಹೇಳಿದೆ.

ನೋಡಿದ್ರಲ್ಲಾ ಯಾವೆಲ್ಲಾ ವಿಷಯಗಳನ್ನು ಹುಡುಗಿಯರು ಒಬ್ಬರೇ ರಾತ್ರಿವೇಳೆ ಇರುವಾಗ ಹುಡುಕುತ್ತಾರೆಂದು. ನೀವು ಇದೇ ವಿಷಯಗಳನ್ನು ಸರ್ಚ್ ಮಾಡಿದ್ದೀರಾ?

Leave A Reply

Your email address will not be published.