ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ ಆತ್ಮಹತ್ಯೆ

ಬೇತುಲ್ (ಮಧ್ಯಪ್ರದೇಶ): ಬೆತುಲ್ ನ ಅಂತಾರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್ ಬಾಲ್ ಆಟಆಟಗಾರ್ತಿ ಪ್ರಾರ್ಥನಾ ಸಾಳ್ವೆ ಪಟ್ಟಣದ ಕೋಸ್ಮಿ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆತುಲ್ ನ ಗಂಜ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಅವರ ದೇಹವನ್ನು ಗೃಹರಕ್ಷಕ ದಳದ ಸಿಬ್ಬಂದಿ ಗುರುವಾರ ಅಣೆಕಟ್ಟಿನ ನೀರಿನಿಂದ ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಬುಧವಾರ ರಾತ್ರಿ ಆಕೆಯ ದೇಹವನ್ನು ಹೊರತೆಗೆಯುವಲ್ಲಿ ಪೊಲೀಸರು ಯಶಸ್ವಿಯಾಗಲಿಲ್ಲ. ಗುರುವಾರ ಬೆಳಿಗ್ಗೆ, ಗೃಹರಕ್ಷಕದಳದ ಸಿಬ್ಬಂದಿ ಅಣೆಕಟ್ಟಿನ ನೀರಿಗೆ ಧುಮುಕಿದರು, ಅಲ್ಲಿಂದ ಎರಡು ಗಂಟೆಗಳ ಕಠಿಣ ಶೋಧ ಕಾರ್ಯಾಚರಣೆಯ ನಂತರ ಆಕೆಯ ದೇಹವನ್ನು ಹೊರತೆಗೆಯಲಾಯಿತು ಎನ್ನಲಾಗಿದೆ.

ಏಳು ತಿಂಗಳ ಹಿಂದೆ ಇಂದೋರ್ ನಲ್ಲಿ ನಡೆದ ಅಹಿತಕರ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದ ಸಾಳ್ವೆ ಅವರ ಸಹೋದರನ ಸಾವಿನ ನಂತರ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಸಾಳ್ವೆ ಅವರ ತರಬೇತುದಾರ ರಾಕೇಶ್ ಬಾಜಪೇಯಿ ಹೇಳಿದ್ದಾರೆ.

Leave A Reply

Your email address will not be published.