PF ಕಾರ್ಮಿಕರಿಗೆ ಗುಡ್ ನ್ಯೂಸ್ !

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ.

ಇದೀಗ , ಪಿಎಫ್ ನೌಕರರಿಗೆ ಸರ್ಕಾರ ಸಿಹಿ ಸುದ್ಧಿ ನೀಡಲು ಅಣಿಯಾಗಿದೆ ಎನ್ನಲಾಗಿದೆ. ಹೌದು!!!.EPF ನಿವೃತ್ತಿ ಯೋಜನೆ ವೇತನ ಮಿತಿ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದು, ನಿವೃತ್ತಿ ಉಳಿತಾಯ ಯೋಜನೆಗಾಗಿ ವೇತನ ಮಿತಿ ಹೆಚ್ಚಳ ಮಾಡಲು ಚಿಂತನೆ ನಡೆದಿದ್ದು, ಇದರಿಂದ EPF ಗೆ ಕಡ್ಡಾಯವಾಗಿ ನೀಡಬೇಕಿರುವ ವಂತಿಗೆ ಮೊತ್ತದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗಿಯ ವಂತಿಗೆಗೆ ಸಮನಾದ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಇಪಿಎಫ್ ಖಾತೆಗೆ ಸಲ್ಲಿಸಬೇಕಾಗಿದ್ದು, ಈ ಎರಡೂ ಮೊತ್ತಗಳಿಗೆ ಸರಕಾರ ತಾನು ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು. ಇದೀಗ ಮತ್ತೊಂದು ಮಹತ್ತರ ನಿರ್ಧಾರ ಕೈಗೊಳ್ಳಲು ಸರ್ಕಾರ ಅಣಿಯಾಗಿದ್ದು, ಪಿಎಫ್ ನೌಕರರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಕಾರ್ಮಿಕರ ಉಳಿತಾಯದಲ್ಲಿ ಏರಿಕೆಯಾಗಿ ನಿವೃತ್ತಿಯ ನಂತರ ಲಾಭ ಪಡೆಯಬಹುದಾಗಿದೆ. ಹೊಸ ಯೋಜನೆಯಿಂದ ಇಪಿಎಫ್ ಭದ್ರತಾ ಯೋಜನೆಗೆ ಮತ್ತಷ್ಟು ಕಾರ್ಮಿಕರು ಸೇರ್ಪಡೆಯಾಗಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಸರ್ಕಾರ ಶೀಘ್ರದಲ್ಲೇ ವೇತನ ಗರಿಷ್ಠ ಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚನೆ ಮಾಡುವ ಸಾಧ್ಯತೆ ಇದ್ದು, ಹಣದುಬ್ಬರ ಹೆಚ್ಚಳ ಮತ್ತು ಇಪಿಎಫ್ ನಿಯಮಿತವಾಗಿ ವೇತನ ಪರಿಷ್ಕರಣೆ ಅಧ್ಯಯನ ಮಾಡಿದ ಬಳಿಕ ವೇತನ ಮಿತಿ ಹೆಚ್ಚಳದ ಬಗ್ಗೆ ಈ ಸಮಿತಿ ಶಿಫಾರಸು ಮಾಡಲಿದೆ.

ವೇತನದ ಗರಿಷ್ಠ ಮಿತಿಯನ್ನು ತಿಂಗಳಿಗೆ 21,000 ರೂ.ಳಿಗೆ ಏರಿಕೆ ಮಾಡುವ ಸಾಧ್ಯತೆ ಎಂಬ ಮಾತುಗಳು ಕೇಳಿ ಬರುತ್ತಿವೆ.ವೇತನ ಮಿತಿ ಏರಿಕೆ ಮಾಡುವುದರಿಂದ 15,000 ರೂ.ಗಿಂತ ಕಡಿಮೆ ವೇತನ ಹೊಂದಿದವರು ಇಪಿಎಫ್ ಕಡ್ಡಾಯವಾಗಿ ಚಂದದಾರರಾಗುತ್ತಾರೆ .

ಪ್ರಸ್ತುತ ಇಪಿಎಫ್ ಯೋಜನೆಯಲ್ಲಿ ಮಾಸಿಕ 15,000 ರೂ. ಮೂಲವೇತನ ಇರುವವರು ಕೂಡ ಚಂದದಾರರಾಗಿದ್ದಾರೆ.ಪಿಎಫ್‌ಒ ವಂತಿಗೆಯನ್ನು ಉದ್ಯೋಗಿಗಳು ಕಡ್ಡಾಯದ ಮಿತಿಗಿಂತ ಹೆಚ್ಚುವರಿಗಾಗಿ ಪಾವತಿಸಬಹುದಾಗಿದೆ ಉದ್ಯೋಗದಾತರು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ನಿಯಮವಿಲ್ಲ .

2014 ರವರೆಗೂ 6500 ರೂ. ಇದ್ದು, 20 ಕಾರ್ಮಿಕರಿಗಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಇಪಿಎಫ್ ಯೋಜನೆಗೆ ಒಳಪಡುವುದು ಕಡ್ಡಾಯವೆಂದು ಪರಿಗಣಿಸಲಾಗಿದೆ. ನಿವೃತ್ತಿ ಉಳಿತಾಯ ಯೋಜನೆಗಾಗಿ ವೇತನ ಮಿತಿ ಹೆಚ್ಚಳ ಮಾಡಲು ಚಿಂತನೆ ನಡೆದಿದ್ದು, ಇದರಿಂದ EPF ಗೆ ಕಡ್ಡಾಯವಾಗಿ ನೀಡಬೇಕಿರುವ ವಂತಿಗೆ ಮೊತ್ತದಲ್ಲಿ ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ. ಹಾಗಾಗಿ, ಸರ್ಕಾರ ಈ ಬಗ್ಗೆ ಸಮಿತಿ ರಚನೆ ಮಾಡಿದ ಬಳಿಕ ಪಿಎಫ್ ನೌಕರರಿಗೆ ವೇತನದಲ್ಲಿ ಏರಿಕೆ ಕಂಡು ಬರುವ ನಿರೀಕ್ಷೆ ದಟ್ಟವಾಗಿದೆ.

Leave A Reply

Your email address will not be published.