ಅರೇ, ಧಮಾಕಾ ಮಾರುಕಟ್ಟೆಗೆ ಬಂದೇ ಬಿಡ್ತು ಒಪ್ಪೋ ರೆನೋ ಸರಣಿ ಸ್ಮಾರ್ಟ್ ಫೋನ್ | ಅಚ್ಚರಿಯ ಬೆಲೆಯ ಜೊತೆ, ಫೀಚರ್ಸ್ ಏನು ?

ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಜೊತೆಗೆ ಈಗಾಗಲೇ ಬಿಡುಗಡೆ ಆಗಿರುವ ಫೋನ್ ಮೇಲೆ ಆಫರ್ ಸಹ ನೀಡಲಾಗುತ್ತಿದೆ.
ಅದಲ್ಲದೆ ಉತ್ತಮ ಕ್ಯಾಮೆರಾ, ಹೆಚ್ಚಿನ ಪ್ರೊಸೆಸರ್, ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯ ಮಾಡುತ್ತಿದೆ.

 

ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಒಪ್ಪೋ ಕಂಪನಿಯ ರೆನೋ ಸರಣಿಯ ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ. ತನ್ನ ಕ್ಯಾಮೆರಾ ಮೂಲಕವೇ ಜನರಿಂದ ಮನ್ನಣೆ ಪಡೆದುಕೊಂಡಿರುವ ಒಪ್ಪೋ ಇದೀಗ ರೆನೋ ಅಡಿಯಲ್ಲಿ ತನ್ನ ಹೊಸ ಒಪ್ಪೋ ರೆನೋ 9 ಸರಣಿಯ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದೆ.

ಒಪ್ಪೋ ಕಂಪನಿಯ ರೆನೋ ಸರಣಿಯ ಫೋನ್ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್​ಗಳು ರಿಲೀಸ್ ಆಗಿದೆ. ಅವುಗಳೆಂದರೆ :

  • ಒಪ್ಪೋ ರೆನೋ 9,
  • ರೆನೋ 8 ಪ್ರೊ ಮತ್ತು
  • ರೆನೋ 9 ಪ್ರೊ+ ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆಗೊಂಡಿರುವ ಈ ಫೋನ್ ಕೆಲವೇ ದಿನಗಳಲ್ಲಿ ಭಾರತಕ್ಕೂ ಬರಲಿದೆ .

ಒಪ್ಪೋ ರೆನೋ 9 ಮಾಹಿತಿ :

  • ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ.
  • ಈ ಡಿಸ್‌ಪ್ಲೇ 1,080*2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ.
  • ಸ್ನಾಪ್​ಡ್ರಾಗನ್ 778G SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.ಇದು ಆಂಡ್ರಾಯ್ಡ್‌ 13 ಕಲರ್‌ ಒಎಸ್‌ 13.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  • ಅದಲ್ಲದೆ ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮತ್ತು 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
  • 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಸೂಪರ್​ವೂಕ್ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.
  • ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಕೂಡ ಫಿಂಗರ್​ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ.
  • ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 8GB RAM + 256GB ಸ್ಟೋರೇಜ್ ಆಯ್ಕೆಗೆ CNY 2,999 (ಭಾರತದಲ್ಲಿ ಅಂದಾಜು 34,000ರೂ.).

ಒಪ್ಪೋ ರೆನೋ 9 ಪ್ರೊ ಮಾಹಿತಿ :

  • ಒಪ್ಪೋ ರೆನೋ 9 ಪ್ರೊ ಸ್ಮಾರ್ಟ್‌ಫೋನ್‌ ಕೂಡ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080*2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ.
  • ಮೀಡಿಯಾಟೆಕ್ ಡೈಮೆನ್ಸಿಟಿ 8100-Max SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 13 ಕಲರ್‌ ಒಎಸ್‌ 13.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  • ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
  • 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಸೂಪರ್​ವೂಕ್ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.
  • ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಕೂಡ ಫಿಂಗರ್​ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ.
  • ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 16GB RAM + 256GB ಸ್ಟೋರೇಜ್ ಆಯ್ಕೆಗೆ CNY 3,499 (ಭಾರತದಲ್ಲಿ ಅಂದಾಜು 40,000ರೂ.).

ಒಪ್ಪೋ ರೆನೋ 9 ಪ್ರೊ+ ಮಾಹಿತಿ :

  • ಒಪ್ಪೋ ರೆನೋ 9 ಪ್ರೊ+ ಸ್ಮಾರ್ಟ್‌ಫೋನ್‌ ಕೂಡ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080*2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ.
  • ಸ್ನಾಪ್​ಡ್ರಾಗನ್ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 13 ಕಲರ್‌ ಒಎಸ್‌ 13.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  • ಡ್ಯುಯೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಫಿಕ್ಸೆಲ್​ನಿಂದ ಕೂಡಿದೆ. 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
  • 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್​ವೂಕ್ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.
  • ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.
  • ಇದರಲ್ಲಿ ಕೂಡ ಫಿಂಗರ್​ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ.
  • ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 16GB RAM + 256GB ಸ್ಟೋರೇಜ್ ಆಯ್ಕೆಗೆ CNY 3,999 ಭಾರತದಲ್ಲಿ ಅಂದಾಜು 45,700ರೂ. ಆಗಬಹುದು.

ಸದ್ಯ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಉತ್ತಮ ಕ್ಯಾಮೆರಾ, ಹೆಚ್ಚಿನ ಪ್ರೊಸೆಸರ್, ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಒಪ್ಪೋ ಕಂಪನಿಯ ರೆನೋ ಸರಣಿಯ ಫೋನ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

6 Comments
  1. MichaelLiemo says

    ventolin cost usa: Buy Ventolin inhaler online – ventolin best price
    can you buy ventolin over the counter in singapore

  2. MichaelLiemo says

    ventolin capsule price: Ventolin inhaler price – ventolin uk prescription
    ventolin 200 mcg

  3. Josephquees says

    generic lasix: lasix furosemide – buy furosemide online

  4. Josephquees says

    buy ventolin uk: Buy Albuterol inhaler online – ventolin medication

  5. Timothydub says

    canadian pharmacy 24h com safe: Canadian Pharmacy – canadian drugstore online

  6. Timothydub says

    mexican pharmaceuticals online: mexican pharma – mexico pharmacies prescription drugs

Leave A Reply

Your email address will not be published.