ಮಗಳ ಕೊಲೆ ಮಾಡಿದ ತಾಯಿ | ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರಾ!!!

ಮಗಳೊಬ್ಬಳು ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ತಾಯಿಯೊಬ್ಬಳು ಆಕೆಯನ್ನು ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇದು ತಮಿಳುನಾಡಿನ ತಿರುನಲ್ವೇಲಿ ಎಂಬಲ್ಲಿ ನಡೆದಿದೆ.

 

ತಮಿಳುನಾಡಿನ ಸಿವಾಲ್ಪೇರಿ ನಿವಾಸಿ ಆರುಮುಗ ಕಣಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಈಕೆ ಚೆನ್ನೈನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪಿಚೈ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು, ದಂಪತಿಗೆ ಅರುಣಾ (19) ಎಂಬ ಮಗಳಿದ್ದಳು.

ಅರುಣಾ ನರ್ಸಿಂಗ್ ಓದುತಿದ್ದ ಸಂದರ್ಭದಲ್ಲಿ, ಅನ್ಯ ಜಾತಿಯ ವ್ಯಕ್ತಿಯನ್ನು ಪ್ರೀತಿ ಮಾಡುತ್ತಿದ್ದಳು. ಈ ಬಗ್ಗೆ ಅರುಣಾ ತನ್ನ ತಾಯಿ ಆರುಮುಗ ಕಣಿ ಬಳಿ ತಿಳಿಸಿದ್ದಾಳೆ. ಈ ವಿಷಯವನ್ನು ಮಾತನಾಡುವ ನೆಪದಲ್ಲಿ ಆರುಮುಗ ಕಣಿ ತನ್ನ ಮಗಳನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಅದಾದ ಬಳಿಕ ಅರುಣಾಗೆ ಬೇರೆ ಮದುವೆ ಮಾಡಲು ಆರುಮುಗ ಸಿದ್ಧತೆಯನ್ನು ನಡೆಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಅರುಣಾ ತಾನು ಬೇರೆಯೊಬ್ಬನನ್ನು ಪ್ರೀತಿಸುವ ವಿಚಾರವನ್ನು ವರನ ಕಡೆಯವರೆಗೂ ತಿಳಿಸುವುದಾಗಿ ತಾಯಿಯ ಬಳಿ ಹೇಳಿದ್ದಾಳೆ.

ಇದರಿಂದ ಮನನೊಂದ ಆರುಮುಗ ಸಿಟ್ಟಿನಲ್ಲಿ ಅರುಣಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅದಾದ ಬಳಿಕ ತನ್ನ ತಪ್ಪಿನ ಅರಿವಾದ ಆರುಮುಗ ಕಣಿ ಹೇರ್ ಡೈ ಪೌಡರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಆಕೆಯನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ ಘಟನೆಗೆ ಸಂಬಂಧಿಸಿ ಶಿವಲಪೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.