ಉಪ್ಪಿನಂಗಡಿ : ಗಂಡನ ಎದುರಲ್ಲೇ ಪತ್ನಿಯ ಮಾನಭಂಗಕ್ಕೆ ಯತ್ನ ಮಾಡಿದ ವ್ಯಕ್ತಿ | ತಡೆದ ಗಂಡನಿಗೆ ದೊಣ್ಣೆಯಿಂದ ಹಲ್ಲೆ,ಬೆದರಿಕೆ!

ಉಪ್ಪಿನಂಗಡಿ:ಅಕ್ರಮವಾಗಿ ಮನೆಗೆ ಪ್ರವೇಶಿಸಿದ ವ್ಯಕ್ತಿಯೊಬ್ಬ ಪತಿಯ ಸಮ್ಮುಖದಲ್ಲೇ ಮಾನಭಂಗಕ್ಕೆ ಯತ್ನಿಸಿದಲ್ಲದೆ, ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಬಗ್ಗೆ ಮಹಿಳೆಯೋರ್ವರು ವ್ಯಕ್ತಿಯೊಬ್ಬನ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಠಾಣಾ ವ್ಯಾಪ್ತಿಯ ಬಾರ್ಯ ಗ್ರಾಮದ ಮಹಿಳೆಯ ಮನೆಗೆ ಸಾಹದ್ ಎನ್ನುವ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿ ,ಮಾನಭಂಗಕ್ಕೆ ಯತ್ನಿಸಿದ್ದಾನೆ, ಅಲ್ಲದೇ ಈ ವೇಳೆ ತಡೆಯೊಡ್ಡಿದ ಮಹಿಳೆಯ ಪತಿಗೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.

ಸದ್ಯ ಹಲ್ಲೆಯಿಂದ ಗಾಯಗೊಂಡ ಮಹಿಳೆಯ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ನೀಡಿದ ದೂರನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.