KMF : ಹಾಲು ಮೊಸರು ದರ ಏರಿಕೆ ಬೆನ್ನಲ್ಲೇ, ಉಳಿದ ಎಲ್ಲಾ ಪ್ರಾಡೆಕ್ಟ್ ದರ ಏರಿಕೆ ಮಾಡಲಿದೆಯೇ?
ಮೊನ್ನೆಯಷ್ಟೇ ಗ್ರಾಹಕರಿಗೆ ಹಾಲು, ಮೊಸರಿನ ದರದ ಬಿಸಿ ತಟ್ಟಿದ್ದು ಈ ಹೊಡೆತದಿಂದಲೇ ಜನ ಮೇಲೆ ಬಂದಿಲ್ಲ. KMF ಹಾಲು, ದರ ಹೆಚ್ಚಳ ಅಧಿಕೃತ ಘೋಷಣೆ ಕೂಡ ಮಾಡಿದೆ. ಆದರೆ ಘೋಷಣೆ ಮಾಡದೇ ಸೈಲೆಂಟಾಗಿ KMFನ ಎಲ್ಲ ಉತ್ಪನ್ನಗಳ ದರವೂ ಏರಿಕೆ ಮಾಡಿದೆ. ಹೌದು ನಿನ್ನೆ ಹಾಲು, ಮೊಸರಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಅಧಿಕೃತ ಘೋಷಣೆ ಮಾಡಿತು. ಆದ್ರೆ ಅಧಿಕೃತ ಘೋಷಣೆ ಮಾಡದೇ ಕೆಎಂಫ್ ನ ಎಲ್ಲ ಉತ್ಪನ್ನಗಳ ದರ ಹೆಚ್ಚಳವನ್ನು ಸೈಲೆಂಟಾಗಿ ಮಾಡುತ್ತಿದೆ ಎಂದು ವರದಿಯಾಗಿದೆ.
ದಸರಾ ಹಬ್ಬದಿಂದಲೇ ತುಪ್ಪದ ದರ ಹೆಚ್ಚುತ್ತಲೇ ಇದೆ. ಒಂದೇ ಬಾರಿ ದರ ಏರಿಸದೇ ಕಳೆದ ಎರಡು ತಿಂಗಳಿನ ನಾಲ್ಕು ಬಾರಿ ಹಂತ ಹಂತವಾಗಿ ಒಟ್ಟು 170 ರೂಪಾಯಿವರೆಗೆ ಹೆಚ್ಚಳ ಮಾಡಿತ್ತು. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್ ನ ಎಲ್ಲ ಉತ್ಪನ್ನಗಳ ನ ದರವೂ ಶೇ.5-15ರಷ್ಟು ಹೆಚ್ಚು ಮಾಡಿದೆ. ಇನ್ನು ಒಂದು ಕೆಜಿಗೆ 50 ರೂ. ತುಪ್ಪದ ದರ ಹೆಚ್ಚಳ ಆಗೋ ಸಾಧ್ಯತೆಯಿದೆ.