ಸ್ಮಶಾನದಲ್ಲೇ ಉದ್ಯೋಗ ಮಾಡುತ್ತಿರುವ 22ರ ಪದವೀಧರೆ | ಕೆಲಸದ ಅನುಭವವನ್ನು ಈ ರೀತಿಯಾಗಿ ಬಿಚ್ಚಿಟ್ಟಿದ್ದಾಳೆ ಈಕೆ!

0 5

ಇಂದಿನ ಪರಿಸ್ಥಿತಿ ಹೇಗಾಗಿದೆ ಅಂದರೆ, ಯಾರು ಕೂಡ ಸಣ್ಣ-ಸಣ್ಣ ಉದ್ಯೋಗಕ್ಕೆ ಸೇರಲು ಬಯಸುವುದಿಲ್ಲ. ತನ್ನ ಅಭಿರುಚಿಕ್ಕಿಂತಲೂ ಇನ್ನೊಬ್ಬ ನನ್ನ ವೃತ್ತಿಯನ್ನು ನೋಡಿ ಏನು ಹೇಳಬಲ್ಲ ಎಂಬುದರ ಮೇಲೆ ಉದ್ಯೋಗ ಆಯ್ಕೆ ಆಗುತ್ತಿದೆ. ಕೆಲವೊಂದಷ್ಟು ಜನರಿಗೆ ಕನಸಿನ ಕೆಲಸವೇ ಬೇರೆ ಆಗಿದ್ದರೆ, ಅವರ ಉದ್ಯೋಗ ಇನ್ನೊಂದು ಆಗಿರುತ್ತದೆ.

ಆದ್ರೆ, ಇಲ್ಲೊಂದು ಕಡೆ ಯುವತಿಯೋರ್ವಳು ಮಾತ್ರ ಯಾರ ಮಾತಿಗೂ ತಲೆ ಕೊಡದೆ ತನ್ನ ಡ್ರೀಮ್ ಜಾಬ್ ಆಯ್ಕೆ ಮಾಡಿಕೊಂಡಿದ್ದಾಳೆ. ಅಷ್ಟಕ್ಕೂ ಆಕೆಯ ಡ್ರೀಮ್ ಜಾಬ್ ಯಾವುದೆಂದು ಕೇಳಿದ್ರೆ ನಿಮಗೆ ಒಮ್ಮೆ ಮೈ ಜುಮ್ ಅನಿಸೋದು ಅಂತೂ ಪಕ್ಕಾ. ಯಾಕಂದ್ರೆ, ಆಕೆ ಕೆಲಸ ಮಾಡುತ್ತಿರುವುದು ಸ್ಮಶಾನದಲ್ಲಿ.

ಅರೇ ಏನಿದು, ಅಷ್ಟು ಯಂಗ್ ಲೇಡಿ ಸ್ಮಶಾನದಲ್ಲಿ ಏನು ಮಾಡುತ್ತಾಳೆ ಅಂದುಕೊಂಡ್ರಾ?. ಈಕೆಯ ಕೆಲಸನೇ ‘ಸಮಾಧಿ ಕೀಪರ್’. ಈ ಧೈರ್ಯಶಾಲಿಯೇ ಟ್ಯಾನ್ ಎಂಬ ಚೀನಿ ಮಹಿಳೆ. ಈಕೆ ಸ್ಮಶಾನ ಕಾಯುವ ಕೆಲಸ ಮಾಡುತ್ತಿದ್ದು, ಇದೇ ತನಗೆ ಉತ್ತಮ ಉದ್ಯೋಗ ಎನಿಸಿದೆ ಎಂದಿದ್ದಾಳೆ.

22 ವರ್ಷದ ಯುವತಿ ಟ್ಯಾನ್​, ಪಶ್ಚಿಮ ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಪರ್ವತದ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆ ಇದರಿಂದ 4,000 ಯುವಾನ್ (ರೂ. 45,760) ಗಳಿಸುತ್ತಾಳೆ. ಟ್ಯಾನ್ ವಾರದಲ್ಲಿ ಆರು ದಿನಗಳವರೆಗೆ ಬೆಳಿಗ್ಗೆ 8.30 ರಿಂದ 5 ರವರೆಗೆ ಕೆಲಸ ಮಾಡುತ್ತಾಳೆ. ಚೀನಿ ವಿಶ್ವವಿದ್ಯಾಲಯದಲ್ಲೆ ಪದವಿ ಪಡೆದಿರುವ ಈಕೆ ಬೇರೆ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡದೇ ಸ್ಮಶಾನ ಕಾಯುತ್ತಿದ್ದಾಳೆ.

ಅಷ್ಟೇ ಅಲ್ಲದೆ, ಈಕೆ, ನನಗೆ ಈ ಜಾಗಕ್ಕಿಂತ ಶಾಂತಿಯುತವಾಗಿರುವ ನೌಕರಿ, ಜಾಗ ಬೇರೊಂದು ಸಿಗಲು ಸಾಧ್ಯವಿಲ್ಲ ಎನ್ನುತ್ತಾಳೆ. ಸ್ಮಶಾನ ಎಂದರೆ ಭಯ ಪಡುವವರೇ ಹೆಚ್ಚು, ಹೀಗಿರುವಾಗ ಈಕೆಗೇನು ಹುಚ್ಚ ಎನ್ನಬಹುದು. ಆದ್ರೆ, ಆಕೆಯ ದೃಷ್ಟಿ ಪ್ರಕಾರ ಯೋಚಿಸಿದ್ರೆ, ಇದು ಒಳ್ಳೆಯ ಉದ್ಯೋಗ ಎಂದೇ ಹೇಳಬಹುದು. ಯಾಕಂದ್ರೆ ಅವಳು ವಿವರಿಸಿದಂತೆ ಸ್ಮಶಾನದಲ್ಲಿ ಸಿಗುವಷ್ಟು ನೆಮ್ಮದಿ ಬೇರೆಲ್ಲೂ ಸಿಗದು ಎಂದೇ ಹೇಳಬಹುದು. ಒಟ್ಟಾರೆ ಇದೀಗ ಈಕೆಯ ಸುದ್ದಿ ಎಲ್ಲೆಡೆ ಭಾರಿ ವೈರಲ್​ ಆಗಿದೆ.

Leave A Reply