BIGG NEWS : ಡಿಜಿಟಲ್ ಮೀಡಿಯಾಗಳ ಕಡಿವಾಣಕ್ಕೆ ಶೀಘ್ರ ಕಾನೂನು – ಕೇಂದ್ರ ಸರಕಾರ ನಿರ್ಧಾರ

ಇನ್ನು ಮುಂದೆ ಡಿಜಿಟಲ್ ಮಾಧ್ಯಮಗಳ ಕಾರ್ಯನಿರ್ವಹಣೆ, ನೋಂದಣಿ ಹಾಗೂ ನಿಯಂತ್ರಣ ಕೈಗೊಳ್ಳಲು ಹೊಸ ಕಾನೂನು ಜಾರಿ ಬರಲಿದೆ.

 

ಪ್ರಸ್ತುತ ಮಹತ್ವದ ಬೆಳವಣಿಗೆಯೊಂದರಲ್ಲಿ ಡಿಜಿಟಲ್ ಮೀಡಿಯಾಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ರಾಜಸ್ಥಾನದ ಜೈಪುರದಲ್ಲಿ ಮಾತನಾಡಿರುವ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಗೂರ್ ಪ್ರಕಾರ ಶೀಘ್ರದಲ್ಲಿಯೇ ಡಿಜಿಟಲ್ ಮಾಧ್ಯಮಗಳ ಕಾರ್ಯನಿರ್ವಹಣೆ, ನೋಂದಣಿ ಹಾಗೂ ನಿಯಂತ್ರಣ ಕುರಿತಂತೆ ಹೊಸ ಕಾನೂನು ಜಾರಿಗೆ ಬರಲಿದೆ.

ಈಗಾಗಲೇ ಇಂಟರ್ನೆಟ್ ಯುಗದಲ್ಲಿ ಸುದ್ದಿ ಮಾಧ್ಯಮಗಳಿಗೆ ಒಳ್ಳೆಯ ಭವಿಷ್ಯವಿದೆ. ಅಲ್ಲದೆ ಇದರಿಂದ ಉತ್ತಮ ಉದ್ಯೋಗಾವಕಾಶಗಳು ಸಹ ದೊರೆಯುತ್ತವೆ. ಹೀಗಾಗಿ ಅವುಗಳ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಬರದಂತೆ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಜನರಿಗೆ ಮಾಹಿತಿ ನೀಡಲಾಗಿದೆ.

ತಾನು ಹೆಚ್ಚು ತಾನು ಹೆಚ್ಚು ಎಂಬ ಸುದ್ದಿ ಮಾಧ್ಯಮಗಳು, ಡಿಜಿಟಲ್ ಮಾಧ್ಯಮಗಳು ಕೆಲವೊಮ್ಮೆ ಮಿತಿಮೀರಿದ ವರ್ತನೆ ತೋರುತ್ತಿವೆ ಹೀಗಾಗಿ ಇದಕ್ಕೆ ಅಂಕುಶ ಅಗತ್ಯ ಎಂದಿದ್ದಾರೆ.

Leave A Reply

Your email address will not be published.