ವರಾಹ ರೂಪಂ ಹಾಡಿನ ವಿವಾದ : ಕೋರ್ಟ್ ನಲ್ಲಿ ಗೆದ್ದು ಬೀಗಿದ ಕಾಂತಾರ ತಂಡ

ಕಾಂತಾರ ಸಿನಿಮಾಗಿದ್ದ ದೊಡ್ದ ಸಮಸ್ಯೆ ಇದೀಗ ಅಂತ್ಯ ಕಂಡಿದ್ದು, ವರಾಹ ರೂಪಂ ಹಾಡಿಗೆ ಎದುರಾಗಿದ್ದ ದೊಡ್ಡ ಸಮಸ್ಯೆಯೊಂದು ಸದ್ಯ ಬಗೆಹರಿದಿದ್ದು ಹಾಡನ್ನು ಪ್ರಸಾರ ಮಾಡಬಹುದು ಎಂದು ಕೇರಳ ಕೋರ್ಟ್ ಆದೇಶಿಸಿದೆ. ಕಾಂತಾರ (Kantara) ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


ಕಾಂತಾರ ಸಿನಿಮಾ ತಂಡಕ್ಕೆ ಕೇರಳದ (Kerala) ಕೋರ್ಟಿನಲ್ಲಿ ಗೆಲುವು ಸಿಕ್ಕಿದ್ದು ವರಾಹ ರೂಪಂ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ಹಾಡಿನ ಪ್ರಸಾರ ತಡೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿತ್ತು. ಇದನ್ನು ವಜಾಗೊಳಿಸಿ ಕೋಜಿಕ್ಕೋಡ್ ಕೋರ್ಟ್ ಆದೇಶ ಹೊರಡಿಸಿದೆ.

ಎಲ್ಲೆಡೆ ಸಂಚಲನ ಮೂಡಿಸಿದ್ದ ಭರ್ಜರಿ ಗೆಲುವನ್ನು ಕಂಡ ಕಾಂತಾರ ಸಿನಿಮಾಗೆ ವರಾಹ ರೂಪಂ ಹಾಡನ್ನು ಕದ್ದು ಬಳಸಿಕೊಳ್ಳಲಾಗಿದೆ ಎಂಬ ಆರೋಪವನ್ನು ಚಿತ್ರ ತಂಡ ತಳ್ಳಿ ಹಾಕಿದ್ದರೂ ಕೂಡ ಕೇರಳ ಕೋರ್ಟ್ ಅರ್ಜಿ ವಜಾ ಮಾಡಿ ಹಾಡು ಬಳಸದಂತೆ ಸೂಚನೆ ನೀಡಿದ್ದ ಬೆನ್ನಲ್ಲೇ ಚಿತ್ರ ತಂಡಕ್ಕೆ ಸಿಹಿ ಸುದ್ಧಿ ಲಭಿಸಿದೆ.

ಸಿನಿಮಾದಲ್ಲಿರುವ ವರಾಹ ರೂಪಂ ಹಾಡು ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ವರಾಹ ರೂಪಂ..’ಹಾಡು ವಿವಾದದ ”ನವರಸಂ..’ ಹಾಡಿನ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಹಲವಾರು ಬಾರಿ ಕೇಳಿಬಂದಿದ್ದು ,ಈ ಹಾಡಿನ ಟ್ಯೂನ್ ಮೇಲೆ ಕೃತಿಚೌರ್ಯದ ಆರೋಪವನ್ನೂ ಕೂಡ ಮಾಡಲಾಗಿತ್ತು.ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ (Thaikkudam Bridge) ಕೋರ್ಟ್ ಮೆಟ್ಟಿಲೇರಿತ್ತು.

ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು ಅರ್ಜಿ ವಿಚಾರಣೆಯನ್ನು ಮಾಡಿ ‘ಹಾಡನ್ನು ಅನುಮತಿ ಇಲ್ಲದೆ ಪ್ರಸಾರ ಮಾಡಬಾರದು’ ಎಂದು ಆದೇಶ ನೀಡಿತ್ತು. ಹಾಡಿನ ರಾಗ ಮತ್ತು ಇದರಲ್ಲಿ ಬಳಸಲಾಗಿರುವ ಸಂಗೀತ ಒರಿಜಿನಲ್ ಅಲ್ಲವೆಂದು ಆರೋಪವು ಚಿತ್ರ ತಂಡದ ಮೇಲೆ ಇತ್ತು.

ನವರಸಂ..’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂದು ಕೇಳುಗರು ಅಭಿಪ್ರಾಯಪಟ್ಟಿದ್ದು,ಇದನ್ನು ‘ತೈಕ್ಕುಡಂ ಬ್ರಿಡ್ಜ್​​’ ಗಂಭೀರವಾಗಿ ಪರಿಗಣಿಸಿ ಕೇಸ್ ದಾಖಲಿಸಿದೆ.

ಕೇರಳದ ಸ್ಥಳೀಯ ನ್ಯಾಯಾಲಯಗಳು ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದ್ದ ಬೆನ್ನಲ್ಲೇ ಆದರೆ ಇದೀಗ ಕಾಂತಾರ ಚಿತ್ರ ತಂಡದ ಆರೋಪಗಳು ಸುಳ್ಳು ಎಂದು ಸಾಬೀತಾಗಿದ್ದು, ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ಈಗ ಆದೇಶ ನೀಡಿದ್ದು ಹಾಡನ್ನು ಪ್ರಸಾರ ಮಾಡಲು ಅನುಮತಿ ನೀಡಿದೆ.

ವರಾಹರೂಪಂ ಹಾಡಿನ ಪ್ರಸಾರಕ್ಕೆ ಯಾವುದೇ ಅಡ್ಡಿಯಿಲ್ಲವೆಂದು ತೀರ್ಪು ನೀಡಲಾಗಿದ್ದು ಇನ್ನು ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಒರಿಜಿನಲ್ ಟ್ಯೂನ್​​ನಲ್ಲಿ ಪ್ರಸಾರ ಮಾಡಬಹುದಾಗಿದೆ.

ವರಾಹ ರೂಪಂ..’ ಹಾಡನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್ ಗಳಲ್ಲಿ ಕೂಡ ಟ್ರೆಂಡ್ ಆಗಿತ್ತು. ಸದ್ಯ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಿಂದ ಈ ಹಾಡನ್ನು ಡಿಲೀಟ್ ಮಾಡಿದ್ದು, ಮ್ಯೂಸಿಕ್ ಆ್ಯಪ್​ಗಳಾದ​ ಜಿಯೊ ಸಾವನ್ ಮೊದಲಾದ ಕಡೆಗಳಲ್ಲಿ ಈ ಹಾಡು ಪ್ರಸಾರ ಕೂಡ ಆಗುತ್ತಿರಲಿಲ್ಲ.

ಸದ್ಯ ಚಿತ್ರ ತಂಡದ ದೋಷಾರೋಪ ಮುಕ್ತವಾಗಿದ್ದು, ಭರ್ಜರಿ ಗೆಲುವು ಸಾಧಿಸಿದ್ದು, ವರಾಹ ರೂಪಂ ಹಾಡುಪ್ರಿಯರಿಗೆ ದಿಲ್ ಖುಷ್ ಆಗಿರುವುದಂತು ಸುಳ್ಳಲ್ಲ.

Leave A Reply

Your email address will not be published.