ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾದದ್ದು ಒಳ್ಳೆದಾಯ್ತು- ಬಿಗ್ ಬಾಸ್ ವೈಷ್ಣವಿ| ರಹಸ್ಯ ನಟಿಯೋರ್ವಳ ಗಂಭೀರ ಆರೋಪ! ಏನದು?

ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ಮೂಲಕ ಮನೆ ಮಾತಾದ ಚೆಲುವೆ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ವೈಷ್ಣವಿಗೆ ಕಂಕಣ ಭಾಗ್ಯ ಕೂಡಿ ಬಂದು ಹಸೆಮಣೆ ಏರುವ ಕನಸು ಹೊತ್ತ ನಟಿಯ ಕನಸು ಇದೀಗ ನುಚ್ಚು ನೂರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇತ್ತೀಚೆಗೆ ಅನೇಕ ಮದುವೆ ಆಫರ್​ಗಳು ನಟಿಯನ್ನು ಅರಸಿಕೊಂಡು ಬಂದಿದ್ದು, ಈ ಬಗ್ಗೆ ವೈಷ್ಣವಿ ಲೈವ್​ನಲ್ಲಿ ಹೇಳಿದ್ದು ಕೂಡ ಇದೆ. ಅಗ್ನಿಸಾಕ್ಷಿ’ ಧಾರಾವಾಹಿ (Agnisakshi) ಮೂಲಕ ಎಲ್ಲರ ಮನ ಸೆಳೆದ ನಟಿ ವೈಷ್ಣವಿ (Vaishnavi) ಗೌಡರವರಿಗೆ ಅಗ್ನಿ ಸಾಕ್ಷಿ ಎಂಬ ಧಾರಾವಾಹಿ ದೊಡ್ದ ಮಟ್ಟದ ನೇಮ್, ಫೇಮ್ ತಂದುಕೊಟ್ಟಿದ್ದಂತು ಸುಳ್ಳಲ್ಲ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ನಂತರ ಆನ್‌ಸ್ಕ್ರೀನ್‌ನಿಂದ ಬ್ರೇಕ್‌ ಪಡೆದು ತಮ್ಮ ವೈಯಕ್ತಿಕ ಬದುಕಿನ ಕಡೆ ಲಕ್ಷ್ಯ ವಹಿಸಿದ್ದರು .

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ನಟಿ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗುವ ನಿರೀಕ್ಷೆ ಕೂಡ ಇತ್ತು. ಇವೆಲ್ಲದರ ನಡುವೆ ವೈಷ್ಣವಿ ಎಂಗೇಜ್ ಮೆಂಟ್ ಆಗಿದೆ ಎನ್ನುವ ಬಗ್ಗೆ ಎಲ್ಲೆಡೆ ಸುದ್ದಿ ಕೂಡ ಹರಿದಾಡಿ, ಫೋಟೋ ಮತ್ತು ವಿಡಿಯೋ ಕೂಡ ವೈರಲ್ ಆಗಿದ್ದವು.

ಕಳೆದ ಎರಡು ಎರಡು ದಿನಗಳಿಂದ ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋ ಎಲ್ಲೆಡೆ ವೈರಲ್ ಆಗಿ, ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್‌ ಕುಟುಂಬಸ್ಥರು ಮನೆಯಲ್ಲಿ ಮಾಡಿಕೊಂಡಿರುವ ಸಣ್ಣ ಶುಭ ಕಾರ್ಯಕ್ರಮದ ವಿಡಿಯೋ ಕೂಡ ವೈಷ್ಣವಿ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಅನುಮಾನಕ್ಕೆ ಕಾರಣವಾಗಿತ್ತು.

ಈ ಸುದ್ಧಿ ಎಲ್ಲೆಡೆ ಹಬ್ಬುದ್ದಿದ್ದಂತೆ ನಿಶ್ಚಿತಾರ್ಥ ಏನು ಆಗಿಲ್ಲ ಮಾತುಕತೆ ಮಾತ್ರ ಆಗಿರುವುದು ಇದೆಲ್ಲಾ ಸುಳ್ಳು ಏನೇ ಇದ್ದರು ನಾವೇ ಸ್ಪಷ್ಟನೆ ಕೊಡುತ್ತೇವೆ’ ಎಂದು ವೈಷ್ಣವಿ ಮತ್ತು ವಿದ್ಯಾಭರಣ್ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ .

ಈ ನಡುವೆ ವಿದ್ಯಾಭರಣ್ ಜೊತೆಗೆ ಹಸೆಮಣೆ ಏರುವ ಕನಸು ಹೊತ್ತು ನಿಶ್ಚಿತಾರ್ಥ ಕೂಡ ಮಾಡಿಕೊಳ್ಳಲು ಅಣಿಯಾಗಿದ್ದ ನಟಿಗೆ ವಿದ್ಯಾಭರಣ್ ಮುಖವಾಡದ ಪರಿಚಯವಾಗಿದೆ ಎನ್ನಲಾಗಿದ್ದು, ಹಾಗಾಗಿ, ವೈಷ್ಣವಿ ಎಂಗೇಜ್ ಮೆಂಟ್ ನಿಂತಿದೆ ಎಂಬ ಸುದ್ದಿಯೂ ಹಬ್ಬಿದೆ.

ನಟಿ ವೈಷ್ಣವಿ ಗೌಡ (Vaishnavi Gowda) ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಒಂದು ವೈರಲ್ ಆಗಿದ್ದು, ವಿದ್ಯಾಭರಣ್ (Vidya Bharan )ಮೇಲೆ ಆರೋಪಗಳ ಸುರಿಮಳೆ ಗೈಯ್ದಿದ್ದಾರೆ.

ಇನ್ ಸ್ಟಾಗ್ರಾಂ ಖಾತೆಯಿಂದ ಅನೇಕ ಹುಡುಗಿಯರೊಂದಿಗೆ ಮೆಸೇಜ್ ಮಾಡಿ ಅನುಚಿತ ವರ್ತನೆ ತೋರಿದ್ದು, ಅನೇಕ ಹುಡುಗಿಯರನ್ನು ಆತ ಪರಿಚಯ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಿ ಅವರನ್ನು ಸೊಸೆ ಎಂದು ಮೋಸ ಮಾಡುತ್ತಿದ್ದಾರೆ. ಅದೆಷ್ಟೋ ಯುವತಿಯರಿಗೆ ಈ ರೀತಿ ಮೋಸ ಆಗಿದ್ದು , ಹಾಗಾಗಿ, ವೈಷ್ಣವಿಗೆ ಮೋಸ ಆಗಬಾರದು ಎಂದು ಎಲ್ಲಾ ಸಾಕ್ಷಿಗಳನ್ನು ಬಹಿರಂಗ ಮಾಡಿ ಮಾತನಾಡಬೇಕು ಎಂದು ಯುವತಿಯರು ಹೇಳಿಕೊಂಡಿರುವ ಫೋನ್ ಕಾಲ್ ವೈರಲ್ ಆಗಿ ಸದ್ದು ಮಾಡುತ್ತಿದೆ.

ಆಡಿಯೋ ಕಾಲ್ ಮೂಲಕ ಅನೇಕ ವಿಚಾರಗಳು ಹೊರ ಬಿದ್ದಿದ್ದು, ತನ್ನ ಇನ್ಸ್‌ ಸ್ಟಾಗ್ರಾಮ್ ಖಾತೆಯಿಂದ ಅನೇಕ ಹುಡುಗಿಯರಿಗೆ ಮೆಸೇಜ್ ಮಾಡುತ್ತಿದ್ದ. ಯುವತಿಯರಿಗೆ ಮೆಸೇಜ್ ಮಾಡಿ, ನಾನು ನಿಮ್ಮನ್ನ ಮದುವೆ ಆಗಲು ತಯಾರಾಗಿದ್ದೀನಿ ಡೇಟ್ ಮಾಡೋಣ ಎಂದು ಕರೆದಿದ್ದಾನೆ ಎಂಬ ಆರೋಪದ ಜೊತೆಗೆ ಫ್ಯಾಶನ್ ಡಿಸೈನರ್ ಒಬ್ಬರನ್ನು ಮನೆಗೆ ಕರೆದುಕೊಂಡು ಹೋಗಿ ನನ್ನ ಹೆಂಡತಿ ಎಂದು ಪರಿಚಯ ಮಾಡಿಸಿದ್ದು, ಬಳಿಕ ಬ್ರೇಕಪ್ ಮಾಡಿಕೊಂಡಿದ್ದಾನೆ ಎಂದು ಯುವತಿ ಕರೆಯಲ್ಲಿ ಹೇಳಿದ್ದು, ಹಾಗೆಯೇ ನನಗೂ ಮೆಸೇಜ್ ಮಾಡಿದ್ದ ಅಲ್ಲದೆ, ನೀವು ನಂಗೆ ತುಂಬ ಇಷ್ಟ ಆಗಿದ್ದೀರಾ ಎಂದು ಹೇಳಿಕೊಂಡು ನನಗೆ 150 ಕೋಟಿ ಆಸ್ತಿ, ಆಡಿ ಕಾರ್‌ ಜೊತೆಗೆ ಟೆಂಪಲ್ ಇದೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ .ಇದರ ಜೊತೆಗೆ ಡೇಟ್ ಮಾಡಲು ಕರೆದಾಗ ನಿರಾಕರಿಸಿದಾಗ ಇದಲ್ಲದೇ ರಾಜಕಾರಣಿಗಳ ಹೆಸರು ಬಳಸಿಕೊಂಡು ಹೆದರಿಸುವ ಕೆಲಸವನ್ನು ಆತ ಮಾಡಿದ್ದಾನೆ ಎನ್ನುವ ಅರೋಪಗಳನ್ನು ಯುವತಿ ಮಾಡಿದ್ದಾಳೆ ಎನ್ನಲಾಗಿದೆ.

ಇದಕ್ಕೆ ನಟಿ ವೈಷ್ಣವಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾ ಭರಣ್ ಅವರು ಹೆಣ್ಣು ನೋಡೋ ಶಾಸ್ತ್ರಕ್ಕೆಂದು ಬಂದು ತಾಂಬೂಲ ಬದಲಾಯಿಸಿಕೊಂಡದ್ದು ಅಷ್ಟೇ ಆದರೆ, ಅದು ನಿಶ್ಚಿತಾರ್ಥ ಅಲ್ಲ’ ಎಂದು ಸ್ಪಷ್ಟನೆ ನೀಡಿದ್ದು, ಇದರ ಜೊತೆಗೆ ನಟಿ ವೈಷ್ಣವಿ ಗೌಡ ‘ ನಿಶ್ಚಿತಾರ್ಥ ಆದರೆ ತಾನೇ ಕ್ಯಾನ್ಸಲ್ ಮಾಡುವುದು ಇದೆಲ್ಲಾ ಒಂದು ವಾರದ ಹಿಂದೆ ಆಗಿರುವ ವಿಚಾರ!!

ಈ ವಿಚಾರ ಬೆಳೆಸಿದಷ್ಟೂ ದೊಡ್ಡದಾಗುತ್ತಾ ಹೋಗುತ್ತೆ!! ಬಿಟ್ಟು ಬಿಡೋಣ. ಮಾತಿಗೆ ಮಾತು ಬೆಳೆಯುವುದು ಬೇಡ!!.. ನಾನು ಹಾಗೂ ನನ್ನ ಕುಟುಂಬ ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ.. ಮೊದಲೆ ವಿದ್ಯಾ ಭರಣ್ ಬಗ್ಗೆ ಗೊತ್ತಾಗಿದ್ದು ಒಳ್ಳೆಯದಾಯ್ತು ಅಕಸ್ಮಾತ್ ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ನಡುವೆ ವಿದ್ಯಾಭರಣ್ ಕೂಡ ನಿಶ್ಚಿತಾರ್ಥ ಮತ್ತು ಯುವತಿಯರ ಆಡಿಯೋದ ಕುರಿತು ಸ್ಪಷ್ಟನೆ ನೀಡಿದ್ದು,’ವೈಷ್ಣವಿ ಅವರ ಜೊತೆ ನನ್ನ ನಿಶ್ಚಿತಾರ್ಥ ಆಗಿಲ್ಲ ಜೊತೆಗೆ ನಿಶ್ಚಿತಾರ್ಥ ಅಂದರೆ ಉಂಗುರ ಬದಲಾಯಿಸಿಕೊಳ್ಳುವುದು ಅಲ್ವಾ? ನಾವು ಹಾಗೆಲ್ಲ ಮಾಡಿಲ್ಲ ಎಂದು ಹೇಳಿಕೊಂಡಿದ್ದು, ವೈಷ್ಣವಿ ಅವರು ಈ ಬಗ್ಗೆ ಏನು ಹೇಳಿಲ್ಲ ಜೊತೆಗೆ ನಾನು ಕೂಡ ಏನು ಹೇಳಿಲ್ಲ ಎಂದ ಮೇಲೆ ಏನು ನಡೆದಿಲ್ಲ ಎನ್ನುವ ಅರ್ಥ ತಾನೇ?? ಎಂದು ಪ್ರಶ್ನಿಸಿದ್ದಾರೆ.

ಎರಡು ಕುಟುಂಬದ ನಡುವೆ ಕೇವಲ ಮಾತುಕತೆಯಾಗಿದ್ದು, ಇದೆಲ್ಲಾ ಆಗಿ 10 ದಿನಗಳೇ ಕಳೆದಿವೆ. ನಾವಿಬ್ಬರೂ ಇನ್ನೂ ಮಾತನಾಡಿಲ್ಲ ಅರ್ಥ ಮಾಡಿಕೊಂಡಿಲ್ಲ. ಆದರೆ ಹೇಗೆ ಆ ಫೋಟೋ ವೈಲರ್ ಆಗಿದ್ದು ಹೇಗೆ ಎನ್ನುವುದೇ ತನಗೆ ಗೊತ್ತಿಲ್ಲ’ ಎಂದು ನಿಶ್ಚಿತಾರ್ಥದ ಬಗ್ಗೆ ವಿದ್ಯಾಭರಣ್ ಹೇಳಿಕೊಂಡಿದ್ದಾರೆ.

ಮದುವೆ ವಿಚಾರ ಎಂದು ಅರಿವಾಗುತ್ತಿದ್ದಂತೆ ನನ್ನ ಕುಟುಂಬದವರ ಘನತೆಗೆ ದಕ್ಕೆ ತರಲು ಹಿತ ಶತ್ರುಗಳು ಮುಂದಾಗಿದ್ದು, ಈ ಹಿಂದೆ ನನಗೆ ಗರ್ಲ್‌ಫ್ರೆಂಡ್‌ ಇದ್ದಿದ್ದು ನಿಜ ಎಂದಿದ್ದು, ನಾನು ಯಾವುದೇ ಹುಡುಗಿಯ ಜೊತೆ ತಪ್ಪಾಗಿ ನಡೆದುಕೊಂಡಿಲ್ಲ ಎಂದು ಹೇಳಿಕೊಂಡಿರುವ ವಿದ್ಯಾಭರಣ್ ಈ ಆರೋಪ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದು, ಆರೋಪ ಮಾಡುವವರು. ಮುಂದೆ ಬಂದು ಮಾಡಲಿ ಎಂದು ಹೇಳಿಕೊಂಡಿದ್ದಾರೆ.

‘ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರೋ ಶತ್ರುಗಳು ಈ ರೀತಿ ಕೆಲಸ ಮಾಡುತ್ತಿದ್ದಾರೆ.. ಒಬ್ಬರ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡಬೇಕು ನನ್ನ ರೀತಿ ಬೇರೆ ಯಾರಿಗೂ ಆಗಬಾರದು ಎಂದಿದ್ದು, ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಮೋಸ ಮಾಡುವವರಿಗೆ ಬುದ್ದಿ ಕಲಿಸಬೇಕು ಎಂದಿದ್ದಾರೆ.

Leave A Reply

Your email address will not be published.