ದೈಹಿಕ ಶಿಕ್ಷಕನ ಜೊತೆ ಕ್ಲೋಸ್ ಆದದ್ದೇ ತಪ್ಪಾಯ್ತೇ? ಶಿಕ್ಷಕಿ ಡೆತ್ ನೋಟ್ ಬರೆದು ಸಾವು | ಅಷ್ಟಕ್ಕೂ ಡೆತ್ ನೋಟಲ್ಲಿ ಏನಿತ್ತು?
ಕೊಚ್ಚಿಯಲ್ಲಿ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದ್ದು, ಆತ್ಮಹತ್ಯೆಗೆ ಸಹ ಶಿಕ್ಷಕ ನೊಂದಿಗೆ ಇದ್ದ ಸಲುಗೆಯೇ ಕಾರಣವಾಯಿತೇ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.
ಮಲಪ್ಪುರಂ ಜಿಲ್ಲೆಯ ವೆಂಗಾರಾ ಮಾಡೆಲ್ ಟೌನ್ನ ಪ್ರೌಢಶಾಲೆಯಲ್ಲಿ ಟಿ ಬೈಜು ಶಿಕ್ಷಕಿಯಾಗಿದ್ದಳು ಎನ್ನಲಾಗಿದ್ದು, ಇದೆ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ರಾಮದಾಸ್ ಕಾರ್ಯ ನಿರ್ವಹಿಸುತ್ತಿದ್ದ ಜೊತೆಗೆ ಬೈಜು ಮತ್ತು ರಾಮದಾಸ್ ವಿದ್ಯಾರ್ಥಿ ಪೊಲೀಸ್ ಕೆಡೆಟ್ನ ಉಸ್ತುವಾರಿಯಾಗಿದ್ದರು ಎನ್ನಲಾಗಿದೆ. ಬೈಜು ಮತ್ತು ರಾಮದಾಸ್ ನಡುವೆ ಒಳ್ಳೆಯ ಸ್ನೇಹವಿತ್ತು ಎನ್ನಲಾಗಿದೆ. ಇದನ್ನೇ ದುರುಪಯೋಗ ಪಡಿಸಿಕೊಂಡ ಆತ, ಶಿಕ್ಷಕಿಯನ್ನು ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬುದು ಡೆತ್ನೋಟ್ನಿಂದ ತಿಳಿದುಬಂದಿದೆ.
ಸೆ. 17ರಂದು ಶಿಕ್ಷಕಿಯ ಮೃತ ದೇಹ ಮನೆಯಲ್ಲಿ ಪತ್ತೆಯಾಗಿದೆ. ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೈಜು ಸೆ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಮದಾಸ್ ನನ್ನು ಬಂಧಿಸಲಾಗಿದ್ದು ಜೊತೆಗೆ ಡೆತ್ನೋಟ್ ನಲ್ಲಿ ರಾಮದಾಸ್ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ.
ಈ ಪ್ರಕರಣದ ಸಂಬಂಧ ಅದೇ ಶಾಲೆಯ ಮತ್ತೊಬ್ಬ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದು, ಡೆತ್ನೋಟ್ನಲ್ಲಿ ಶಿಕ್ಷಕನ ಹೆಸರು ಉಲ್ಲೇಖವಾಗಿದ್ದರಿಂದ ಆತನನ್ನು ಬಂಧಿಸಲಾಗಿದೆ.
ಬೈಜು ಬರೆದಿದ್ದ ಡೆತ್ನೋಟ್ನಲ್ಲಿ ರಾಮದಾಸ್ ಹೆಸರನ್ನು ನಮೂದಿಸಲಾಗಿದ್ದು,ಇದರ ಜೊತೆಗೆ ಸಾಕ್ಷಿಗಳ ಹೇಳಿಕೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳು ರಾಮದಾಸ್ ವಿರುದ್ಧ ಇರುವುದರಿಂದ ಆರೋಪಿಯೆಂದು ಪರಿಗಣಿಸಿ ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.