ಪ್ರೇಯಸಿಗಾಗಿ ಹೆಂಡತಿಯನ್ನು ಸಾಯಿಸಿದ ನರ್ಸ್ ಪತಿ | ಈತ ಸಾಯಿಸಿದ್ದು ಹೇಗೆ ತಿಳಿದರೆ ನಿಜಕ್ಕೂ ಬೆಚ್ಚಿಬೀಳ್ತೀರಾ!!!

ಒಬ್ಬರಿಗೊಬ್ಬರು ಹುಡುಗ ಹುಡುಗಿಯರು ಒಡನಾಟ ಅಥವಾ ಸ್ನೇಹ ಬೆಳೆಸಿಕೊಳ್ಳುವುದೇನು ತಪ್ಪಲ್ಲ ಆದರೆ ನಿಮ್ಮ ಸ್ನೇಹ ಸಂಬಂಧದ ಒಡನಾಟಗಳು ಎಲ್ಲಿ ಹೋಗಿ ಯಾವ ಸ್ಥಿತಿಗೆ ತಲುಪಬಹುದು ಎಂಬ ಮುಂದಾಲೋಚನೆ ಮಾಡುವುದು ಉತ್ತಮ.

 

ಸದ್ಯ ಇಲ್ಲೊಬ್ಬನಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳೊಂದಿಗೆ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಹೀಗಾಗಿ ಆತ ಎರಡನೇ ವಿವಾಹ ಮಾಡಿಕೊಳ್ಳುವ ಕನಸು ಕಾಣತೊಡಗಿದ್ದ.

ಈಗಾಗಲೇ ಆತನಿಗೆ ಮದುವೆ ಆಗಿದ್ದ ಕಾರಣ ಎರಡನೇ ಮದುವೆಗೆ ಮೊದಲ ಪತ್ನಿ ಅಡ್ಡಿಯಾಗುತ್ತಾಳೆ ಎಂದು ತಿಳಿದು ಅವಳನ್ನು ಕೊಲ್ಲುವ ಯೋಜನೆ ರೂಪಿಸಿದ್ದನು.

ಹೌದು ಪ್ರೇಯಸಿ ಜೊತೆ ಮದುವೆಯಾಗುವ ಸಲುವಾಗಿ ಯಾವುದೋ ಇಂಜೆಕ್ಷನ್ ಕೊಟ್ಟು ಪತ್ನಿಯನ್ನು ಪತಿಯೇ ಸಾಯಿಸಿದ ಘಟನೆ ಪುಣೆ ಬಳಿ ನಡೆದಿದೆ.

ಪತ್ನಿಯೊಂದಿಗೆ ಪ್ರೇಮ ವಿವಾಹವಾಗಿದ್ದರೂ ಇತ್ತೀಚೆಗೆ ಪರಿಚಯವಾದ ಇನ್ನೊಬ್ಬಳೊಂದಿಗೆ ಮದುವೆಯಾಗುವ ಆಸೆಯಿಂದ ಮುಳಶಿ ತಾಲೂಕಿನ ಘೋಟಾವಡೆ ಪಾಟಾ ಪ್ರದೇಶದಲ್ಲಿನ ಆಸ್ಪತ್ರೆಯೊಂದರಲ್ಲಿ ಪುರುಷ ನರ್ಸ್ ಆಗಿ ಕೆಲಸ ಮಾಡುವ 23ವರ್ಷದ ಸ್ವಪ್ಟಿಲ್ ವಿಭೀಷಣ ಸಾವಂತ ಈ ದುಷ್ಕೃತ್ಯ ಎಸಗಿದ್ದಾನೆ. ಈತ ಬೀಡ ಜಿಲ್ಲೆ ಆಷ್ಟಿ ತಾಲೂಕು ಸಾಂಗವಿಯ ನಿವಾಸದಲ್ಲಿ ವಾಸವಿದ್ದನು.

ಸ್ವಪ್ಟಿಲ್ ವಿಭೀಷಣ ನಿಗೆ 22ವರ್ಷದ ಪ್ರಿಯಾಂಕಾ ಕ್ಷೇತ್ರ ಳೊಂದಿಗೆ ವಿವಾಹ ನಡೆದಿತ್ತು. 5 ತಿಂಗಳ ಹಿಂದೆ ಕಾಸಾರ ಅಂಬೋಲಿಗೆ ಬಂದಿದ್ದ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನಂತರ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳೊಂದಿಗೆ ಸ್ವಪ್ರಿಲ್‌ನ ಪರಿಚಯವಾಗಿದೆ.

ಪ್ರಸ್ತುತ ಸ್ವಪ್ಟಿಲ್ ವಿಭೀಷಣ ಆತ ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿನ ಮಾರಣಾಂತಿಕ ಔಷಧ, ಇಂಜೆಕ್ಷನ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಪತ್ನಿಗೆ ಬಿಪಿ, ಶುಗರ್ ಕಡಿಮೆ ಮಾಡುವ ಔಷಧ ಇಂಜೆಕ್ಷನ್ ನೀಡುವ ನೆಪದಲ್ಲಿ ಪ್ರಾಣಾಂತಿಕ ಇಂಜೆಕ್ಷನ್‌ಗಳನ್ನು ಕೂಡ ಅವಳಿಗೆ ನೀಡಿ ಆಕೆಯನ್ನು ಕೊಲೆ ಮಾಡಿದ್ದಾನೆ.

ನಂತರ ಆಕೆಯನ್ನು ಘೋಟಾವಡೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿನ ವೈದ್ಯರು ಅವಳನ್ನು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಇದಕ್ಕೆ ಮುನ್ನವೇ ಪ್ರಿಯಾಂಕಾ ಮನೆಯವರು ಸ್ವಪ್ಟಿಲ್ ವಿರುದ್ಧ ಪತ್ನಿಗೆ ಮಾನಸಿಕ ಹಿಂಸೆ ನೀಡಿದ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸ್ ವಿಚಾರಣೆಯಲ್ಲಿ ಸ್ವಪ್ನಲ್‌ನೇ ಪತ್ನಿಯನ್ನು ಕೊಲೆ ಮಾಡಿರುವ ವಿಚಾರ ಬಹಿರಂಗವಾಗಿದೆ.

ಸದ್ಯ ಪೌಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ. ಹೆಚ್ಚಿನ ವಿಚಾರಣೆ ನಂತರ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

Leave A Reply

Your email address will not be published.