ಸ್ಯಾಂಡಲ್ ವುಡ್ ನಟ, ನಿರ್ದೇಶಕ ಉಪೇಂದ್ರ ಆಸ್ಪತ್ರೆಗೆ ದಾಖಲು!

ಸ್ಯಾಂಡಲ್ ವುಡ್ ನಟ,ನಿರ್ದೇಶಕ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎನ್ನುವ ಮಾಹಿತಿ ತಿಳಿದು ಬಂದಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಉಪೇಂದ್ರ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ನೆಲಮಂಗಳ ಬಳಿ ಇರುವ ಹರ್ಷ ಆಸ್ಪತ್ರೆಗೆ ಉಪೇಂದ್ರ ದಾಖಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಶೂಟಿಂಗ್ ಸಂದರ್ಭದಲ್ಲಿ ಫೈಟಿಂಗ್ ದೃಶ್ಯ ಸೆರೆಹಿಡಿಯಲಾಗುತಿತ್ತು. ಆಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಶೂಟಿಂಗ್ ಸಮಯದಲ್ಲಿ ಡಸ್ಟ್ ಅಲರ್ಜಿಯಿಂದ ನಟ ಉಪೇಂದ್ರ ಆರೋಗ್ಯದಲ್ಲಿ ಏರು ಪೇರಾಗಿದೆ. ಯುಐ ಚಿತ್ರದ ಆಕ್ಷನ್ ಸೀಕ್ವೇನ್ಸ್ ವೇಳೆ ಬಳಸಿದ್ದ ಡಸ್ಟ್ ನಿಂದ ಉಪ್ಪಿ ಮೂಗು ಬ್ಲಾಕ್ ಆಗಿದೆ. ಡಸ್ಟ್ ನಿಂದ ಮೂಗು ಬ್ಲಾಕ್ ಆದ ಕಾರಣ ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಉಪೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಪೇಂದ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಉಪೇಂದ್ರ ಅವರ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

ಇದೀಗ ಬಂದ ಮಾಹಿತಿ ಪ್ರಕಾರ ಆರೋಗ್ಯ ತಪಾಸಣೆ ಬಳಿಕ ಅವರು ತೆರಳಿದರು ಎಂದು ನೆಲಮಂಗಲ ಹರ್ಷ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ

ಆರೋಗ್ಯ ತಪಾಸಣೆ ಮಾಡಿಕೊಂಡ ಬಳಿಕ ಉಪೇಂದ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು ಅಭಿಮಾನಿಗಳ ಆತಂಕ ನಿವಾರಣೆಯಾಗಿದೆ.

Leave A Reply