ಮನೆ ಕೆಲಸವಳೊಂದಿಗೆ 67 ರ ವೃದ್ಧ ಸೆಕ್ಸ್ ಮಾಡುತ್ತಿರುವಾಗಲೇ ಹೃದಯಾಘಾತ | ಆದರೆ ಕಹಾನಿಯಲ್ಲಿ ಟ್ವಿಸ್ಟ್ ಇದೆ…

Share the Article

ಆತ ಹಣ್ಣು ಹಣ್ಣು ಮುದುಕ. ಆದರೆ ರಸಿಕ ಅಂತಾನೇ ಹೇಳಬಹುದು. ಮದುವೆಯಾಗಿ ಮಕ್ಕಳು ಮರಿಗಳೊಂದಿಗೆ ಸುಖ ಜೀವನ ಸಾಗಿಸ್ತಿದ್ದ ಆತನಿಗೆ ಇದರ ಜೊತೆಗೆ ಒಂದು ಅನೈತಿಕ ಸಂಬಂಧ ಇತ್ತು. ಈ ಅನೈತಿಕ ಸಂಬಂಧ ಯಾರಿಗೂ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ಆತ ಸಾವು ಕಂಡಿದ್ದ. ಆತನ ಶವ ಎಲ್ಲೋ ದಾರಿಯಲ್ಲಿ ಬ್ಯಾಗ್ ನಲ್ಲಿ ದೊರಕಿತ್ತು. ಈಗ ಪೊಲೀಸರ ತನಿಖೆಯ ನಂತರ ಈ ಸಾವಿಗೆ ಒಂದು ಟ್ವಿಸ್ಟ್ ದೊರಕಿದೆ.

ನವೆಂಬರ್ 16 ರಂದು ತನ್ನ ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‌ಗೆ ಕರೆದುಕೊಂಡು ಹೋಗಿದ್ದ ವೃದ್ಧ ಬಾಲಸುಬ್ರಮಣಿಯನ್ (67) ಸಂಜೆ 4:55ರ ವೇಳೆಗೆ ಸೊಸೆಗೆ ಕರೆ ಮಾಡಿದ್ದಾರೆ. ನಂತರ ಸೊಸೆಗೆ ಫೋನ್ ಮಾಡಿ ಹೊರಗಡೆ ಕೆಲಸ ಇದೆ ಎಂದು ಹೇಳಿದ್ದಾರೆ. ಆದರೆ ತುಂಬಾ ಹೊತ್ತಾದ ನಂತರ ಕರೆ ಮಾಡಿದಾಗ, ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ಮಗ ನಂತರ ಠಾಣೆಗೆ ನಾಪತ್ತೆ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ನ.18 ರಂದು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚೀಲ ಮತ್ತು ಬೆಡ್‌ಶೀಟ್‌ನಲ್ಲಿ ಸುತ್ತಿದ್ದ ಮೃತದೇಹವೊಂದು ಜೆಪಿ ನಗರದ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ಇದು ಬಾಲಸುಬ್ರಮಣಿಯನ್ ಎಂದು ಗುರುತಿಸಲಾಗಿತ್ತು. ಹಾಗಾಗಿ ಪೊಲೀಸರಿಗೆ ಅನುಮಾನ ಮೂಡಿತು.

ಬಾಲಸುಬ್ರಮಣಿಯನ್ ಅವರ ದೇಹದ ಮೇಲೆ ಯಾವುದೇ ಗಾಯ ಇರಲಿಲ್ಲ. ಆದರೆ ಇಲ್ಲೊಂದು ಶಾಕಿಂಗ್ ವಿಚಾರ ಬೆಳಕಿಗೆ ಬಂತು. ಅದೇನೆಂದರೆ ಬಾಲಸುಬ್ರಮಣಿಯನ್ ಕಾಲ್ ಹಿಸ್ಟರಿ ಜಾಲಾಡಿದಾಗ ಮಹಿಳೆಯೊಬ್ಬರ ಜೊತೆಗೆ ನಿರಂತರ ಸಂಪರ್ಕ ಇರುವುದು ಬಯಲಾಗಿತ್ತು. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್ ದಾಖಲಾಗಿತ್ತು. ಹೀಗಾಗಿ ಆ ಮಹಿಳೆ ಯಾರು ಅನ್ನೋದರ ಕುರಿತು ಖಾಕಿ ಬೆನ್ನು ಬಿದ್ದಿತ್ತು. ತನಿಖೆ ವೇಳೆ ಬಾಲಸುಬ್ರಮಣಿಯನ್ ಮನೆಗೆ ಬರುತ್ತಿದ್ದ ಮನೆ ಕೆಲಸದಾಕೆ ಮೇಲೆ ಅನುಮಾನ ಮೂಡಿತ್ತು. ನಂತರ ಮನೆ ಕೆಲಸದಾಕೆಯನ್ನು ವಿಚಾರಿಸಿದಾಗ ಸಾವಿನ ಸತ್ಯ ಹೊರಬಿದ್ದಿದೆ.

ವಿಷಯ ಏನೆಂದರೆ ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‌ಗೆ ಕರೆದುಕೊಂಡು ಹೋಗಿದ್ದ ವೃದ್ಧ ಬಾಲಸುಬ್ರಮಣಿಯನ್ ನಂತರ ಅಲ್ಲಿಂದ ಮನೆ ಕೆಲಸದಾಕೆ ಮನೆಗೆ ಹೋಗಿದ್ದರು. ಅಲ್ಲಿ ಕೆಲಸದಾಕೆ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಆದರೆ ಸಂಭೋಗ ಮಾಡುವಾಗಲೇ ಬಾಲಸುಬ್ರಮಣಿಯನ್ ಅವರಿಗೆ ಹೃದಯಾಘಾತ ಸಂಭವಿಸಿದೆ.

ಹೌದು, ಬೆಂಗಳೂರಿನ 67 ವರ್ಷದ ವೃದ್ಧ ಬಾಲ ಸುಬ್ರಮನಿಯನ್ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಆದರೆ ಈ ಹೃದಯಾಘಾತ ಅವರು ಕೆಲಸದವಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ನಡೆದಿದೆ.

ಮನೆ ಕೆಲಸದವಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸಾವು ಆಗಿದೆ. ಅದು ಕೂಡಾ ಮನೆ ಕೆಲಸದವಳ ಮನೆಯಲ್ಲೇ ಸಾವು ಸಂಭವಿಸಿದೆ. ಈ ವೃದ್ಧ 35 ವರ್ಷದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಬಾಲಸುಬ್ರಹ್ಮಣ್ಯ ಅವರಿಗೆ ಹೃದಯಾಘಾತವಾಗುತ್ತೆ. ಇದರಿಂದ ಭಯಬಿದ್ದ ಮನೆ ಕೆಲಸದವಳು ಏನು ಮಾಡಬೇಕೆಂದು ತೋಚದೆ, ಶವ ಸಾಗಾಟ ಮಾಡಲು ತನ್ನ ಗಂಡ ಮತ್ತು ಸಹೋದರನನ್ನು ಕರೆಸಿದ್ದಾಳೆ. ನಂತರ ಎಲ್ಲರೂ ಸೇರಿ, ಪ್ಲಾಸ್ಟಿಕ್ ಬ್ಯಾಗ್ ಅಲ್ಲಿ ಶವ ತುಂಬಿಸಿ, ರಸ್ತೆ ಮಧ್ಯೆ ತೆಗೆದುಕೊಂಡು ಹೋಗಿ ಶವ ಬಿಸಾಡಿದ್ದಾರೆ.

ಆದರೆ ನಂತರ ಇದು ಪೊಲೀಸ್ ತನಿಖೆಗೊಳಪಟ್ಟಾಗ,
ತಪ್ಪೊಪ್ಪಿಗೆ ಮಾಡಿಕೊಂಡಿದ್ದಾಳೆ ಮನೆಕೆಲಸದಾಕೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸಾವು ಆಯ್ತು. ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸ್ತಾರೆ ಅಂತ ಹೀಗೆ ಮಾಡಿದ್ವಿ ಅಂತ ಹೇಳಿಕೆ ನೀಡಿದ್ದಾರೆ. ಅಂದ ಹಾಗೇ, ಒಂದು ವರ್ಷದ ಹಿಂದೆ ಬಾಲಸುಬ್ರಹ್ಮಣ್ಯಂ ಅವರು ಆಂಜಿಯೋ ಪ್ಲಾಸ್ಟ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

Leave A Reply

Your email address will not be published.