ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು!

ಬಾಲಿವುಡ್ ನ ಪ್ರಖ್ಯಾತ ನಟ, ದಿ. ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವು ಒಂದು ಅಪಘಾತ ಎಂದು ಕೇಂದ್ರ ತನಿಖಾ ದಳ (ಸಿಬಿಐ) ತನ್ನ ತನಿಖೆಯಲ್ಲಿ ಹೇಳಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣದಲ್ಲಿ, ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ತನಿಖೆಯ ನಂತರ ಅವರ ಸಾವು ಒಂದು ಅಪಘಾತ ಎಂದು ತೀರ್ಮಾನಿಸಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಕುಡಿದ ಅಮಲಿನಲ್ಲಿ ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲಿಯಾನ್ ಟೆರೇಸ್‌ನಿಂದ ಆಯತಪ್ಪಿ ಬಿದ್ದು ಸಾವು ಕಂಡಿದ್ದಾರೆ ಎಂದು ಸಿಬಿಐ ಬಹಿರಂಗಪಡಿಸಿದೆ.


Ad Widget

ನಟಿ, ಮಾಡೆಲ್ ಮತ್ತು ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲಿಯಾನ್ ಅವರು ಜೂನ್ 2020 ರಲ್ಲಿ ಮುಂಬೈನ ಮಲಾಡ್‌ನಲ್ಲಿರುವ ತಮ್ಮ ಫ್ಲಾಟ್‌ನ 12 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ದಿಶಾ ಸಾವಿನ ನಂತರ ಅನೇಕ ರೀತಿಯ ಊಹಾಪೋಹಗಳು, ಸಂಶಯಗಳು ಎಲ್ಲಾ ಕಡೆಯಿಂದ ಕೇಳಿಬಂದಿದ್ದವು. ಹಾಗೂ ಇದೊಂದು ವ್ಯವಸ್ಥಿತ ಕೊಲೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದರು.

ಸಿಬಿಐ ದಿಶಾ ಸಾಲಿಯಾನ್ ಸಾವಿನ ಪ್ರಕರಣದ ವಿಷಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಲ್ಲ. ಕಾರಣ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯ ಸಮಯದಲ್ಲಿ ಸಿಬಿಐ ದಿಶಾ ಅವರ ಸಾವಿನ ಬಗ್ಗೆ ತನಿಖೆ ನಡೆಸಿತು, ಏಕೆಂದರೆ ಇಬ್ಬರೂ ಕೆಲವು ದಿನಗಳ ಅಂತರದಲ್ಲಿ ಇವರಿಬ್ಬರ ಸಾವು ಆಗಿತ್ತು.

ಸಾವಿನ ದಿನ ದಿಶಾ ಸಾಲಿಯಾನ್ ಮದ್ಯದ ಅಮಲಿನಲ್ಲಿದ್ದರು ಮತ್ತು ಈ ವೇಳೆ ಆಯತಪ್ಪಿ ಟೆರೇಸ್ ನಿಂದ ಬಿದ್ದಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಇದಾದ ನಂತರ ದಿಶಾ ಸಾವಿಗೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಜೂನ್ 9 ರಂದು ದಿಶಾ ಸಾವನ್ನಪ್ಪಿದ್ದರು.

error: Content is protected !!
Scroll to Top
%d bloggers like this: