Realme Smart Tv: ಕೇವಲ 1000 ರೂಪಾಯಿಗೆ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಟಿವಿ ಖರೀದಿಸಿ | ಹೊಚ್ಚ ಹೊಸ ಟಿವಿ ನಿಮ್ಮದಾಗಿಸಿಕೊಳ್ಳಿ

0 99

ಗ್ರಾಹಕರಿಗಾಗಿಯೆ ಹೊಸ ಆಫರ್ ನೀಡಲು ಫ್ಲಿಪ್ಕಾರ್ಟ್ ಮುಂದಾಗಿದೆ. ಹೌದು!!.. ಇದೀಗ ಕೇವಲ 1000 ರೂಪಾಯಿಗೆ ಫ್ಲಿಪ್​ಕಾರ್ಟ್​ನಲ್ಲಿ ಸ್ಮಾರ್ಟ್​ಟಿವಿ ಖರೀದಿಸಬಹುದಾಗಿದೆ. ಸ್ಮಾರ್ಟ್ ಟಿವಿಗಳ ಮೇಲೆ ಆಫರ್‌ಗಳನ್ನು ನೀಡುತ್ತಿದ್ದು, ಸ್ಮಾರ್ಟ್ ಟಿವಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

ಕೆಲವು ಸ್ಮಾರ್ಟ್ ಟಿವಿಗಳಲ್ಲಿ ವಿನಿಮಯ ಕೊಡುಗೆಗಳೂ ಇದ್ದು, ರಿಯಲ್​ಮಿ ನಿಯೋ ಸ್ಮಾರ್ಟ್ ಟಿವಿಯನ್ನು 1,000 ರೂಪಾಯಿಗಳ ಬಜೆಟ್ ಬೆಲೆಯಲ್ಲಿ ವಿನಿಮಯ ಕೊಡುಗೆಯಲ್ಲಿ ಬಿಡುಗಡೆ ಮಾಡಲಾಗಿದೆ .

ಫ್ಲಿಪ್‌ಕಾರ್ಟ್ ಮತ್ತೆ ಸ್ಮಾರ್ಟ್ ಟಿವಿಗಳ ಮೇಲೆ ಆಫರ್‌ಗಳನ್ನು ನೀಡುತ್ತಿದ್ದು, ಸ್ಮಾರ್ಟ್ ಟಿವಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಕೆಲವು ಸ್ಮಾರ್ಟ್ ಟಿವಿಗಳಲ್ಲಿ ವಿನಿಮಯ ಕೊಡುಗೆಗಳೂ ಇದ್ದು, ರಿಯಲ್​ಮಿ ನಿಯೋ ಸ್ಮಾರ್ಟ್ ಟಿವಿಯನ್ನು 1,000 ರೂಪಾಯಿಗಳ ಬಜೆಟ್ ಬೆಲೆಯಲ್ಲಿ ವಿನಿಮಯ ಕೊಡುಗೆಯಲ್ಲಿ ಬಿಡುಗಡೆ ಮಾಡಿದೆ.

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಮಾಡಿದ ಖರೀದಿಗಳ ಮೇಲೆ 5 ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. EMI ಆಫರ್ ರೂ.416 ರಿಂದ ಪ್ರಾರಂಭವಾಗಲಿದ್ದು, ರಿಯಲ್​​ಮಿ ನಿಯೊ 32 ಇಂಚಿನ ಸ್ಮಾರ್ಟ್ ಟಿವಿ ಖರೀದಿದಾರರಿಗೆ ವಿನಿಮಯ ಕೊಡುಗೆಗಳು ಸಹ ದೊರೆಯಲಿದೆ.

ರಿಯಲ್​ಮಿ ನಿಯೋ 32 ಇಂಚಿನ ಸ್ಮಾರ್ಟ್ ಟಿವಿ ಪ್ರಸ್ತುತ ರೂ.11,999 ನಲ್ಲಿ ದೊರೆಯಲಿದ್ದು, ಇದರ ಜೊತೆಗೆ ಬ್ಯಾಂಕ್ ಕೊಡುಗೆಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಲು 10 ಪ್ರತಿಶತ ತ್ವರಿತ ರಿಯಾಯಿತಿ ಪಡೆಯ ಬಹುದಾಗಿದೆ.

ನಿಮ್ಮ ಹಳೆಯ ಟಿವಿಯನ್ನು ನೀವು ವಿನಿಮಯ ಮಾಡಿಕೊಳ್ಳುವ ಯೋಜನೆ ಇದ್ದರೆ, ನೀವು ರೂ.10,975 ವರೆಗೆ ವಿನಿಮಯ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಹಳೆಯ ಟಿವಿಯಲ್ಲಿ ರೂ.10,975 ವಿನಿಮಯ ರಿಯಾಯಿತಿ ಅನ್ವಯ, ನೀವು ಕೇವಲ ರೂ.1,000 ಪಾವತಿಸಬೇಕಾಗುತ್ತದೆ. ವಿನಿಮಯ ರಿಯಾಯಿತಿ ಕಡಿಮೆಯಿದ್ದರೆ, ನೀವು ಉಳಿದ ಮೊತ್ತವನ್ನು ಪಾವತಿಸಿ ಸ್ಮಾರ್ಟ್ ಟಿವಿಯನ್ನು ಖರೀದಿಸುವ ಸುವರ್ಣ ಅವಕಾಶ ಕೂಡ ಕಲ್ಪಿಸಲಾಗಿದೆ..ರಿಯಲ್​​ಮಿ ನಿಯೊ 32 ಇಂಚಿನ ಸ್ಮಾರ್ಟ್ ಟಿವಿ 60Hz LED ಡಿಸ್ಪ್ಲೇಯನ್ನು ಹೊಂದಿದ್ದು, ಚಿತ್ರದ ಗುಣಮಟ್ಟವನ್ನು ಹೆಚ್ಚಿಸಲು ಕ್ರೋಮಾ ಬೂಸ್ಟ್ ಪಿಕ್ಚರ್ ಎಂಜಿನ್ ಬೆಂಬಲಿತವಾಗಿದೆ.

TUV ರೈನ್‌ಲ್ಯಾಂಡ್ ಬ್ಲೂ ಲೈಟ್ ಸಹ ಹೊಂದಿದೆ. ಈ ಸ್ಮಾರ್ಟ್ ಟಿವಿಯನ್ನು ಮೀಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದ್ದು, ಜೊತೆಗೆ 512MB RAM ಮತ್ತು 4GB ಸ್ಟೋರೇಜ್ ಬೆಂಬಲವನ್ನು ಕೂಡ ಹೊಂದಿದ್ದು, ಇದನ್ನು ಈಗ ಗ್ರಾಹಕರು ಇಕಾಮರ್ಸ್​ ವೆಬ್​ಸೈಟ್​ನಲ್ಲಿ ಖರೀದಿಸಬಹುದಾಗಿದೆ.

ಸ್ಮಾರ್ಟ್​ಟಿವಿ ಅತ್ಯತ್ತಮ ಗುಣಮಟ್ಟದ್ದಾಗಿದ್ದು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಆಫರ್ ಬೆಲೆಯಲ್ಲಿ ಪಡೆಯಬಹುದಾಗಿದೆ.ರಿಯಲ್​ಮಿ ನಿಯೊ 32 ಇಂಚಿನ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ರೂ.10,000 ದ ಸ್ಮಾರ್ಟ್​​ಟಿವಿಯನ್ನು Realme ಸ್ಮಾರ್ಟ್ ಟಿವಿಯನ್ನು ರೂ.8,999 ಬೆಲೆಯಲ್ಲಿ ಭಾರಿ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗಿತ್ತು.

ಈ ಮಾರಾಟದ ಬಳಿಕ, ಈ ಸ್ಮಾರ್ಟ್ ಟಿವಿ ಹಳೆಯ ಬೆಲೆಯಲ್ಲಿ ಲಭ್ಯವಿದ್ದು, ಆದರೆ ಬ್ಯಾಂಕ್ ಕೊಡುಗೆಗಳೊಂದಿಗೆ ನೀವು ಈ ಸ್ಮಾರ್ಟ್ ಟಿವಿಯನ್ನು ರೂ.10,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ರಿಯಲ್​ಮಿ ನಿಯೊ 32 ಇಂಚಿನ ಸ್ಮಾರ್ಟ್ ಟಿವಿ ಸಂಪರ್ಕ ಆಯ್ಕೆಗಳಲ್ಲಿ 2 HDMI ಪೋರ್ಟ್‌ಗಳು, 1 USB ಟೈಪ್ A ಪೋರ್ಟ್, 1 AV ಪೋರ್ಟ್, 1 LAN ಪೋರ್ಟ್ ಸೇರಿವೆ.

ಇದು ಎರಡು 10 ವ್ಯಾಟ್ ಸ್ಪೀಕರ್‌ ಸೌಲಭ್ಯ ಹೊಂದಿದೆ. 20 ವ್ಯಾಟ್ ಧ್ವನಿ ಉತ್ಪಾದನೆಯ ಜೊತೆಗೆ ಡಾಲ್ಬಿ ಆಡಿಯೊವನ್ನು ಬೆಂಬಲ ಹೊಂದಿದ್ದು, ರಿಯಲ್​ಮಿ ನಿಯೊ ಸ್ಮಾರ್ಟ್​ಟಿವಿ ಮೇಲೆ ಇರುವಂತಹ ವಿಶೇಷ ಆಫರ್ ಇದಾಗಿದ್ದು, ಗ್ರಾಹಕರಿಗೆ ಕೈಗೆ ಎಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.

Leave A Reply