Tech Tips: ಪಿಸಿ, ಲ್ಯಾಪ್​ಟಾಪ್ ಓವರ್ ಹೀಟ್, ಸ್ಲೋ ಸಮಸ್ಯೆಯೇ? | ಈ ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸಾಮಾನ್ಯವಾಗಿ ಡೆಸ್ಕ್ ಟಾಪ್ ಅಥವಾ ಲ್ಯಾಪ್‌ಟಾಪ್​ನಲ್ಲಿ ಹಲವಾರು ಅಗತ್ಯ ಫೈಲ್ಸ್ ಗಳು ಇದ್ದೆ ಇರುತ್ತದೆ. ಇನ್ನೂ ಈ ಅಧಿಕ ಫೈಲ್ ನಿಂದಾಗಿ ಕಂಪ್ಯೂಟರ್ ಸ್ಲೋ ಆಗುತ್ತದೆ. ಎಷ್ಟು ಸ್ಲೋ ಎಂದರೆ ಒಂದು ಫೈಲ್ ಗೆ ಕ್ಲಿಕ್ ಮಾಡಿದರೆ ಅದು ಓಪನ್ ಆಗಲು ಸಾಕಷ್ಟು ನಿಮಿಷಗಳೇ ತೆಗೆದುಕೊಳ್ಳುತ್ತದೆ. ಹೀಗಾದಾಗ ಏಕಾಏಕಿ ಸಿಸ್ಟಂ ಶಟ್‌ಡೌನ್‌ ಆಗಿಬಿಡುತ್ತದೆ. ಇನ್ನೂ ಈ ರೀತಿಯ ಸಮಸ್ಯೆಗಳನ್ನು ನೀವೂ ಎದುರಿಸುತ್ತಿದ್ದರೆ ಇಲ್ಲಿದೆ ಪರಿಹಾರ.

 

ಸಿಸ್ಟಂನಲ್ಲಿರುವ ಚಿಪ್‌ ಮತ್ತು ಹಾರ್ಡ್‌ ಡ್ರೈವ್‌ಗಳು ವಿದ್ಯುತ್‌ ಉಪಯೋಗಿಸಿಕೊಳ್ಳುತ್ತದೆ. ಆಗ ಶಾಖ ಉತ್ಪತ್ತಿಯಾಗುತ್ತದೆ. ಈ ಕಾರಣ ಕಂಪ್ಯೂಟರ್‌ ಹೀಟ್ ಆಗುವುದು ಸಹಜವಾದದ್ದಾಗಿದೆ. ಇನ್ನೂ ಈ ಶಾಖವನ್ನು ತಣಿಸಲು ಅದರೊಳಗೆ ಫ್ಯಾನ್‌ಗಳಿರುತ್ತವೆ. ಆದರೆ ಕೆಲವೊಮ್ಮೆ ಈ ಪಂಖದ ರೆಕ್ಕೆಗಳಿಗೆ ದೂಳು ಆವರಿಸಿಕೊಂಡು ಕಂಪ್ಯೂಟರ್‌ನ ventilation ವ್ಯವಸ್ಥೆ ಸಂಪೂರ್ಣವಾಗಿ ಸ್ಥಬ್ದವಾಗಿರುತ್ತದೆ. ಹಾಗಾಗಿ ಕಂಪ್ಯೂಟರ್‌ ಓವರ್ ಹೀಟ್ ಆಗುತ್ತದೆ. ಅದರಲ್ಲೂ ಕೆಲವು ಪಿಸಿಗಳು overheat ಆಗುತ್ತಿದ್ದ ಹಾಗೆ ಸ್ವಯಂಚಾಲಿತವಾಗಿ ಶಟ್‌ಡೌನ್‌ ಕೂಡ ಆಗುತ್ತದೆ.

ಇನ್ನೂ ಪಿಸಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಬಿಸಿಯಾಗಿದೆ ಎಂದು ತಿಳಿದ ಕೂಡಲೇ ventilation ವ್ಯವಸ್ಥೆ block ಆಗಿದೆಯಾ ಎಂದು ಪರೀಕ್ಷಿಸಿಕೊಳ್ಳಬೇಕು. ಹಾಗೇ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ನ ventilation ವ್ಯವಸ್ಥೆಯಲ್ಲಿ ವ್ಯತ್ಯಾಸ ಇರುತ್ತದೆ. ಒಂದು ವೇಳೆ ನೀವು ಡೆಸ್ಕ್‌ಟಾಪ್‌ ಪಿಸಿಗಳನ್ನು ಬಳಸುತ್ತಿದ್ದರೆ ಅದರಲ್ಲಿ ವೆಂಟಿಲೇಷನ್‌ ವ್ಯವಸ್ಥೆ ಹಿಂಬದಿಯಲ್ಲಿರುತ್ತದೆ. ಮೊದಲು ಪಿಸಿಯನ್ನು ಶಟ್‌ಡೌನ್‌ ಮಾಡಿ, ನಂತರ ಸಿಪಿಯು ಹಿಂಬದಿಯಲ್ಲಿ ಧೂಳು ಹಿಡಿದಿದೆಯಾ ಎಂದು ಪರೀಕ್ಷೆ ಮಾಡಬೇಕು.

ಫ್ಯಾನ್‌ನ ರೆಕ್ಕೆಗಳಿಗೆ, vents ಮತ್ತು heat sinks ಮೇಲೆ ಧೂಳು ಹಿಡಿದಿರುತ್ತದೆ. ಫ್ಯಾನಿನ ರೆಕ್ಕೆಗಳನ್ನು ಸ್ವಚ್ಛಗೊಳಿಸಲು ಅದಕ್ಕೆಂದೇ ‘compressed air’ ಎಂಬ ಸ್ಪ್ರೇ ಸಿಗುತ್ತದೆ. ಇನ್ನೂ ಅಲ್ಟ್ರಾಥಿನ್‌ ಲ್ಯಾಪ್‌ಟಾಪ್‌ಗಳಲ್ಲಿ ventilation ಸಮಸ್ಯೆ ಹೆಚ್ಚಿರುತ್ತದೆ. ಹಾಗೂ ಎಂದಿಗೂ ಈ ರೀತಿ ಮಾಡಬೇಡಿ, ಲ್ಯಾಪ್‌ಟಾಪ್‌ ಸ್ವಿಚ್‌ಆನ್‌ ಮಾಡಿ ತಲೆದಿಂಬು, ಉಣ್ಣೆಯ ಬಟ್ಟೆ ಅಥವಾ ಬ್ಯಾಗ್‌ನಲ್ಲಿಡಬಾರದು. ಇದು ನಿಷ್ಕ್ರಿಯವಾಗಿದ್ದಾಗ ಅಥವಾ sleep mode ನಲ್ಲಿದ್ದಾಗ ಮಾತ್ರ ಧೂಳು ಸ್ವಚ್ಛಗೊಳಿಸಬೇಕು. ಇನ್ನು ಓವರ್ ಹೀಟ್ ಆಗುತ್ತಿದ್ದರೆ laptop cooling pad ಖರೀದಿಸಬಹುದು. ಮತ್ತು ಧೂಳು ಹೆಚ್ಚಿದ್ದರೆ ಅದನ್ನು ದೂರಮಾಡಲು ಚಿಕ್ಕ PC vaccum Cleaner ಬಳಸಬಹುದಾಗಿದೆ.

ಇನ್ನೂ ಡೆಸ್ಕ್‌ಟಾಪ್, ಮೈ ಡಾಕ್ಯುಮೆಂಟ್ಸ್, ಮೈ ಪಿಕ್ಚರ್ಸ್, ಹೀಗೇ ಡೀಫಾಲ್ಟ್ ಆಗಿ ಸೇವ್ ಆಗುವ ಸ್ಥಳಗಳೆಲ್ಲ ಇರುವುದು ಸಿ ಡ್ರೈವ್‌ನಲ್ಲೇ ಆಗಿರುವುದರಿಂದ ಯಾವುದೇ ಫೈಲ್‌ಗಳನ್ನು ‘ಸಿ’ ಡ್ರೈವ್‌ನಲ್ಲಿ ಸೇವ್ ಮಾಡಬಾರದು. ಆಗ ಕಂಪ್ಯೂಟರ್ ಕೆಲಸ ಮಾಡುವಾಗ ಸ್ಲೋ ಆಗುವುದಿಲ್ಲ.

ಇನ್ನೂ ಕಂಪ್ಯೂಟರಿಗೆ ಏನಾದರೂ ಹಾನಿಯುಂಟಾದರೆ, ಕರಪ್ಟ್ ಆದರೆ ಅಥವಾ ವೈರಸ್ ಮುತ್ತಿಗೆ ಹಾಕಿದರೆ ಮೊದಲು ಹಾನಿ ಆಗುವುದು ಸಿ ಡ್ರೈವ್. ಹಾಗೇ ಕಂಪ್ಯೂಟರ್ ಕೆಟ್ಟಾಗ ಅದನ್ನು ‘ಫಾರ್ಮ್ಯಾಟ್ ಮಾಡಬೇಕು’ ಎಂದು ಹೇಳುತ್ತಾರೆ ಅಂದ್ರೆ, ಎಲ್ಲಾ ಫೈಲುಗಳನ್ನು ಡಿಲೀಟ್ ಮಾಡಿ ಕಂಪ್ಯೂಟರಿನ ಕಾರ್ಯಾಚರಣಾ ತಂತ್ರಾಂಶವನ್ನು ಹೊಸತಾಗಿಸುವ ಕ್ರಿಯೆಯಾಗಿದೆ. ಆಗ ಅದರಲ್ಲಿದ್ದ ಡಾಕ್ಯುಮೆಂಟ್ ಸೇರಿದಂತೆ ಹಲವು ಫೈಲುಗಳು ಮತ್ತೆ ಸಿಗುವುದಿಲ್ಲ. ಆದರೆ, ಬೇರೆ ಡ್ರೈವ್‌ಗಳಲ್ಲಿ ಅಂದರೆ ಡಿ ಅಥವಾ ಇ ಡ್ರೈವ್‌ ನಲ್ಲಿ ಸೇವ್ ಆಗಿರುವ ಫೈಲ್ ಗಳು ಸುರಕ್ಷಿತವಾಗಿರುತ್ತವೆ. ಹಾಗಾಗಿ ಈ ಡ್ರೈವ್ ಬಳಸುವುದು ಉತ್ತಮ.

Leave A Reply

Your email address will not be published.