‘ವಿದ್ಯುತ್ ಗ್ರಾಹಕರ ಸಮಸ್ಯೆ’ ಆಲಿಸಲು 8 ಜಿಲ್ಲೆಗೆ ‘ವಾಟ್ಸಾಪ್ ಸಂಖ್ಯೆ ನೀಡಿದ ಬೆಸ್ಕಾಂ’

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಗ್ರಾಹಕರು ಇನ್ನು ಮುಂದೆ ವಾಟ್ಸಪ್ ಮೂಲಕವೇ ವಿದ್ಯುತ್ ಕುರಿತ ಸಮಸ್ಯೆಗಳು ಬಗೆಹರಿಸಿಕೊಳ್ಳಬಹುದು. ಈ ಸಂಬಂಧ ಬೆಸ್ಕಾಂ ಎಂಟು ಜಿಲ್ಲೆಗಳಲ್ಲಿ ವಾಟ್ಸಪ್ ಸಹಾಯವಾಣಿ ಸಂಖ್ಯೆ ಪರಿಚಯಿಸಿದೆ.ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರು ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ವಿದ್ಯುತ್ ಬಗೆಗಿನ ಸಮಸ್ಯೆಗಳ ಕುರಿತು ಫೋಟೊ, ವೀಡಿಯೊಗಳನ್ನು ಹಂಚಿಕೊಳ್ಳಬಹುದು ಅಥವಾ ಸಂದೇಶವನ್ನು ಕಳುಹಿಸಬಹುದು. ವಿದ್ಯುತ್ ಬಗ್ಗೆ ಕುಂದು ಕೊರತೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು.
ನಿಮ್ಮ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದಾಗ ವಾಟ್ಸಪ್‌ ಮೂಲಕ ತಿಳಿಸಿದರೆ ತ್ವರಿತವಾಗಿ ಬಗೆಹರಿಸಲು ಬೆಸ್ಕಾಂ ಅಧಿಕಾರಿಗಳು ಮುಂದಾಗಲಿದ್ದಾರೆ. ಗ್ರಾಹಕರಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸಲಿದ್ದಾರೆ. 8 ಬೆಸ್ಕಾಂ ಜಿಲ್ಲೆಗಳಿಗೆ ಮೀಸಲಾದ ವಾಟ್ಸಪ್‌ ಸಂಖ್ಯೆ ಹೀಗಿವೆ.

  1. ಬೆಂಗಳೂರು ನಗರ ಜಿಲ್ಲೆ ವಾಟ್ಸಪ್ ಸಂಖ್ಯೆ

ವಾಟ್ಸಪ್ ಸಹಾಯವಾಣಿ 82778 84011, 82778 84012, 82778 84013, 82778 84014.

  1. ಕೋಲಾರ ಜಿಲ್ಲೆ- 82778 84015
  2. ಚಿಕ್ಕಬಳ್ಳಾಪುರ -82778 84016
  3. ಬೆಂಗಳೂರು ಗ್ರಾಮಾಂತರ – 82778 84017
  4. ರಾಮನಗರ – 82778 84019
  5. ತುಮಕೂರು – 82778 84018
  6. ಚಿತ್ರದುರ್ಗ – 82778 84020
  7. ದಾವಣಗೆರೆ – 82778 84021 ಈ ಎಂಟು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯನ್ನು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಮಿಷನ್ ಲಿಮಿಟೆಡ್ (KPTCL) ಜವಾಬ್ದಾರಿ ವಹಿಸಿಕೊಂಡು 1 ಜೂನ್ 2002 ರಂದು ಕಾರ್ಯಾಚರಣೆ ಪ್ರಾರಂಭಿಸಿತು. ಈ ಮಧ್ಯೆ ಗ್ರಾಹಕರು ತಮ್ಮ ಬಾಕಿ ಬಿಲ್‌ನ ದುಪ್ಪಟ್ಟು ಮೊತ್ತ
    ಕಳೆದ ನವೆಂಬರ್ 1ರಂದೇ ಬೆಸ್ಕಾಂ ಬಿಲ್‌ಗಳ ಆನ್‌ಲೈನ್ ಪಾವತಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

Leave A Reply

Your email address will not be published.