ಮಂಗಳೂರು : ರಿಕ್ಷಾ ಬಾಂಬ್ ಬ್ಲಾಸ್ಟ್ ಪ್ರಕರಣ | NIA ತನಿಖೆಗೆ

ನಗರದ ನಾಗುರಿಯಲ್ಲಿ ನ.19ರಂದು ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದ ಶಾರೀಕ್‌, ಭಾರೀ ಜನಸಂದಣಿ ಇರುವ ಪ್ರದೇಶದಲ್ಲಿ ಬಾಂಬ್‌ ಸ್ಫೋಟಿಸಿ, ನೂರಾರು ಜನರ ಪ್ರಾಣ ಹಾನಿ ಉಂಟು ಮಾಡುವ ಉದ್ದೇಶ ಹೊಂದಿದ್ದಿರಬಹುದು ಎನ್ನುವ ಸಂಶಯವನ್ನು ಪೊಲೀಸರು ಹೊರಹಾಕಿದ್ದಾರೆ.ಅಲ್ಲದೆ, ಶಾರೀಕ್‌ ತಂದಿದ್ದ ಬಾಂಬ್‌ಗೆ ಭಾರೀ ಸ್ಫೋಟ ಉಂಟು ಮಾಡುವ ಶಕ್ತಿ ಹೊಂದಿದ್ದು, ಡಿಟೋನೇಟರ್‌ನ ಅಸಮರ್ಪಕ ಸಂಪರ್ಕದಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿ, ಆತನ ಗುರಿ ತಪ್ಪಿ ಮಾರ್ಗಮಧ್ಯೆ ನಾಗುರಿ ಬಳಿಯೇ ಬಾಂಬ್‌ ಸ್ಫೋಟಿಸಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಈ ನಡುವೆ ಮಂಗಳೂರು ನಗರದ ನಾಗುರಿಯಲ್ಲಿ ನ.19ರಂದು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಟಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಅತಿ ಶೀಘ್ರದಲ್ಲೇ ಎನ್‌ಐಗೆ ಹಸ್ತಾಂತರಿಸುವ ಕುರಿತಾಗಿ ಗ್ರಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. “ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಡಿಜಿಪಿ ಜೊತೆ ಮಂಗಳೂರು ನಗರಗಳಿಗೆ ಭೇಟಿ ನೀಡಿದ್ದು, ಸಚಿವರಾದ ಆರಗ ಜ್ಞಾನೇಂದ್ರ ರವರು, ಆಟೋ ಚಾಲಕನ ಜೊತೆ ಆಸ್ಪತ್ರೆಗೆ ತೆರಳಿ ಮಾತನಾಡಿದ್ದಾರೆ.

ಅಲ್ಲದೆ, ಈ ಸಂದರ್ಭ ಶಾರೀಕ್ ಬಗ್ಗೆ ಮಾಹಿತಿ ಪಡೆದು ಆರೋಪಿ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ಹಲವೆಡೆ ತಿರುಗಾಟ ನಡೆಸಿದ ಕುರಿತು ಜೊತೆಗೆ, ಪ್ರಕರಣದ ಕುರಿತಾಗಿ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿರುವ ಕುರಿತು ಮಾಹಿತಿ ನೀಡಿದ್ದಾರೆ.

ಫಾರೆನ್ಸಿಕ್ ತಜ್ಞರು ಕೂಡ ದಾಖಲೆ ಕಲೆ ಹಾಕಿದ್ದು, ಆರೋಪಿಯ ಹಿನ್ನೆಲೆ, ಫಂಡಿಂಗ್ ಜೊತೆಗೆ ಈ ಕೃತ್ಯಕ್ಕೆ ಸಾಥ್ ನೀಡುವವರ ಪತ್ತೆಗೆ ತನಿಖೆ ನಡೆಯುತ್ತಿದ್ದು, ಆರೋಪಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ ಜೊತೆಗೆ ಸುಮಾರು ಎಂಟು ಜನ ತಜ್ಞ ವೈದ್ಯರು ಇಬ್ಬರಿಗೂ ಚಿಕಿತ್ಸೆ ‌ಕೊಡುತ್ತಿದ್ದು , ಆರೋಪಿ ಮಾತನಾಡಲು ಶಕ್ತನಾದ ಬಳಿಕ ಮತ್ತಷ್ಟು ಮಾಹಿತಿ ದೊರೆಯುವ ಕುರಿತು ಸಚಿವ ಆರಗ ಜ್ಞಾನೇಂದ್ರ ರವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳೂರು ನಗರದ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ “ಆಟೋ ಡ್ರೈವರ್ ನ ಚಿಕಿತ್ಸಾ ವೆಚ್ಚವನ್ನೂ ಸರ್ಕಾರವೇ ಭರಿಸಲಿದ್ದು, ಉಳಿದ ಆರ್ಥಿಕ ಸಹಾಯದ ಬಗ್ಗೆ ಸಿಎಂ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ.

ಸ್ಥಳೀಯವಾಗಿ ಸಿಗುವ ವಸ್ತು ಜೋಡಿಸಿ ಬಾಂಬ್ ತಯಾರಿಸೋದರಲ್ಲಿ ಆರೋಪಿಗಳು ಪರಿಣಿತರಾಗಿದ್ದು, ಈ ಪ್ರಕರಣವನ್ನು ಎಲ್ಲಾ ಆಯಾಮದಿಂದ ಪೊಲೀಸರು ತನಿಖೆ ಮಾಡಲಿದ್ದು, ಪ್ರಾಣ ತೆಗೆದು ರಕ್ತ ದೋಕುಳಿ ಹರಿಸಲು ಹೊರಟ ಮತಾಂಧ ಶಕ್ತಿಗಳನ್ನು ಮಟ್ಟ ಹಾಕಬೇಕು. ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ನಮ್ಮ ಜೊತೆಗೆ ಇದ್ದು, ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನು ಬಂಧಿಸಲಾಗುತ್ತದೆ.

ಮಂಗಳೂರಿನಲ್ಲಿ ಎನ್.ಐ.ಎ ಕಚೇರಿ ಸ್ಥಾಪನೆ ಬಗ್ಗೆ ಕೂಡ ಕೇಂದ್ರ ಸರ್ಕಾರ ಕೂಡ ಸಮ್ಮತಿ ಸೂಚಿಸುವ ಸಾಧ್ಯತೆಗಳಿದೆ ಎಂದಿದ್ದಾರೆ.

ಕುಕ್ಕರ್ ಬ್ಲಾಸ್ಟ್ ಮಾಡುವ ದಿನ ಬೆಳಗ್ಗೆ ಮೈಸೂರಿನಿಂದ ಬಸ್‌ನಲ್ಲಿ ಬಂದಿದ್ದ ಶಾರೀಕ್‌, ಪಡೀಲ್‌ನಲ್ಲಿ ಇಳಿದಿದ್ದಾನೆ. ಅಲ್ಲಿ ಆಟೋ ಹತ್ತಿ, ಪಂಪ್‌ವೆಲ್‌ಗೆ ತೆರಳುವಂತೆ ಸೂಚಿಸಿದ್ದ ಎನ್ನಲಾಗಿದ್ದು, ಪಂಪ್‌ವೆಲ್‌, ಮಂಗಳೂರಿನ ಅತಿ ಮುಖ್ಯ ಹಾಗೂ ಜನನಿಬಿಡ ಪ್ರದೇಶವಾಗಿದೆ.

ನೆರೆಯ ಕೇರಳ, ರಾಜಧಾನಿ ಬೆಂಗಳೂರು ಹಾಗೂ ಉಡುಪಿ ಮೂಲಕ ಗೋವಾಕ್ಕೆ ತೆರಳುವ ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸಂಧಿಸುವ ಸ್ಥಳವಿದಾಗಿದ್ದು, ಜೊತೆಗೆ ನಗರಕ್ಕೆ ಪ್ರವೇಶಿಸುವ ಒಳದಾರಿ ಕೂಡ ಸಂಪರ್ಕ ಕೂಡ ಇದೆ. ಹೀಗಾಗಿ, ಇಲ್ಲಿ ಯಾವಾಗಲೂ ಜನರ ದಟ್ಟಣೆ ಇರುವುದರಿಂದ ಅಷ್ಟೆ ಅಲ್ಲದೆ, ಸಂಜೆಯ ವೇಳೆ, ಇಲ್ಲಿ ಜನರು ಹಾಗೂ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ , ಇಲ್ಲಿ ಬಾಂಬ್‌ ಸ್ಫೋಟವಾದರೆ ಅಪಾರ ಪ್ರಮಾಣದ ಸಾವು, ನೋವು ಸಂಭವಿಸುವ ಸಾಧ್ಯತೆ ದಟ್ಟವಾಗಿದ್ದು, ಆದರೆ ಅದೃಷ್ಟವಶಾತ್ ಆರೋಪಿಯ ಗುರಿ ತಪ್ಪಿ ಮಾಡಿದುನ್ನೋ ಮಹಾರಾಯ ಎಂಬ ಮಾತಿನಂತಾಗಿದೆ.

Leave A Reply

Your email address will not be published.