ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್’ ಆಕ್ಟಿವ್ ಇದೆ ? ಇಲ್ಲಿದೆ ತಿಳಿದುಕೊಳ್ಳುವ ಸುಲಭೋಪಾಯ

0 73

ಇತ್ತೀಚೆಗೆ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗೆ ಬಲೆ ಬೀಸುವಾಗ ಹೆಚ್ಚಾಗಿ ಸಿಮ್‌ಗಳು ನಕಲಿ ಹೆಸರಿನಲ್ಲಿ ಇರುತ್ತವೆ. ಕಿಡಿಗೇಡಿಗಳು ತಾವು ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ನಕಲಿ ಸಿಮ್ ಬಳಸಿ ಅಮಾಯಕರನ್ನು ಬಲಿಪಶು ಮಾಡುತ್ತಾರೆ. ಆದರೆ ಇದೀಗ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಆಕ್ಟಿವ್ ಇದೆ ಎಂದು ತಿಳಿದುಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಬಳಸುತ್ತಿದ್ದರೆ(ನಕಲಿ ಸಿಮ್) ಅದನ್ನು ಸುಲಭವಾಗಿ,ಬೇಗನೆ ತಿಳಿದುಕೊಳ್ಳುವ ಮಾರ್ಗವಿದೆ.

ಅದೇನೆಂದರೆ, ನಿಮ್ಮ ಆಧಾರ್ ಕಾರ್ಡ್ ಮೂಲಕ ಸಿಮ್ ಖರೀದಿಸಿ ಅಥವಾ ನೀವು ಇದೀಗ ಬಳಸುತ್ತಿರುವ ಸಿಮ್‌ಗೆ ನಿಮ್ಮ ಆಧಾರ್ ಐಡಿಯನ್ನು ಲಿಂಕ್ ಮಾಡಬೇಕು. ಇದರಿಂದ ನೀವು ‘ನಕಲಿ ಸಿಮ್’ ಜಾಲಕ್ಕೆ ಸಿಕ್ಕಿ ಹಾಕಿಕೊಂಡರೂ ಕೂಡ ಅದರ ಬಗ್ಗೆ ಬೇಗನೆ ತಿಳಿದುಕೊಂಡು ಜಾಗೃತರಾಗಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ನೂ, ಆಧಾರ್ ಕಾರ್ಡ್ ನ ಸಹಾಯದಿಂದ ನಿಮ್ಮ ಹೆಸರಿನಲ್ಲಿ ಮತ್ತೊಂದು ಸಿಮ್ ಆಕ್ಟೀವ್ ಆಗಿದೆಯೇ ಎಂದು ತಿಳಿಯಬಹುದಾಗಿದೆ. ಅದಕ್ಕಾಗಿ, ಮೊದಲು ದೂರಸಂಪರ್ಕ ಇಲಾಖೆಯ TAFCOP portal ಗೆ ಹೋಗಿ, ಇದೀಗ ಚಾಲ್ತಿಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು. ಬಳಿಕ OTP ರಿಕ್ವೆಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ, ಆನಂತರ ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ನಮೂದಿಸಬೇಕು. ಹಾಗೂ Validate. ಎಂಬುದನ್ನು ಕ್ಲಿಕ್ ಮಾಡಿ, ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲ್ಪಟ್ಟಿರುವ ಎಲ್ಲಾ ಮೊಬೈಲ್ ನಂಬರ್‌ಗಳನ್ನು ನೀವು ಅಲ್ಲಿ ವೀಕ್ಷಿಸಬಹುದು. ಅಷ್ಟೇ ಅಲ್ಲದೆ, ನೀವು ಬಳಸುತ್ತಿರುವ ಹಾಗೂ ಬಳಸದೆ ಇರುವ ಎಲ್ಲಾ ಮೊಬೈಲ್ ನಂಬರ್‌ಗಳನ್ನು ಕೂಡ ಪರಿಶೀಲಿಸಬಹುದು. ಮತ್ತು ನೀವು ಬಳಸದಿರುವ ಅಥವಾ ಬೇಡವಾದ ಮೊಬೈಲ್ ಸಂಖ್ಯೆಗಳನ್ನು ಇಲ್ಲಿ ರಿಪೋರ್ಟ್ ಮಾಡಬಹುದಾಗಿದೆ.

ಹಾಗೇ ಸಿಮ್ ವಿಚಾರದಲ್ಲಿ ನೀವು ಕೆಲವು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಿದೆ ಅದೇನೆಂದರೆ, ನಿಮ್ಮ ಹೆಸರಿನಲ್ಲಿರುವ ಸಿಮ್ ಒಂದು ವೇಳೆ ಕಳೆದುಹೋದರೆ ಆ ಕೂಡಲೇ ಟೆಲಿಕಾಂ ಕಂಪೆನಿಗೆ ತಿಳಿಸಿ ಸಿಮ್ ನ ಕಾರ್ಯವನ್ನು ಬ್ಲಾಕ್ ಮಾಡಿಸಬೇಕು. ಹಾಗೂ ನೀವು ಹೊಸ ಸಿಮ್ ಖರೀದಿಸುವಾಗ ಟೆಲಿಕಾಂ ಸಂಸ್ಥೆಯ ಅಧಿಕೃತ ಮಳಿಗೆಗಳಲ್ಲಿ ಖರೀದಿಸಿದರೆ ಉತ್ತಮ. ಆದರೆ ಈಗಾಗಲೇ ಆಕ್ಟೀವ್ ಆಗಿರುವ ಸಿಮ್ ಅನ್ನು ಮಾತ್ರ ಖರೀದಿಸಬೇಡಿ.

Leave A Reply