ಸೌತ್ ಸಿನಿಮಾ ಮಾಡಲ್ಲ ಎಂದಬಾಲಿವುಡ್ ನ ಖ್ಯಾತ ನಟ ಪಂಕಜ್ ತ್ರಿಪಾಠಿ !

ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಅಲ್ಲದೆ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು.

 

ವಿಶೇಷ ಎಂದರೆ ದಕ್ಷಿಣ ಭಾರತದ ಸಿನಿಮಾಗಳು ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಸೌತ್ ಸಿನಿಮಾಗಳ ಅಬ್ಬರ ಬಾಲಿವುಡ್ ಮಂದಿಯ ಮನಸ್ಸು ಗೆದ್ದಿದೆ. ದಕ್ಷಿಣ ಭಾರತದ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಹಿಟ್ ಆಗುತ್ತಿದ್ದಂತೆ ಬಾಲಿವುಡ್ ಮಂದಿ ದಕ್ಷಿಣ ಭಾರತದ ಸಿನಿಮಾರಂಗದ ಕಡೆ ಒಲವು ತೋರುತ್ತಿದ್ದಾರೆ.

ಪ್ರಸ್ತುತ ಸೌತ್ ಸಿನಿಮಾಗಳಲ್ಲಿ ನಟಿಸಲು ಬಾಲಿವುಡ್ ಸ್ಟಾರ್ಸ್ ಕೂಡ ಆಸಕ್ತಿ ತೋರುತ್ತಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಅಂತಹ ಸ್ಟಾರ್ ಕಲಾವಿದರೇ ಸೌತ್ ಸಿನಿ ಮಂದಿ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಬಾಲಿವುಡ್‌ನ ಖ್ಯಾತ ನಟ ಪಂಕಜ್ ತ್ರಿಪಾಠಿ ಸೌತ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಪಂಕಜ್ ಅವರೇ ಬಹಿರಂಗ ಪಡಿಸಿದ್ದಾರೆ.

ಹಿಂದಿ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಲ್ಲ ಎಂದು ಪಂಕಜ್ ಹೇಳಿದ್ದಾರೆ. ಈಗಾಗಲೇ ತೆಲುಗು ಮತ್ತು ಮಲಯಾಳಂ ಸಿನಿಮಾರಂಗದಿಂದ ಆಫರ್ ಬಂದಿದೆ ಆದರೂ ಮಾಡಲ್ಲ ಎಂದು ಹೇಳಿದ್ದಾರೆ.

ಅದಲ್ಲದೆ ಜೊತೆಗೆ ಕಾರಣ ಕೂಡ ರಿವೀಲ್ ಮಾಡಿದ್ದಾರೆ. ‘ ಯಾವುದೇ ಭಾಷೆ ನನಗೆ ಅಡ್ಡಿ ಆಗಲ್ಲ ಆದರೂ ನಾನು ಹಿಂದಿ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡುತ್ತೇನೆ. ನಾನು ಹಿಂದಿಯಲ್ಲಿ ತುಂಬಾ ಆರಾಮದಾಯಕವಾಗಿದ್ದೇನೆ. ನಾನು ಭಾಷೆಯನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಭಾವನೆಯನ್ನು ಅರ್ಥಮಾಡಿಕೊಳ್ಳಬಲ್ಲೆ ಎಂಬುದು ಬಲವಾದ ಕಾರಣ ಎಂದಿದ್ದಾರೆ.

ನನಗೆ ತೆಲುಗು ಮತ್ತು ಮಲಯಾಳಂ ಸಿನಿಮಾರಂಗದಿಂದ ಆಫರ್ ಗಳು ಬರುತ್ತಿವೆ. ಆದರೆ ನನಗೆ ಆ ಸಿನಿಮಾಗಳಿಗೆ ನಾನು ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಯಾಕೆಂದರೆ ನನಗೆ ಆ ಭಾಷೆ ಮಾತಾಡಲು ಸಾಧ್ಯವಾಗುವುದಿಲ್ಲ’ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

‘ಬೇರೆ ಭಾಷೆಯಲ್ಲಿ ನನಗೆ ಭಾವನೆಯನ್ನು ಹೊರತರಲು ಸಾಧ್ಯವಾಗುವುದಿಲ್ಲ. ಯಾರಾದರೂ ನನಗೆ ಹಿಂದಿ ಮಾತನಾಡುವ ಪಾತ್ರವನ್ನು ನೀಡಿದರೆ ನಾನು ಯಾವುದೇ ಭಾಷೆಯ ಸಿನಿಮಾದಲ್ಲಾದರೂ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ ಹಿಂದಿಯಲ್ಲಿ ಅನೇಕ ಸಿನಿಮಾಗಳಲ್ಲಿ ನಿರತನಾಗಿದ್ದೇನೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಅದಲ್ಲದೆ ಹಾಲಿವುಡ್ ಅಥವಾ ಇತರ ಭಾಷೆಯ ಚಲನಚಿತ್ರಗಳನ್ನು ಮಾಡಲು ಸಮಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ.

Leave A Reply

Your email address will not be published.