ಗಾಯಗೊಂಡ ಬೆಕ್ಕು ತಾನಾಗಿ ಆಸ್ಪತ್ರೆ ಬಂದು ಚಿಕೆತ್ಸೆ ಪಡೆಯುವ ದೃಶ್ಯ! ವೀಡಿಯೋ ವೈರಲ್
ಪ್ರಾಣಿಗಳು ಮೂಕ ಜೀವಿ ಆದ್ದರಿಂದ ಮನುಷ್ಯನ ವಿದ್ಯಮಾನಗಳ ಅರಿವು ಅವುಗಳಿಗೆ ಸಹಜವಾಗಿ ಇರುವುದಿಲ್ಲ. ಮತ್ತು ಪ್ರಾಣಿಗಳ ಬದುಕಿಗೂ, ಮನುಷ್ಯನ ಬದುಕಿಗೂ ಎಷ್ಟೋ ವ್ಯತ್ಯಾಸಗಳು ಇವೆ. ಆದರೆ ಇಲ್ಲೊಂದು ಬೆಕ್ಕು ತನಗೆ ಗಾಯ ಆಗಿದೆ ಎಂದು ಆಸ್ಪತ್ರೆ ಒಳಗೆ ಬಂದಿದೆ.
ಹೌದು ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿದ್ದರು. ಅಚನಾಕ್ಕಾಗಿ ಅಲ್ಲಿಗೆ ಬೆಕ್ಕೊಂದು ಗಾಯಗೊಂಡು ಪ್ರವೇಶವಾಗಿತ್ತು. ಈ ರೋಗಿಯನ್ನು ಕಂಡ ಕೂಡಲೇ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದರು. ಕಾಲಿಗೆ ಗಾಯಗೊಂಡು ಕುಂಟುತ್ತಾ ಈ ಬೆಕ್ಕು ಆಸ್ಪತ್ರೆಯೊಳಗೆ ಪ್ರವೇಶಿಸಿತ್ತು.
ಪೂರ್ವ ಟರ್ಕಿಯ ತತ್ವಾನ್‌ನಲ್ಲಿರುವ ಬಿಟ್ಲಿಸ್ ತಟ್ವಾನ್ ಸ್ಟೇಟ್ ಆಸ್ಪತ್ರೆಯಲ್ಲಿ ಸೆರೆಯಾದ ದೃಶ್ಯ ಆಗಿದೆ . ಕುಂಟುತ್ತಾ ಆಸ್ಪತ್ರೆಯೊಳಗೆ ಬರುವ ಬೆಕ್ಕಿನ ಈ ವಿಡಿಯೋ ಈಗ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.
ಆಸ್ಪತ್ರೆಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಅಸಹಾಯಕ ಬೆಕ್ಕು ಬರುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ. ತನಗಾದ ಗಾಯಕ್ಕೆ ಚಿಕಿತ್ಸೆ ಪಡೆಯಲು ವೈದ್ಯರನ್ನು ಹುಡುಕುವಂತೆ ಈ ಬೆಕ್ಕು ಹೆಜ್ಜೆ ಇಡುತ್ತಿತ್ತು. ಹೀಗೆ ಕಾಲಿಗೆ ಏಟು ಮಾಡಿಕೊಂಡು ಕುಂಟುತ್ತಿದ್ದ ಬೆಕ್ಕನ್ನು ಕಂಡ ತಕ್ಷಣ ಆಸ್ಪತ್ರೆ ಸಿಬ್ಬಂದಿ ಇದರ ಸಹಾಯಕ್ಕೆ ಧಾವಿಸಿದ್ದರು. ಅಲ್ಲೇ ಇದ್ದ ತಾಯಿ ಹೃದಯದ ವೈದ್ಯಕೀಯ ಸಿಬ್ಬಂದಿಯೊಬ್ಬರು ಬೆಕ್ಕಿಗೆ ಚಿಕಿತ್ಸೆ ನೀಡಿದ್ದರು. ಕುರ್ಚಿಯಲ್ಲಿ ಬೆಕ್ಕನ್ನು ಕುಳ್ಳಿರಿಸಿ ಚಿಕಿತ್ಸೆ ನೀಡುವ ಈ ದೃಶ್ಯವನ್ನೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಬೆಕ್ಕು ಹೇಗೆ ಗಾಯಗೊಂಡಿತ್ತು ಎಂದು ಗೊತ್ತಾಗಿಲ್ಲ. ಬಳಿಕ ಈ ಬೆಕ್ಕು ಅಲ್ಲಿಂದ ಹೋಗಿದೆ. ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ಬಲು ಆಸಕ್ತಿಯಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಜತೆಗೆ, ಬೆಕ್ಕಿಗೆ ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿರುವುದಕ್ಕೂ ಖುಷಿ ವ್ಯಕ್ತಪಡಿಸಿದ್ದಾರೆ. ಈಗ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿಯೂ ವೈರಲ್ ಆಗುತ್ತಿದೆ. ಇಂತಹ ದೃಶ್ಯಗಳನ್ನು ಕಂಡಾಗ ಸಹಜವಾಗಿಯೇ ಖುಷಿಯಾಗುತ್ತದೆ.