Rishabh Shetty : ರಶ್ಮಿಕಾ ಮಂದಣ್ಣ ಮಾಡಿದ ರೀತಿಯಲ್ಲೇ ಉತ್ತರ ಕೊಟ್ಟ ರಿಷಭ್ | ಭಲೇ ಎಂದ ನೆಟ್ಟಿಗರು !

0 39

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ದೊಡ್ಡ ಹೆಸರು ಗಳಿಸಿದ ಬಳಿಕ ತಾನು ನಡೆದು ಬಂದ ಹಾದಿಯ ಜೊತೆಗೆ ರಶ್ಮಿಕಾ ತಾನು ಏರಿದ ಮೆಟ್ಟಿಲನ್ನೇ ಕಾಲಲ್ಲಿ ತಳ್ಳಿದ್ದು ಮಾತ್ರವಲ್ಲ, ಆ ಬಗ್ಗೆ ವ್ಯಂಗ್ಯದಲ್ಲಿ ಉತ್ತರಿಸುತ್ತಿರುವ ನಟಿ ಅನೇಕ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.

ರಶ್ಮಿಕಾಗೆ ಅವರದ್ದೆ ಶೈಲಿಯಲ್ಲಿ ಮುಟ್ಟಿ ನೋಡಿ ಕೊಳ್ಳುವ ರೀತಿಯಲ್ಲಿ ರಿಷಬ್‌ ಟಾಂಗ್ ಕೊಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಇದಕ್ಕೆ ದೊಡ್ದ ಮಟ್ಟದಲ್ಲಿ ಬೆಂಬಲ ನೀಡಿದ್ದಾರೆ. ಬೆಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಹುಡುಗಿಯ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸಿದ ಕಿರಿಕ್ ಪಾರ್ಟಿ ಸಿನಿಮಾ ರಿಷಬ್ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ಹೀರೋ ಆಗಿ ತೆರೆ ಹಚ್ಚಿಕೊಂಡಿದ್ದರು. ಈ ಸಿನಿಮಾ ಮೂಲಕ ಭರ್ಜರಿ ಯಶಸ್ಸನ್ನು ಗಳಿಸಿಕೊಂಡದ್ದು ಮಾತ್ರವಲ್ಲದೇ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನೇಮ್, ಫೇಮ್ ಪಡೆದುಕೊಂಡು ಬಿಟ್ಟಿದ್ದರು.

ಕಿರಿಕ್ ಪಾರ್ಟಿಯಲ್ಲಿನ ಆಕೆಯ ನಟನೆಯ ವೈಖರಿ, ಸ್ಮೈಲ್ಗೆ ಜನ ಫಿದಾ ಆಗಿಬಿಟ್ಟಿದ್ದರು. ಕಿರಿಕ್ ಪಾರ್ಟಿ ಬಳಿಕ, ಸಾಲು ಸಾಲು ಸಿನಿಮಾಗಳು ರಶ್ಮಿಕಾ ಅವರನ್ನು ಅರಸಿ ಬಂದಿದ್ದು ಮಾತ್ರವಲ್ಲದೇ ಬಹುಬಾಷಾ ನಟಿಯಾಗಿ ಹೊರಹೊಮ್ಮಲು ಅವಕಾಶದ ಬಾಗಿಲು ತೆರೆದು ಕೊಂಡಿತ್ತು. ವಿಜಯ ದೇವರಕೊಂಡ ಅವರ ಜೊತೆ ನಟಿಸಿದ ಗೀತ ಗೋವಿದಂ’ ಹಿಟ್ ಆದ ಬಳಿಕ, ಈಕೆ ಸೌತ್ ಇಂಡಿಯನ್ ಸ್ಟಾರ್ ನಟಿಯಾಗಿ ಮಿಂಚಿ, ಬಾಲಿವುಡ್‌ ಸಿನಿಮಾಗಳಲ್ಲೂ ಆಫರ್‌ ಮೇಲೆ ಆಫರ್ ಬರಲಾರಂಭಿಸಿತ್ತು.

ಇವೆಲ್ಲದರ ನಡುವೆ ಕಿರಿಕ್ ಪಾರ್ಟಿ ಹೀರೋ ಕಂ ಪ್ರೊಡ್ಯೂಸರ್ ರಕ್ಷಿತ್ ಶೆಟ್ಟಿ ಜೊತೆ ಪ್ರೇಮದ ಅನುರಾಗ ಅರಳಿ ಎಂಗೇಜ್‌ಮೆಂಟ್ ಕೂಡ ನಡೆದು, ಆಮೇಲೆ ದಿಡೀರ್ ಎಂದು ಬ್ರೇಕ್ ಅಪ್ ಕೂಡ ಆಗಿ ಬಿಟ್ಟಿತ್ತು. ಹಾ!!.ಇದೆಲ್ಲ ವೈಯಕ್ತಿಕ ಬದುಕಿನ ವಿಚಾರ!. ಅವರ ಖಾಸಗಿ ವಿಚಾರದಲ್ಲಿ ನಾವು ಇಣುಕೋದು ಬೇಡ !!ಆದರೆ, ಸಾಮಾನ್ಯವಾಗಿ ತಮ್ಮ ಮೊದಲ ಸಿನಿಮಾದ ಬಗ್ಗೆ ಜೊತೆಗೆ ಏನೇ ಮನಸ್ತಾಪ ಇದ್ದರೂ ಕೂಡ ಹೆಚ್ಚಿನವರು ತಮಗೆ ಅವಕಾಶ ಕೊಟ್ಟವರನ್ನು ಕೃತಜ್ಞತೆಯಿಂದಲೇ ನೆನೆಯುತ್ತಾರೆ.

ಆದರೆ ಇತ್ತೀಚೆಗೆ ರಶ್ಮಿಕಾ ಮಾತ್ರ ‘ಕರ್ಲಿ ಟೇಲ್ಸ್’ ಯೂಟ್ಯೂಬ್ ಚಾನೆಲ್‌ಗೆ (YouTube Channel) ನೀಡಿದ ಸಂದರ್ಶನದಲ್ಲಿ ತನ್ನ ಮೊದಲ ಸಿನಿಮಾದ ಹೆಸರು ಹೇಳಲು ಕೂಡ ಹಿಂದು ಮುಂದು ನೋಡುತ್ತಿದ್ದರು. ಅಷ್ಟೇ ಅಲ್ಲ!!!. ಕೋಟ್ ಅನ್ನುವ ಸನ್ನೆಯ ಮೂಲಕ ಸಿನಿಮಾ ಹೆಸರು ಹೇಳದೇ ವ್ಯಂಗ್ಯ ಕೂಡ ಮಾಡಿದ್ದಾರೆ. ತಾನು ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ‘ಕಿರಿಕ್ ಪಾರ್ಟಿ’ ತಂಡ ತನ್ನ ಹಿಂದೆ ದುಂಬಾಲು ಬಿದ್ದು, ನಟಿಸುವಂತೆ ಕೇಳಿಕೊಂಡಿದ್ದು ಸಾಲದು ಎಂಬಂತೆ ಮನಸ್ಸು ನೋಯುವ ರೀತಿ ಕಮೆಂಟ್ ಮಾಡಿದ್ದಾರೆ.

ಆ ಬಳಿಕ ವಿಪರೀತ ವಿರೋಧ ವ್ಯಕ್ತವಾದಾಗ ತನ್ನ ಮಾತನ್ನು ತಿರುಚಲಾಗಿದೆ ಎಂದು ಫೀಲಿಂಗ್‌ನಲ್ಲಿ ಲೆಟರ್ ಬರೆದು ಸೋಷಿಯಲ್ ಮೀಡಿಯಾದಲ್ಲಿ (Social Media) ರಶ್ಮಿಕಾ ಪ್ರಕಟಿಸಿದ್ದರು. ಇನ್ನೊಂದೆಡೆ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸೂಪರ್ ಡೂಪರ್ ಹಿಟ್ ಆಗಿ ಎಲ್ಲೆಡೆಯೂ ಪ್ರಶಂಸನೀಯ ಮಾತುಗಳು ಕೇಳಿಬರುತ್ತಿವೆ. ಬಾಲಿವುಡ್, ಸೌತ್‌ ಇಂಡಿಯನ್‌ ಇಂಡಸ್ಟ್ರಿಯ ಮಂದಿಯೆಲ್ಲ (South Cine Industry) ಸಿನಿಮಾವನ್ನು ಹಾಡಿ ಹೊಗಳಿದ್ದು ಮಾತ್ರವಲ್ಲ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಕಾಂತಾರ ಸಿನಿಮಾ ಮೂಡಿ ಬಂದು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಆದರೆ ತನಗೆ ಮೊದಲನೇ ಸಿನಿಮಾದಲ್ಲಿ ಅವಕಾಶ ನೀಡಿದ ನಿರ್ದೇಶಕನ ಸಿನಿಮಾದ ಬಗ್ಗೆ ರಶ್ಮಿಕಾ ಮಾತ್ರ ತುಟಿಕ್ ಪಿಟಿಕ್ ಅಂದಿಲ್ಲ. ಈ ಬಗ್ಗೆ ರಿಷಬ್‌ ಬಳಿ ಕೇಳಿದಾಗ ಅವರು ನಾರ್ಮಲ್(Normal) ಆಗಿಯೇ ಪ್ರತಿಕ್ರಿಯೆ ನೀಡಿದ್ದು, ಎಲ್ಲಿಯೂ ಕೂಡ ರಶ್ಮಿಕಾ ಬಗ್ಗೆ ನೆಗೆಟಿವ್ ಆಗಿ ಮಾತಾಡಿಲ್ಲ.

ಆದರೆ ಯಾವಾಗ ರಶ್ಮಿಕಾ ಕಿರಿಕ್ ಪಾರ್ಟಿ ಬಗ್ಗೆ ಕೇವಲವಾಗಿ ಮಾತನಾಡಲು ಶುರು ಮಾಡಿದ್ದರೋ ರಿಷಬ್‌ ಕೂಡ ಆಕೆಯ ಸ್ಟೈಲಲ್ಲೇ(Style) ಆಕೆಗೆ ನಾಟುವಂತೆ ತಿರುಗೇಟು ನೀಡಿದ್ದಾರೆ. ಗುಲ್ಟಿ ಡಾಟ್ ಕಾಮ್ ಯೂಟ್ಯೂಬ್ ಸಂದರ್ಶನದಲ್ಲಿ ರಶ್ಮಿಕಾ ಹೆಸರು ಹೇಳದೇ ಆಕೆಯ ಸ್ಟೈಲ್‌ನಲ್ಲೇ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ ಅಲ್ಲದೆ, ಯಾರ ಜೊತೆಗೆ ನಟಿಸ್ತೀರಾ ಎನ್ನುವ ಪ್ರಶ್ನೆಗೆ ರಿಷಬ್ ಉತ್ತರಿಸಿದ ರೀತಿಗೆ ನೆಟ್ಟಿಗರು ಅಂತು ಫುಲ್ ಖುಷ್ ಆಗಿದ್ದಾರೆ. ‘ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ನಾನು ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡುತ್ತೇನೆ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ ಕೋಟ್ ಥರ ಸನ್ನೆ ಮಾಡಿ) ನಟಿಯರು ನನಗೆ ಇಷ್ಟ ಇಲ್ಲ’ ಅಂತ ರಿಷಬ್ ಹೇಳಿ ತನಗೆ ಟಾಂಗ್ ಕೊಟ್ಟ ನಟಿಗೆ ಮುಟ್ಟಿ ನೋಡಿ ಕೊಳ್ಳುವ ರೀತಿಯಲ್ಲಿ ಉತ್ತರ ನೀಡಿದ್ದಾರೆ.ಮಾತು ಮುಂದುವರೆಸಿದ ರಿಷಬ್ ಶೆಟ್ಟಿ, ‘ಸಮಂತಾ ಹಾಗೂ ಸಾಯಿ ಪಲ್ಲವಿ ಅಭಿನಯ(Acting) ಬಹಳ ಇಷ್ಟ ‘ಎಂದು ಹೇಳಿದ್ದು, ಸಮಂತಾ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ(God) ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

Leave A Reply